ಲಾಕ್‌ಡೌನ್‌ನಿಂದ ಕಂಗಾಲಾದ ರೈತರು| ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ಅನ್ನದಾತರ ಪರದಾಟ| ಬೆಲೆ ಕುಸಿತದಿಂದ ಮನನೊಂದ ರೈತನಿಂದ ಮೆಣಸಿನಕಾಯಿ ಬೆಳೆ ನಾಶ| ಮೆಣಸಿನಕಾಯಿ ದರದಲ್ಲಿ ದಿಢೀರ್ ಕುಸಿತಗೊಂಡಿದ್ದರಿಂದ ಮನನೊಂದು ಬೆಳೆನಾಶ|
ಹಾವೇರಿ(ಮೇ.15): ಕೊರೋನಾ ವೈರಸ್ ಹಿನ್ನೆಲೆ ಲಾಕ್‌ಡೌನ್ ಘೋಷಿಸಿದ್ದರಿಂದ ಕೃಷಿ ಕ್ಷೇತ್ರ ತತ್ತರಿಸಿದೆ. ರೈತ ಸಮೂಹವಂತೂ ಕಂಗಾಲಾಗಿದೆ. ಸಮರ್ಪಕ ಮಾರುಕಟ್ಟೆ ಕೊರತೆ ಹಾಗೂ ಬೆಲೆ ಕುಸಿತದಿಂದ ಮನನೊಂದ ರೈತನೋರ್ವ ಮೆಣಸಿನಕಾಯಿ ಬೆಳೆ ನಾಶಪಡಿಸಿದ ಘಟನೆ ಗುರುವಾರ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೂಖಪ್ಪ ದೇಸಾಹಳ್ಳಿ ಎಂಬ ರೈತನೋರ್ವ ತನ್ನ 6 ಎಕರೆ ಪ್ರದೇಶದಲ್ಲಿ ನೀರಾವರಿ ಬೆಳೆಯಾಗಿ ಮೆಣಸಿನಕಾಯಿ ಬೆಳೆದಿದ್ದರು. ಪ್ರತಿ ಕ್ವಿಂಟಲ್‌ಗೆ ಕನಿಷ್ಠ 2 ಸಾವಿರಗಳಷ್ಟಾದರೂ ದರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಇನ್ನೇನು ಕಟಾವು ಮಾಡಬೇಕೆನ್ನುಷ್ಟುವರಲ್ಲಿ ಲಾಕ್‌ಡೌನ್ ಘೋಷಿಸಿದ್ದರಿಂದ ಸಮರ್ಪಕ ಮಾರುಕಟ್ಟೆ ದೊರಕದೇ ಹಾಗೂ ಮೆಣಸಿನಕಾಯಿ ದರದಲ್ಲಿ ದಿಢೀರ್ ಕುಸಿತಗೊಂಡಿದ್ದರಿಂದ ಮನನೊಂದು ಬೆಳೆನಾಶ ಪಡಿಸಿದ್ದಾರೆ.
undefined
ಮೃತ ವೃದ್ಧನ ಸ್ವ್ಯಾಬ್ ತೆಗೆಯಲು ಶವದ ಗುಂಡಿಗೆ ಇಳಿದ ಶೋಭಾ; ಶಶಿಕಲಾ ಜೊಲ್ಲೆ ಮೆಚ್ಚುಗೆ
ಇಲ್ಲಿ ಕಟಾವುಗೊಂಡ ಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಪುಣೆ, ಮುಂಬೈ ಮಾರುಕಟ್ಟೆಗೆ ಕಳುಹಿಸುತ್ತಿದ್ದರು. ಆದರೆ ಲಾಕ್‌ಡೌನ್ ಘೋಷಿಸಿದ್ದರಿಂದ ಪುಣೆ, ಮುಂಬೈ ಮಾರುಕಟ್ಟೆ ಬಂದ್ ಮಾಡಿದ್ದರಿಂದ ಬೆಳೆದು ನಿಂತಿದ್ದ ಮೆಣಸಿಕಾಯಿ ಬೆಳೆಯನ್ನು ಕೊಳ್ಳುವವರೇ ಇಲ್ಲದಾಗಿದೆ.