ದಾವಣಗೆರೆ ಪೊಲೀಸರಿಂದ ಹೆಲ್ಮೆಟ್ ಹಾಗು ಸಂಚಾರಿ ಬೈಕ್ ಜಾಗೃತಿ

By Suvarna NewsFirst Published Feb 20, 2023, 7:40 PM IST
Highlights

ಪೊಲೀಸರು ಹೆಲ್ಮೆಟ್ ಧರಿಸದೇ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು  ದಾವಗೆರೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದ್ದಾರೆ.

ವರದಿ; ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗರೆ (ಫೆ.20): ಪೊಲೀಸರು ಹೆಲ್ಮೆಟ್ ಧರಿಸದೇ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದರು. ಇಲ್ಲಿನ ಡಿಎಆರ್ ಮೈದಾನದಲ್ಲಿ ಹೆಲ್ಮೆಟ್ ಹಾಗೂ ಸಂಚಾರಿ ಜಾಗೃತಿ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಲ್ಮೆಟ್ ಧರಿಸದೇ ಒಬ್ಬರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾಗೃತಿ ಮೂಡಿಸಬೇಕಾದ ನಾವೇ ಕಾನೂನು ಉಲ್ಲಂಘಿಸಿದರೆ ಹೇಗೆ? ಪೊಲೀಸರು ಹೆಲ್ಮೆಟ್ ಧರಿಸದೇ ಇರುವ ಫೋಟೊವನ್ನು ಸಾರ್ವಜನಿಕರು ಶೇರ್ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

Latest Videos

ಕರಾವಳಿಯ ಸ್ವಾಮೀಜಿಗಳ ಜೊತೆ ಜೆಪಿ ನಡ್ದಾ ಮಾತುಕತೆ, ಸಮಾನ ನಾಗರಿಕ ಸಂಹಿತೆಗೆ ಯತಿಗಳ

ಹೆದ್ದಾರಿಗಳಲ್ಲಿ ದಂಡ: ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೇನ್ ಜಾರಿಗೆ ತರುವಂತೆ ಐಜಿ ಅವರು ಸೂಚಿಸಿದ್ದು, ಪೈಲೆಟ್ ಪ್ರಾಜೆಕ್ಟ್ ಆಗಿ ಬೆಂಗಳೂರು ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ದುಕೊಳ್ಳಲಾಗಿದೆ. ಇಂದು ಸಂಜೆಯಿಂದಲೇ ಹೆದ್ದಾರಿಯಲ್ಲಿ ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ರಿಷ್ಯಂತ್ ಹೇಳಿದರು. ದಾವಣಗೆರೆಯಲ್ಲಿ 3 ಸ್ಥಳಗಳಲ್ಲಿ ಎಎನ್ ಪಿ ಆರ್ ಕ್ಯಾಮರಾಗಳನ್ನು ಅಳವಡಿಸಿದ್ದು, ನಿಯಮ ಉಲ್ಲಂಘಿಸಿದರೆ ಈ ಕ್ಯಾಮೆರಾಗಳು ಸೆರೆ ಹಿಡಿದು ಕಂಟ್ರೋಲ್ ರೂಂಗೆ ಕಳುಹಿಸಲಿದ್ದು, ಟೋಲ್ ಗಳಲ್ಲಿ ದಂಡ ವಸೂಲಿ ಮಾಡಲಾಗುವುದು.

ದಾವಣಗೆರೆ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಒತ್ತಾಯ, ಪ್ರತಿಭಟನೆ

ಭಾರಿ ವಾಹನಗಳು, ಬಸ್ ಹಾಗೂ ಟ್ರಕ್ ಗಳು  ಎಡಗಡೆಯ ಲೇನ್ ನಲ್ಲಿ ಚಲಿಸಬೇಕು. ಕಾರುಗಳು ಡಿವೈಡರ್ ಸಮೀಪದ ಬಲ ಭಾಗದ ಲೇನ್ ನಲ್ಲಿ ಕಾರುಗಳು ಸಂಚರಿಸಬೇಕು. ಒಂದು ವೇಳೆ ಟ್ರಕ್ ಗಳು ಕಾರಿನ ಲೇನ್ ಗಳಲ್ಲಿ ಚಲಿಸಿದರೆ ₹500 ದಂಡ ವಸೂಲಿ ಮಾಡಲಾಗುವುದು ಎಂದು ಹೇಳಿದರು .ಹೆಚ್ಚುವರಿ ಎಸ್ಪಿ ಆರ್‌.ಬಿ.ಬಸರಗಿ, ಸಂಚಾರಿ ಸಿಪಿಐ ಅನಿಲ್ ಹಾಜರಿದ್ದರು.

click me!