ಲಕ್ಷಾಂತರ ರು. ಮೌಲ್ಯದ ಸಿಮೆಂಟ್ ಬೀದಿಬದಿ ವ್ಯರ್ಥ

By Suvarna NewsFirst Published Aug 13, 2020, 3:37 PM IST
Highlights

ಮಣಿಪಾಲ್ ಬಳಿಯ ರಸ್ತೆಯೊಂದರ ಬದಿಯಲ್ಲಿ ಒಂದು ಲೋಡಿನಷ್ಟು ಸಿಮೆಂಟ್ ವ್ಯರ್ಥವಾಗಿ ರಸ್ತೆ ಬದಿಯಲ್ಲಿ ಹಾಕಲಾಗಿದೆ. ಮಳೆಯಲ್ಲಿ ನೆನೆದು ಉಪಯೋಗಕ್ಕೆ ಬಾರದಂತಾಗಿದೆ.

ಮಣಿಪಾಲ (ಆ.13):   ಇಲ್ಲಿನ ನೆಹರು ನಗರ ಸಂಪರ್ಕ ರಸ್ತೆಯ ಪಕ್ಕದಲ್ಲಿ ಕಳೆದ ಹಲವು ದಿನಗಳಿಂದ ಸುಮಾರು ಒಂದು ಲೋಡಿನಷ್ಟು ಸಿಮೆಂಟ್ ನ್ನು ದಾಸ್ತಾನು ಮಾಡಲಾಗಿದ್ದು, ಅದೀಗ ಮಳೆಯಲ್ಲಿ ನೆನೆದು ಬಳಸುವುದಕ್ಕೆ ಸಾಧ್ಯವಾಗದಂತೆ ವ್ಯರ್ಥವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇಲ್ಲಿ ವ್ಯರ್ಥವಾದ ಭಾರಿ ಪ್ರಮಾಣದ ಸಿಮೆಂಟನ್ನು ಯಾರು ತಂದು ಇಟ್ಟಿದ್ದಾರೆ ಎಂಬ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಇಲ್ಲ, ನಗರಸಭೆಯ ಅಧಿಕಾರಿಗಳಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ.

ಆದರೇ ಈ ಮಣ್ಣಿನ ರಸ್ತೆ ಕಾಂಕ್ರೀಕರಣಕ್ಕೆ ತಂದಿಟ್ಟಿರುವ ಸಿಮೆಂಟ್ ಇದಾಗಿದ್ದು, ಗುತ್ತಿಗೆದಾರರ ಮತ್ತು ಅಧಿಕಾರಿಗಳ ಬೆಜವಾಬ್ದಾರಿಯಿಂದ ಲಕ್ಷಾಂತರ ರು. ಮೌಲ್ಯದ ಕೊರಮಂಗಲ ಕಂಪೆನಿಯ ಸಿಮೆಂಟ್ ಹೀಗೆ ನಿರುಪಯುಕ್ತವಾಗಿ ಹಾಳಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಯಾರೇ ಆಗಲಿ, ಸಿಮೆಂಟನ್ನು ಈ ರೀತಿ ವ್ಯರ್ಥ ಮಾಡುವ ಬದಲು ಅವಶ್ಯಕತೆಇದ್ದವರಿಗೆ ನೀಡಿದ್ದಲ್ಲಿ ಉಪಯುಕ್ತವಾಗುತಿತ್ತೆಂದು ಸ್ಥಳೀಯರು ವಿಷಾಧ ವ್ಯಕ್ತಪಡಿಸಿದ್ದಾರೆ.

ಇದೊಂದು ಅವ್ಯವಹಾರದ ಪ್ರಕರಣ ಆಗಿರಲೂಬಹುದಾಗಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ.

click me!