ಡಿ.ಕೆ.ಶಿವಕುಮಾರ್ ಯೇಸು ಕುಮಾರ್ ಆಗಲು ಹೊರಟಿದ್ದಾರೆ

By Kannadaprabha News  |  First Published Dec 28, 2019, 2:07 PM IST

ಯೇಸು ಪ್ರತಿಮೆ ನಿರ್ಮಾಣ ಮಾಡಲು ಹೊರಟಿರುವ ಡಿಕೆ ಶಿವಕುಮಾರ್ ಏಸು ಕುಮಾರ್ ಆಗಲು ಹೊರಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಸಂಬಂಧ ಹಲವು ಬಿಜೆಪಿ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.


ದಾವಣಗೆರೆ (ಡಿ.28):  ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಈಗ ಯೇಸು ಕುಮಾರ್ ಆಗಲು ಹೊರಟಿದ್ದಾರೆ ಎಂದು ಬಿಜೆಪಿ ಸಚಿವ ರೇಣುಕಾಚಾರ್ಯ ಹೇಳಿದರು. 

ದಾವಣಗೆರೆಯಲ್ಲಿ ಮಾತನಾಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಶಿವಕುಮಾರ್ ಅವರಿಗೆ ಅವರ ಅಪ್ಪ ಅಪ್ಪ ದೇವರ ಹೆಸರಿಟ್ಟಿದ್ದಾರೆ. ಅವರದ್ದು ಕಾಲಬೈರವ ವಂಶ ಆದರೀಗ ಯೇಸು ಕುಮಾರ್ ಆಗಲು ಹೊರಟಿದ್ದಾರೆ ಎಂದು ಹೇಳಿದರು. 

Tap to resize

Latest Videos

ಶಿವಕುಮಾರ್ ಯೇಸು ಕುಮಾರ್ ಆಗಲು ಹೊರಟಿರುವುದು ನಾಡಿನ ದುರ್ದೈವ. ಸರ್ಕಾರಿ ಜಾಗದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ಮಾಡಲು ಬಿಡುವುದಿಲ್ಲ ಎಂದರು. 

'ಕೃಷ್ಣ ರೀತಿ ದೇವೇಗೌಡ ಪಕ್ಷಾಂತರ ಮಾಡಿಲ್ಲ'...

ಸರ್ಕಾರದ ಗೋಮಾಣ ಜಾಗದಲ್ಲಿ ಯೇಸು ಪ್ರತಿಮೆ ಮಾಡಲು ಡಿಕೆ ಶಿವಕುಮಾರ್ ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರಿಗೆ ಇದಕ್ಕೆ ಅವಕಾಶ ನೀಡಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. 

click me!