ಮೈಸೂರಿನಲ್ಲಿ ಮತ್ತೊಂದು ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟ

By Web DeskFirst Published Oct 6, 2018, 7:29 PM IST
Highlights

ಚುನಾವಣೆ ಪ್ರಕ್ರಿಯೆಯು ಅ.31ರಂದು ಮುಕ್ತಾಯಗೊಳ್ಳಲಿದೆ. ಮತದಾನ ಅ.28 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತಗಳ ಎಣಿಕೆ ಅ.31ರಂದು ಬೆಳಗ್ಗೆ 8ಕ್ಕೆ ತಾಲೂಕು ಕೇಂದ್ರ ಸ್ಥಳದಲ್ಲಿ ನಡೆಯಲಿದೆ. 

ಮೈಸೂರು[ಅ.06]: ಟಿ. ನರಸೀಪುರ ತಾಲೂಕು 12-ಸೋಮನಾಥಪುರ ಜಿಪಂ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ಎಂ. ಅಶ್ವಿನ್‌ಕುಮಾರ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರಿಂದ ಈ ಸ್ಥಾನ ತೆರವಾಗಿದೆ.

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಅ.13 ರಂದು ಹೊರಡಿಸುವರು. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನಾಂಕ. ನಾಮಪತ್ರಗಳನ್ನು ಪರಿಶೀಲಿಸಲು ಅ.17 ಕೊನೆಯ ದಿನಾಂಕವಾಗಿರುತ್ತದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಅ.20 ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಅ. 28 ರಂದು ನಡೆಸಬಹುದು. 

ಚುನಾವಣೆ ಪ್ರಕ್ರಿಯೆಯು ಅ.31ರಂದು ಮುಕ್ತಾಯಗೊಳ್ಳಲಿದೆ. ಮತದಾನ ಅ.28 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತಗಳ ಎಣಿಕೆ ಅ.31ರಂದು ಬೆಳಗ್ಗೆ 8ಕ್ಕೆ ತಾಲೂಕು ಕೇಂದ್ರ ಸ್ಥಳದಲ್ಲಿ ನಡೆಯಲಿದೆ. ಹೆಚ್ಚಿನ ವಿವರವನ್ನು ಚುನಾವಣಾಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಮೈಸೂರು ಅಥವಾ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಅವರನ್ನು ಸಂಪರ್ಕಿಸಬಹುದು.

ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ನಾಮಪತ್ರವನ್ನು ಸಂಬಂಧಿಸಿದ ತಾಲೂಕು ಕಚೇರಿಯಲ್ಲಿ ವೇಳಾಪಟ್ಟಿಯಂತೆ ಸಲ್ಲಿಸಬಹುದು. ಸೋಮನಾಥಪುರ ಜಿಪಂ ಕ್ಷೇತ್ರದಲ್ಲಿ ಅ.13ರಿಂದ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮತದಾನವು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನದ ದಿನದಂದು ಮತದಾರರು ಶಾಂತಿ ಹಾಗೂ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ
ತಿಳಿಸಿದ್ದಾರೆ.

click me!