ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ವಿಳಂಬ; ಕೃಷಿ ಇಲಾಖೆಗೆ ಬೀಗ ಜಡಿದ ರೈತರು

By Ravi NayakFirst Published Jul 27, 2022, 5:49 PM IST
Highlights
  • ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ನೀಡಲು ಕೋಟೆನಾಡಿನ ಅನ್ನದಾತರು ಅಗ್ರಹ.
  • ಕೃಷಿ ಇಲಾಖೆಗೆ ಬೀಗ ಹಾಕಿ, ಪೊಲೀಸರು ಹಾಗೂ ಅಧಿಕಾರಿಗಳ ನಡುವೆ ರೈತರ ವಾಗ್ವಾದ.
  • ಕೃಷಿ ಅಧಿಕಾರಿಗಳು ಬೆಳೆ ವಿಮೆ ವಂಚನೆ ಯಲ್ಲಿ ಭಾಗಿಯಾಗಿದ್ದಾರೆಂದು ರೈತರು ಆರೋಪ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಕೊಪ್ಪಳ (ಜು.27) : ಈ ವರ್ಷವೂ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಸಾಕಷ್ಟು ಕಡಲೆ ಬೆಳೆ ಬೆಳೆದಿದ್ದರು. ಅದಕ್ಕೆ ಫಸಲ್ ಭೀಮಾ ಯೋಜನೆಯಡಿ ಸಾವಿರಾರು ರೈತರು ವಿಮೆಯನ್ನು ತುಂಬಿದ್ದರು‌. ಆದರೆ ಅಕಾಲಿಕ ಮಳೆ ರೈತರು ಬೆಳೆದ ಫಸಲಿಗೆ ವಿಲನ್ ಆಗಿತ್ತು‌. ಪರಿಣಾಮ ಸರಕಾರ ಸ್ಪಂದಿಸದಿದ್ದಾಗ ಜಿಲ್ಲೆಯ ರೈತರು ಇಂದು ಬೀದಿಗಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೇಗಿತ್ತು ರೈತರ ಆಕ್ರೋಶ? ಆ ಕುರಿತು ಒಂದು ವರದಿ ಇಲ್ಲಿದೆ.

ಮಂಗಳೂರು; Pradhan Mantri Fasal Bima Yojanaಗೆ ಹೆಸರು ನೋಂದಾಯಿಸಲು ಸೂಚನೆ

Latest Videos

 ಬೀಗ ಜಡಿದ ಕೃಷಿ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾಧಿಕಾರಿಯಿದ್ದರೂ ಕೇರ್ ಮಾಡದೆ ಕೃಷಿ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡು ರೈತರು, ಖಾಸಗಿ ವಿಮಾ ಕಂಪನಿಯ ಸಿಬ್ಬಂದಿಗೆ ದಿಗ್ಬಂಧನ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ(Chitradurga Distric Collector) ಬಳಿ. ಬೆಳೆ ವಿಮೆ ಸಮರ್ಪಕವಾಗಿ ನೀಡದ್ದಕ್ಕೆ ಇಂದು ಬೆಳಗ್ಗೆ ಮೊದಲು ಜಂಟಿ ಕೃಷಿ ಅಧಿಕಾರಿಗಳ ಕಾರ್ಯಾಲಯಕ್ಕೆ ಬೀಗ ಜಡಿದ ರೈತರು, ನಂತರ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಅವರ ಜೊತೆಗೆ ರೈತರ ವಾಗ್ವಾದವೂ ನಡೆಯಿತು. ಒಂದೇ ಸರ್ವೇಯಲ್ಲಿ ನಾಲ್ಕು ಜನ ರೈತರಿದ್ದರೆ ಇಬ್ಬರಿಗಷ್ಟೇ ಪರಿಹಾರ ಬಂದಿದೆ. ಉಳಿದ ರೈತರು ಎಲ್ಲಿ ಹೋಗಬೇಕು ? ಎಂದು ಜಿಲ್ಲೆಯಾದ್ಯಂತ ಬಂದಿದ್ದ ಸಮಸ್ಯೆ ಪೀಡಿತ ರೈತರು ಆಕ್ರೋಶ ವ್ಯಕ್ತಡಿಸಿದರು. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ರೈತಸಂಘ ಹಾಗೂ ಹಸಿರುಸೇನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾಳಾದ ಎಲ್ಲಾ ವಿಧದ ಬೆಳೆಗಳಿಗೆ ಪರಿಹಾರ ನೀಡಿದೆ. ಆದರೆ ಜಿಲ್ಲೆಯಾದ್ಯಂತ ಬೆರಣಿಕೆ ರೈತರಿಗೆ ಮಾತ್ರ ಪರಿಹಾರದ ಹಣ ಸಂದಾಯವಾಗಿದೆ. ಇದರಲ್ಲಿ ವಿಮಾ ಕಂಪನಿಯವರು ಅಧಿಕಾರಿಗಳ ಜೊತೆ ಶಾಮೀಲಾಗಿದ್ದಾರೆ ಎಂಬ ಆರೋಪ ರೈತರದ್ದು. ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡ್ಮೂರ ವರ್ಷಗಳಿಂದ ರೈತರು ಸಂಕಷ್ಟದಲ್ಲಿದ್ದೇವೆ. ಈ ವರ್ಷವೂ ಬೆಳೆದ ಬೆಳೆ ಜಿಡಿರು ಮಳೆಗೆ ಸಾಕಷ್ಟು ಹಾಳಾಗಿದೆ. ಈ ಸಂದರ್ಭದಲ್ಲಿ ವಿಮಾ ಕಂಪನಿಯವರು ವಿಮೆ ಹಣ ನೀಡದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಪ್ರತಿಭಟನೆ ವೇಳೆ ವಿಮಾ ಕಂಪನಿ ಸಿಬ್ಬಂದಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

Chitradurga: ಎರಡ್ಮೂರು ವರ್ಷಗಳಿಂದ ರೈತರಿಗೆ ತಲುಪದ ಬೆಳೆ ವಿಮೆ, ಫಸಲ್ ಭೀಮಾ‌ ಯೋಜನೆ

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ(Pradhan Mantri Fasal Bima Yojana)ಯಡಿ ಸಾಕಷ್ಟು ತೊಂದರೆಗಳಾಗಿವೆ. ಸರಕಾರ ಹಣ ಬಿಡುಗಡೆ ಮಾಡಿದರೂ ಖಾಸಗಿ ವಿಮಾ ಕಂಪನಿಗಳು ನೀಡುತ್ತಿಲ್ಲ. ಹಾಗಾಗಿ ಪರಿತಪಿಸುತ್ತಿರುವ ಕೋಟೆನಾಡಿನ ರೈತರಿಗೆ ಜಿಟಿ ಜಿಟಿ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಇಂಥ ಸಂದರ್ಭದಲ್ಲಿ ಆದಷ್ಟು ಬೇಗ ರೈತರ ಸಮಸ್ಯೆ ಇತ್ಯರ್ಥವಾಗಲಿ ಎಂಬುದೇ ನಮ್ಮ ಆಶಯ.

click me!