ತರಕಾರಿ ಮಾರಲು ಹೋದ ದಂಪತಿ ಪ್ರವಾಹಕ್ಕೆ ಸಿಲುಕಿ ಸಾವು!

By Ravi Nayak  |  First Published Jul 27, 2022, 5:04 PM IST

ತರಕಾರಿ ಮಾರಾಟಕ್ಕೆ ತೆರಳಿದ್ದ ದಂಪತಿಗಳಿಬ್ಬರು ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋದ ಘಟನೆ ನೆರೆಯ ತೆಲಂಗಾಣದಲ್ಲಿ ಸಂಭವಿಸಿದೆ.


ಕಲಬುರಗಿ (ಜು. 27) : ತರಕಾರಿ ಮಾರಾಟಕ್ಕೆ ತೆರಳಿದ್ದ ದಂಪತಿಗಳಿಬ್ಬರು ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋದ ಘಟನೆ ನೆರೆಯ ತೆಲಂಗಾಣದಲ್ಲಿ ಸಂಭವಿಸಿದ್ದು, ಮೃತ ದಂಪತಿಗಳ‌ ಶವ ಕಲಬುರಗಿ ಜಿಲ್ಲೆಯ ಕಾಗಿಣಾ ನದಿಯಲ್ಲಿ ಪತ್ತೆಯಾಗಿವೆ.  ಕಲಬುರಗಿ(kalaburagi) ಜಿಲ್ಲೆಯ ಚಿಂಚೋಳಿ(Chincholi) ತಾಲ್ಲೂಕಿನ ಜೆಟ್ಟೂರ್(Jettoor) ಗ್ರಾಮದ ಬಳಿ ಕಾಗಿಣಾ ನದಿಯ(Kaagina river)ಲ್ಲಿ ಇಂದು ಬೆಳಗ್ಗೆ ಒಂದು ಮಹಿಳೆಯ ಶವ ಪತ್ತೆಯಾಗಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಸ್ವಲ್ಪ ದೂರದಲ್ಲಿ ಮತ್ತೊಂದು ಪುರುಷನ ಶವ ಪತ್ತೆಯಾಗಿತ್ತು. 

ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ 14 ದಿನಗಳ ಬಳಿಕ ರಸ್ತೆಯಲ್ಲಿ ಬಿಂದಾಸ್ ಓಡಾಟ!

Tap to resize

Latest Videos

ಸುಲೇಪಠ ಪೊಲೀಸರು(Sulepath Police) ಘಟನಾ ಸ್ಥಳಕ್ಕೆ ಧಾವಿಸಿ ಸ್ಥಳಿಯರ ಸಹಕಾರದೊಂದಿಗೆ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗಲೇ ಮೃತ ದಂಪತಿಗಳ ಮಗ ಬಂದು ಇವರು ನಮ್ಮ ತಂದೆ ತಾಯಿ ಎಂದು ಗುರುತಿಸಿದ್ದಾನೆ. 

ತೆಲಂಗಾಣದಲ್ಲಿ ಕೊಚ್ಚಿ ಹೋಗಿದ್ರು:

ತೆಲಂಗಾಣ(Telangana)ದಲ್ಲಿ ನಿನ್ನೆ ಭಾರಿ ಮಳೆ ಸುರಿದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತೆಲಂಗಾಣ ರಾಜ್ಯದ ತಾಂಡೂರ ತಾಲೂಕಿನ ಬಸಿರಾಬಾದ(Basirabadh)ನಲ್ಲಿ ತರಕಾರಿ ಮಾರಿ ಮನೆಗೆ ಹೊರಟಿದ್ದ ದಂಪತಿಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ತಾಂಡೂರು(Tandooru) ತಾಲೂಕಿನ ಮಂತಟ್ಟಿ(Mantatti) ಗ್ರಾಮದ 60 ವರ್ಷದ ಬುಗ್ಗಪ್ಪ(Buggappa) ಮತ್ತು 55 ವರ್ಷದ ಯಾದಮ್ಮ(Yadamma) ಎನ್ನುವವರು ನದಿಯಲ್ಲಿ ಕೊಚ್ಚಿ ಹೋದವರು.  ನದಿ ತುಂಬಿ ಹರಿಯುತ್ತಿದ್ದ ಕಾರಣ ಇವರ ಪತ್ತೆ ಕಾರ್ಯದ ಪ್ರಯತ್ನ ಫಲ ನೀಡಿರಲಿಲ್ಲ. 

ಚಿಂಚೋಳಿಗೆ ಬಂದ ಶವ:

ತುಮಕೂರಿನಲ್ಲಿ ಮಳೆ ಅವಾಂತರ: ಚರಂಡಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ

ಇದೇ ದಂಪತಿಗಳ ಶವ ತುಂಬಿ ಹರಿದ ಕಾಗಿಣಾ ನದಿಯಲ್ಲಿ ತೇಲಿ ಬಂದಿದ್ದು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಜೆಟ್ಟೂರು ಬಳಿ ಶವ ಪತ್ತೆಯಾಗಿವೆ.  ನಿನ್ನೆ ತಡರಾತ್ರಿ ಪತ್ನಿ ಯಾದಮ್ಮಳ ಶವ ಪತ್ತೆಯಾಗಿದ್ದು, ಇಂದು ಪತಿ ಬುಗ್ಗಪ್ಪ ಶವ ಕಾಣಿಸಿಕೊಂಡಿದೆ. 

ಸುಲೇಪೇಠ ಪೊಲೀಸ್ ಠಾಣೆಯಲ್ಲಿ(Sulepath Police Station) ದೂರು ದಾಖಲಾಗಿದ್ದು, ಮೃತರ ಮರಣೋತ್ತರ ಪರೀಕ್ಷೆ ಸುಲೇಪೇಠ ಸರಕಾರಿ ಆಸ್ಪತ್ರೆ(Sulepath Gov Hospital)ಯಲ್ಲಿ ನಡೆಸಲಾಗಿದೆ. ನಂತರ ಶವಗಳನ್ನು ಅವರ ವಾರಸುದಾರರಿಗೆ ಒಪ್ಪಿಸಲಾಗಿದ್ದು, ಕುಟುಂಬದವರು ದಂಪತಿಗಳಿಬ್ಬರ ಶವಗಳನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ.

click me!