ಮೈಸೂರು ದಸರಾಗೆ ಹೊಸರೂಪ ಬೇಕು: ಡಿ.ಕೆ.ಶಿವಕುಮಾರ್

By Kannadaprabha NewsFirst Published Oct 26, 2023, 7:00 AM IST
Highlights

ಮುಂದಿನ ದಿನಗಳಲ್ಲಿ ದಸರಾ ಸ್ವರೂಪ ಬದಲಾವಣೆ ಆಗಬೇಕು. 400 ವರ್ಷಗಳ ಪರಂಪರೆ ಉಳಿಸಿಕೊಂಡು ಬಂದಿದ್ದೇವೆ. ಮುಂದೆ ಸ್ತಬ್ಧಚಿತ್ರ ವಿಭಾಗದಲ್ಲಿ ಪ್ರತಿ ಜಿಲ್ಲೆಯಲ್ಲೂ ಸ್ಪರ್ಧೆ ನಡೆಯಬೇಕು. ಇತಿಹಾಸ ಉಳಿಸಿಕೊಂಡೇ ದಸರಾಗೆ ಹೊಸ ರೂಪ ಕೊಡಬೇಕಿದೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

ಮೈಸೂರು(ಅ.26): ಮೈಸೂರು ದಸರಾಗೆ ಹೊಸ ಸ್ವರೂಪ ಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ದಸರಾ ಸ್ವರೂಪ ಬದಲಾವಣೆ ಆಗಬೇಕು. 400 ವರ್ಷಗಳ ಪರಂಪರೆ ಉಳಿಸಿಕೊಂಡು ಬಂದಿದ್ದೇವೆ. ಮುಂದೆ ಸ್ತಬ್ಧಚಿತ್ರ ವಿಭಾಗದಲ್ಲಿ ಪ್ರತಿ ಜಿಲ್ಲೆಯಲ್ಲೂ ಸ್ಪರ್ಧೆ ನಡೆಯಬೇಕು. ಇತಿಹಾಸ ಉಳಿಸಿಕೊಂಡೇ ದಸರಾಗೆ ಹೊಸ ರೂಪ ಕೊಡಬೇಕಿದೆ ಎಂದರು.

ದಸರಾ ಆನೆಗಳ ತೂಕ ಪರೀಕ್ಷೆ: ಅಂಬಾರಿ ಹೊತ್ತ ಅಭಿಮನ್ಯುವಿನ ತೂಕ ಈಗ ಎಷ್ಟಿದೆ ಗೊತ್ತಾ?

ಹೊಸ ರೀತಿಯ ಜತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡಬೇಕು. ಮೈಸೂರಿಗೆ ಬರುವ ಅತಿಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ದಸರಾ ಮೈಸೂರಿಗೆ ಮಾತ್ರ ಸೀಮಿತವಾಗಲು ಬಿಡಲು ಸಾಧ್ಯವಿಲ್ಲ. ರಾಜ್ಯಮಟ್ಟದ ಅಧಿಕಾರಿಗಳನ್ನೂ ದಸರಾಗೆ ಬಳಸಿಕೊಳ್ಳಬೇಕು ಎಂದರು.

ಬಂಗಾರಪ್ಪ, ಎಸ್.ಎಂ.ಕೃಷ್ಣ ಅವರ ಮಂತ್ರಿ ಮಂಡಲದಲ್ಲಿ ದಸರಾ ನೋಡಿದ್ದೆ. ಟಾರ್ಚ್ ಲೈಟ್ ಪರೇಡ್ ತುಂಬಾ ಚೆನ್ನಾಗಿತ್ತು. ದಸರಾ ಕಾರ್ಯಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವ ರೀತಿ ನಡೆದಿದೆ ಎಂದ ಅವರು, ಮೈಸೂರು ಅಧಿಕಾರಿಗಳು ದಸರಾಗಾಗಿ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ ಎಂದರು.

click me!