ಉಡುಪಿಯಲ್ಲಿ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ

Kannadaprabha News   | Asianet News
Published : May 15, 2020, 11:18 AM IST
ಉಡುಪಿಯಲ್ಲಿ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ

ಸಾರಾಂಶ

ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮನೆಮನೆಗೆ ಭೇಟಿ ನೀಡುತ್ತಿರುವ ಕೊರೋನಾ ವಾರಿಯರ್ಸ್‌ ಆಶಾ ಕಾರ್ಯಕರ್ತೆಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿನ ಬೀಜಾಡಿ ಗ್ರಾಮದಲ್ಲಿ ಗುರುವಾರ ನಡೆದಿದೆ

ಉಡುಪಿ(ಮೇ 15): ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮನೆಮನೆಗೆ ಭೇಟಿ ನೀಡುತ್ತಿರುವ ಕೊರೋನಾ ವಾರಿಯರ್ಸ್‌ ಆಶಾ ಕಾರ್ಯಕರ್ತೆಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿನ ಬೀಜಾಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಸರೋಜ ಎಂಬವರು ಕೊರೋನಾ ಜಾಗೃತಿಗಾಗಿ ಇಲ್ಲಿನ ಫಿಶರೀಸ್‌ ರಸ್ತೆಯ ಅನಂತ ಕಾಮತ್‌ ಅವರ ಮನೆಗೆ ಹೋಗಿದ್ದರು. ಅವರ ಮಗಳು ಬೆಂಗಳೂರಿನಿಂದ ಬಂದಿದ್ದು, ಕ್ವಾರಂಟೈನ್‌ ಮಾಡಿ ಜಾಗ್ರತೆ ವಹಿಸಲು ಸರೋಜ ಹೇಳಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಲೇ ಪ್ರಾಣಬಿಟ್ಟ ಕೊರೋನಾ ವಾರಿಯರ್ ಭೀಮಕ್ಕ..!

ಅದಕ್ಕೆ ಅನಂತ ಕಾಮತ್‌ ಅವರು ಪತ್ನಿ ಗೀತಾ ಜೊತೆ ಸೇರಿ ಪದೇಪದೇ ನಮ್ಮ ಮನೆಗೆ ಯಾಕೆ ಬರುತ್ತೀಯಾ ಎಂದು ಬೈದದ್ದಲ್ಲದೇ, ಇನ್ನೊಮ್ನೆ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಮತ್ತು ಸರೋಜ ಅವರ ಕೈಯಲ್ಲಿದ್ದ ದಾಖಲೆಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!