ಮಂಗಳೂರು ಗೋಲಿಬಾರ್‌ನಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ರದ್ದು ಮಾಡಿಲ್ಲ: ಕಾರಜೋಳ

By Suvarna NewsFirst Published Dec 28, 2019, 2:35 PM IST
Highlights

ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ನೀಡುವ ಪರಿಹಾರವನ್ನ ರದ್ದು ಮಾಡಿಲ್ಲ| ಈ ವಿಚಾರವನ್ನ ಯಾರು ತಪ್ಪಾಗಿ ಅರ್ಥೈಸಬಾರದು| ಯಡಿಯೂರಪ್ಪ ಸತ್ಯ, ಅಸತ್ಯ ತಿಳಿದು ಪರಿಹಾರ ಕಾರ್ಯ ಮಾಡಿ ಎಂದು ಹೇಳಿದ್ದಾರೆ ಹೊರತು ಪರಿಹಾರವನ್ನ ರದ್ದು ಮಾಡಿ ಅಂತ ಹೇಳಿಲ್ಲ ಎಂದ ಕಾರಜೋಳ|

ವಿಜಯಪುರ(ಡಿ.28): ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ನೀಡುವ ಪರಿಹಾರವನ್ನ ರದ್ದು ಮಾಡಿಲ್ಲ, ಈ ವಿಚಾರವನ್ನ ಯಾರು ತಪ್ಪಾಗಿ ಅರ್ಥೈಸಬಾರದು.ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ ಕುಟಂಬಸ್ಥರನ್ನ ನಾವು ಭೇಟಿ ಮಾಡಿದ್ದೇವೆ. ನಾನು, ಸಿಎಂ ಯಡಿಯೂರಪ್ಪ ಹಾಗೂ ಗೃಹ ಮಂತ್ರಿ ಬೊಮ್ಮಾಯಿ ಭೇಟಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಶನಿವಾರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, 25 ದೃಶ್ಯಾವಳಿ ಸಮೇತ ನೀವು ಮಾಧ್ಯಮಗಳಲ್ಲಿ ಸುದ್ದಿಯನ್ನು ಪ್ರಸಾರ ಮೃತಪಟ್ಟವರು ಸಂಚಿನಲ್ಲಿದ್ದರು ಎಂಬ ಅನುಮಾನ ವ್ಯಕ್ತವಾಗಿತ್ತು, ಜನರು ಸಹ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಸತ್ಯ, ಅಸತ್ಯ ತಿಳಿದು ಪರಿಹಾರ ಕಾರ್ಯ ಮಾಡಿ ಎಂದು ಹೇಳಿದ್ದಾರೆ ಹೊರತು ಪರಿಹಾರವನ್ನ ರದ್ದು ಮಾಡಿ ಅಂತ ಹೇಳಿಲ್ಲ ಎಂದು ಗೋವಿಂದ ಕಾರಜೋಳ ಅವರು ಸ್ಪಷ್ಟಪಡಿಸಿದ್ದಾರೆ. 

ಸಚಿವ ಶ್ರೀರಾಮಲು ಅವರಿಗೆ ಡಿಸಿಎಂ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಹಾದಿ ಬೀದಿಯಲ್ಲಿ ಮಾತನಾಡಲು ನಮ್ಮದು ಪ್ರಾದೇಶಿಕ ಪಕ್ಷವಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು, ಸಿಎಂ ಅವರು ಸೇರಿ ತೀರ್ಮಾನಿಸುತ್ತಾರೆ. ಇವೆಲ್ಲ ಪಕ್ಷ ತೆಗೆದುಕೊಳ್ಳುವ ನಿರ್ಣಯಗಳಾಗಿವೆ. ಪಕ್ಷದಲ್ಲಿನ ಅನೇಕ ಹಿರಿಯ ನಾಯಕರು ಈ ಕುರಿತು ತೀರ್ಮಾನ ತೆಗೆದುಕೊಳ್ತಾರೆ. ನಾವು ಸುಮ್ಮನೆ ಹೇಳಿಕೆ ಕೊಡೋದು ಬಾಯಿಚಟ ಆಗುತ್ತೆ, ಹಾಗಾಗಿ ನಾನು ಇದರ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದ್ದಾರೆ. 

click me!