SSLC ಫಲಿತಾಂಶ ಪ್ರಕಟವಾಗಿದ್ದು, ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಈ ಬಾರಿ ಹೆಚ್ಚು ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿ ಚಿನ್ನದುಂಗುರ ನೀಡಿದ್ದಾರ.
ಕೊಳ್ಳೇಗಾಲ (ಆ.13) : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರಾ ಥಾಮಸ್ ಅವರು ತಮ್ಮ ಇಲಾಖೆಯ ವಾಹನ ಚಾಲಕನ ಪುತ್ರಿ ಮೇಘನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿ ( 621 ಅಂಕಗಳಿಸಿ) ಸಾಧನೆಗೈದ ಹಿನ್ನೆಲೆ ಕೊಳ್ಳೇಗಾಲಕ್ಕೆ ತೆರಳಿ ವಿದ್ಯಾರ್ಥಿನಿ ಸಾಧನೆ ಕೊಂಡಾಡಿ ಆಕೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವ ಮೂಲಕ ಶುಭ ಕೋರಿದ್ದಾರೆ.
ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ, ಅಧಿಕಾರಿಗಳ ಮಕ್ಕಳು ಸಾಧನೆಗೈದರೆ ಶಾಲು, ಹಾರ ಹಾಕಿ ಇಲ್ಲವೇ ನಗದು ಬಹುಮಾನ ನೀಡಿ ಗೌರವಿಸುತ್ತಿದ್ದ ಸಂಪ್ರದಾಯವಿತ್ತು. ಆದರೆ ಜಿಲ್ಲಾ ಕೇಂದ್ರದಲ್ಲಿದ್ದ ಎಸ್ಪಿ ದಿವ್ಯ ಸಾರಾನಾಥ್ ಅವರು ತಮ್ಮ ಇಲಾಖೆಯ ಪೇದೆಯೊಬ್ಬರ ಪುತ್ರಿ ಸಾಧನೆ ಕೇಳಿ ಕುತೂಹಲಗೊಂಡು ಕೊಳ್ಳೇಗಾಲಕ್ಕೆ ಆಗಮಿಸಿ ವಿದ್ಯಾರ್ಥಿನಿ ಮೇಘನಾಗೆ ಸಿಹಿ ತಿನಿಸಿ. ಉತ್ತಮ ರೀತಿ ಅಧ್ಯಯನ ಮಾಡು, ಸಮಾಜದಲ್ಲಿ ಇನ್ನು ಎತ್ತರಕ್ಕೆ ಬೆಳೆಯುವಂತೆ ಮಾರ್ಗದರ್ಶ ಮಾಡಿ ಚಿನ್ನದ ಉಂಗುರ ಕಾಣಿಕೆ ನೀಡಿದ್ದಾರೆ.
undefined
ಬೆಳಗಾವಿ: SSLCಯಲ್ಲಿ ಶೇ.48 ಅಂಕ ಪಡೆದ ವಿದ್ಯಾರ್ಥಿಗೆ ಗುಲಾಲು ಎರಚಿ ಸನ್ಮಾನ..!
ಎಸ್‌ಪಿಯವರ ಈ ಕಾಣಿಕೆಯನ್ನು ಸ್ವತಃ ಮೇಘನಾ ತಂದೆ ಪೊಲೀಸ್ ಮಹೇಶ್ ಅವರು ಗಮನಿಸಿರಲಿಲ್ಲ, ಉಂಗುರ ನೋಡಿದ ತಕ್ಷಣ ಅಚ್ಚರಿಗೊಳಗಾಗಿದ್ದಾರೆ. ತಮ್ಮ ಮಗಳ ಸಾಧನೆಗೆ ಹಿರಿಯ ಅಧಿಕಾರಿಗಳ ಉಡುಗೊರೆ ನೆನೆದು ಕಣ್ತುಂಬಿಕೊಂಡು ಕೃತಜ್ಞತಾ ಭಾವನೆ ವ್ಯಕ್ತಪಡಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅಂಕ ತೆಗೆಯಲು ಅಡ್ಡಿಯಾಗದ ಅಂಧತ್ವ...
ಎಸ್‌ಪಿ ಮೇಡಂ ಅವರು ನನ್ನ ಮಗಳ ಸಾಧನೆಗೆ ನೀಡಿದ ಉಡುಗೊರೆ ನನಗೆ ಅಚ್ಚರಿ ತಂದಿದೆ. ಇದು ನನಗೆ ಮರೆಯಲಾಗದ ಕ್ಷಣ ಎನ್ನುತ್ತಾರೆ ಪೇದೆ ಮಹೇಶ್