ಎಣ್ಣೆ ಖರೀದಿಸಲು ಸರ್ಕಾರಿ ವಾಹನವನ್ನೇ ಬಾರ್‌ಗೆ ತಂದ ಕುಡುಕ..!

By Kannadaprabha News  |  First Published May 6, 2020, 7:40 AM IST

ಮಹಿಳಾ ಮತ್ತು ಮಕ್ಕಳ ಅಭಿ​ವೃದ್ಧಿ ಇಲಾಖೆ ವಾಹನ ಚಾಲಕ ಎಡ​ವ​ಟ್ಟು| ಇಲಾಖೆಯ ವಾಹನ ತೆಗೆದುಕೊಂಡು ನಗರದ ಬಸ್‌ ನಿಲ್ದಾಣದ ಬಳಿಯ ಶ್ರೀದೇವಿ ವೈಸ್ಸ್‌ಗೆ ಬಂದು ಸೈಯ​ದ್‌ ವೈಸ್ಸ್‌ ಸ್ಟೋರ್‌ ಪಕ್ಕದಲ್ಲಿ ವಾಹನ ನಿಲ್ಲಿಸಿ ಮದ್ಯ ತೆಗೆದುಕೊಳ್ಳಲು ಹೋಗಿದ್ದ ಚಾಲಕ ಸೈಯದ್‌|


ಕೊಪ್ಪಳ(ಮೇ.06): ಮದ್ಯ ಖರೀದಿಸಲು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಾಹನ ಚಾಲಕ ಸೈಯದ್‌ ಎನ್ನುವವರು ಇಲಾಖೆಯ ವಾಹನ ತೆಗೆದುಕೊಂಡು ನಗರದ ಬಸ್‌ ನಿಲ್ದಾಣದ ಬಳಿಯ ಶ್ರೀದೇವಿ ವೈಸ್ಸ್‌ಗೆ ಬಂದು ಸೈಯ​ದ್‌ ವೈಸ್ಸ್‌ ಸ್ಟೋರ್‌ ಪಕ್ಕದಲ್ಲಿ ವಾಹನ ನಿಲ್ಲಿಸಿ ಮದ್ಯ ತೆಗೆದುಕೊಳ್ಳಲು ಹೋಗಿದ್ದಾರೆ. ತನಗೆ ಬೇಕಾದ ಮದ್ಯದ ಬ್ರಾಂಡ್‌ ಸಿಗದೆ ಮರಳಿದ. ಈ ಸಂದರ್ಭದಲ್ಲಿ ಕ್ಯಾಮೆರಾ ಕಂಡ ಸೈಯದ್‌ ಕೂಡಲೇ ವಾಹನ ಬಿಟ್ಟು ಓಡಿ ಹೋಗಿದ್ದಾನೆ. ಆನಂತರ ಬಂದು ವಾಹನ ತೆಗೆದುಕೊಂಡು ಹೋಗಿದ್ದಾರೆ. ಮದ್ಯ ಖರೀದಿಸಲು ಬಂದಿದ್ದ ಸೈಯದ್‌ ಮೊದಲೆ ಮದ್ಯಪಾನ ಮಾಡಿರಬೇಕು ಎಂದು ಸ್ಥಳದಲ್ಲಿವರು ಅನುಮಾನ ವ್ಯಕ್ತಪಡಿಸಿದ್ದಾರೆ. ತನಗೆ ಬೇಕಾದ ಮದ್ಯ ಸಿಗದ ಕಾರಣ ವಾಪಸಾಗಿದ್ದಾನೆ.

Tap to resize

Latest Videos

ಆರೋಗ್ಯ ತಪಾಸಣೆಗೆ ಮುಗಿಬಿದ್ದ ಬಿದ್ದ ಜನತೆ: ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌..!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಾಹನವನ್ನು ಕೋವಿಡ್‌ ಜಾಗೃತಿಗಾಗಿ ಮತ್ತು ಸೇವೆಗಾಗಿ ಆರ್‌ಟಿಒ ಇಲಾಖೆ ಪಡೆದಿದೆ. ಕಳೆದ 15 ದಿನಗಳಿಂದ ನಮ್ಮ ಬಳಿ ವಾಹನ ಇಲ್ಲ. ಆ ಚಾಲಕ ನಮ್ಮ ಇಲಾಖೆಯವರಾಗಿದ್ದರು ಸಹ ಈಗ ನಮ್ಮ ವ್ಯಾಪ್ತಿಗೆ ಇರುವುದಿಲ್ಲ. ಸರ್ಕಾರಿ ವಾಹನವನ್ನು ಮದ್ಯ ಖರೀದಿಗೆ ತೆಗೆದುಕೊಂಡು ಹೋಗಿರುವುದು ತಪ್ಪು ಎಂದು ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಅಕ್ಕಮಹಾದೇವಿ ಅವರು ಹೆಳಿದ್ದಾರೆ. 
 

click me!