Davangere ಪಾಲಿಕೆ ದಿವಾಳಿ, ವಿರೋಧ ಪಕ್ಷ ನಾಯಕ ಗಂಭೀರ ಆರೋಪ

By Suvarna News  |  First Published Jul 2, 2022, 5:48 PM IST

 ದಾವಣಗೆರೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ  ಜಿ. ಎಸ್.‌‌ ಮಂಜುನಾಥ್ ಗಡಿಗುಡಾಳ್ ಪಾಲಿಕೆ ದಿವಾಳಿಯಾಗಿದೆ  ಎಂದು ಗಂಭೀರ  ಆರೋಪ ಮಾಡಿದ್ದಾರೆ.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಜು.2) : ದಾವಣಗೆರೆ ಮಹಾನಗರ ಪಾಲಿಕೆ ದಿವಾಳಿಯಾಗಿದೆ ಅವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆಂದು  ದಾವಣಗೆರೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ  ಜಿ. ಎಸ್.‌‌ ಮಂಜುನಾಥ್ ಗಡಿಗುಡಾಳ್ ಆರೋಪಿಸಿದ್ದಾರೆ. ಮಹಾನಗರ ಪಾಲಿಕೆಯು ದಿವಾಳಿಯಾಗಿದ್ದು, ಆಡಳಿತ ವ್ಯವಸ್ಥೆಯೇ ಸಂಪೂರ್ಣ ಕುಸಿದಿದೆ. ಯುಜಿಡಿ, ತುರ್ತು ಕಾಮಗಾರಿ ಸೇರಿದಂತೆ ಯಾವುದಕ್ಕೂ ಹಣ ನೀಡುತ್ತಿಲ್ಲ. ಮೇಯರ್ ಆಗಿ ಜಯಮ್ಮ ಗೋಪಿನಾಯ್ಕ್ ನಾಲ್ಕು ತಿಂಗಳು ಪೂರ್ಣಗೊಂಡಿದ್ದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳಾಗಿಲ್ಲ. ಇಂಥ ಕೆಟ್ಟ ಆಡಳಿತ ಎಂದಿಗೂ ನೋಡಿಲ್ಲ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಆಕ್ರೋಶ ವ್ಯಕ್ತಪಡಿಸಿದರು

Tap to resize

Latest Videos

ಈ ಹಿಂದಿನ ಮೇಯರ್ ಅವಧಿಯಲ್ಲಿ ಯಾವ ಮುಂದಾಲೋಚನೆ ಇಲ್ಲದೇ ಬಜೆಟ್ ನಲ್ಲಿ ಸುಮಾರು 30 ಕೋಟಿ ರೂಪಾಯಿ ಮುಂಗಡ ಮಾಡಿದ್ದರು. ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡ್ ಗಳಿಗೆ 2ರಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಮಾನ್ಯ ನಿಧಿಯಲ್ಲಿ ನೀಡಿದ್ದರು. ಆದ್ರೆ  ಕಾಂಗ್ರೆಸ್ ನ‌ ಪಾಲಿಕೆ ಸದಸ್ಯರಿಗೆ ನೀಡಿಲ್ಲ. ಇಂಥ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು‌.

 ರಾಜಸ್ಥಾನ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಗೆ ದಾವಣಗೆರೆ ಜಿಲ್ಲಾ ಬಿಜೆಪಿ ಆಗ್ರಹ

ಮೇಯರ್ ಜಯಮ್ಮ ಗೋಪಿನಾಯ್ಕ್ ಪ್ರತಿನಿಧಿಸುವ ವಾರ್ಡ್ ಗೆ ಒಂದೂವರೆ ಕೋಟಿ ರೂಪಾಯಿ ಅನುದಾನ ಹಾಕಿಕೊಂಡಿದ್ದಾರೆ.‌ ನಾವು ಕೇಳಿದರೆ ಅನುದಾನ ಇಲ್ಲ ಎನ್ನುವ ಮೇಯರ್ ಅವರು ಅವರ  ವಾರ್ಡ್ ಗೆ ಎಲ್ಲಿಂದ ಒಂದುವರೆ ಕೋಟಿ ಹಣ ಎಲ್ಲಿಂದ  ಬಂತು? ಎಂದು ಪ್ರಶ್ನಿಸಿದರು.

ಕಳೆದ 2020-21, 2021-22 ನೇ ಅವಧಿಯಲ್ಲಿ ಒಟ್ಟು 55 ಕೋಟಿ ರೂಪಾಯಿ ಟೆಂಡರ್ ಕರೆದಿದ್ದು, ಈ ಸಾಲಿನಲ್ಲಿ 20 ಕೋಟಿ ರೂಪಾಯಿ ಕೊರತೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಾಲಿಕೆ ಸಾಮಾನ್ಯ ನಿಧಿಯಲ್ಲಿ ಅನುದಾನ ಲಭ್ಯವಿಲ್ಲ ಎಂಬ ಸಿದ್ಧ ಉತ್ತರ ಬರುತ್ತದೆ. ಜೆಸಿಬಿ ಯಂತ್ರಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲ ಎಂದು ಅಧಿಕಾರಿಯೊಬ್ಬರೇ ನನ್ನ ಬಳಿ ಹೇಳಿದ್ದಾರೆ. ಬಳಕೆ ಮಾಡಲು  ಹಣವಿಲ್ಲ, ನೋಡಿ  ಪಾಲಿಕೆ ದಿವಾಳಿ ಆಗಿರುವುದಕ್ಕೆ ಇದಕ್ಕಿಂತ  ಸಾಕ್ಷಿಗಳು ಬೇಕಾ ಎಂದು ಹೇಳಿದರು. 

ಸ್ವಚ್ಚತಾ ಕಾರ್ಯಕ್ಕೆ ಪಾಲಿಕೆಗೆ ಸಾಕಷ್ಟು ಹೊಸ ವಾಹನಗಳು ಬಂದಿವೆ. ಇವು ತುಕ್ಕು ಹಿಡಿಯುವ ಹಂತದಲ್ಲಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಇದಕ್ಕೆ ಯಾರು ಜವಾಬ್ದಾರಿ. ಪಾಲಿಕೆ ವ್ಯಾಪ್ತಿಯ ಸ್ವಿಮ್ಮಿಂಗ್ ಫೂಲ್ ಕಳೆದ ಮೂರು ವರ್ಷಗಳಿಂದ ನಿಂತಿದೆ. ಇದರಿಂದ ಈಜುಪಟುಗಳಿಗೆ ತೊಂದರೆ ಆಗಿದೆ. ಕೂಡಲೇ ಸರಿಪಡಿಸಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿಯಾಗಿದೆ. ಹಿತರಕ್ಷಣಾ ಸಮಿತಿಯ ಸದಸ್ಯರು ಒತ್ತಾಯಿಸಿದ್ದರೂ ದಪ್ಪ ಚರ್ಮದ ಆಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Davangere ಸಿಟಿಯಲ್ಲಿ ಈಗ 24 ಗಂಟೆಯೂ ಸಿಸಿಟಿವಿ ಕಣ್ಗಾವಲು

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಪಾಲಿಕೆಗೆ ಯಾವುದೇ ಅನುದಾನ ‌ನೀಡಿಲ್ಲ. ಪಾಲಿಕೆ ಸದಸ್ಯರ ಸಭೆ ನಡೆಸಿ ಅಭಿವೃದ್ಧಿ ಬಗ್ಗೆ ಚರ್ಚಿಸಿ ಎಂಬ ಮನವಿ ಮಾಡಿದ್ದರೂ ಕ್ಯಾರೇ ಎಂದಿಲ್ಲ. ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ರವೀಂದ್ರನಾಥ್, ಪಾಲಿಕೆಯ ಬಿಜೆಪಿ ಸದಸ್ಯರು ಅನುದಾನ ತರುವುದರಲ್ಲಿ ವಿಫಲರಾಗಿದ್ದಾರೆ. ಮೊದಲೆಲ್ಲಾ ಬೆಳಿಗ್ಗೆ ಬಂದು ಸಂಜೆ ಹೋಗುತ್ತಿದ್ದ ಸಚಿವರು ಈಗ ಬಂದಷ್ಟೇ ವೇಗದಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಕಾಟಾಚಾರಕ್ಕೆ ಸಭೆ ನಡೆಸಿ ಹೋದರೆ ದಾವಣಗೆರೆ ಅಭಿವೃದ್ಧಿಯಾಗುತ್ತದೆಯಾ ಎಂದು ಪ್ರಶ್ನೆ ಮಾಡಿದರು. ಇದುವರೆಗು ಜಿಲ್ಲಾ ಉಸ್ತುವಾರಿ ಸಚಿವರು ಕಮ್ ನಗರಾಭಿವೃದ್ಧಿ ಸಚಿವರು ಒಂದು ದಿನವಾದ್ರು ಮಹಾನಗರ ಪಾಲಿಕೆಗೆ ತೆರಳಿ ಅನುದಾನ ಬಳಕೆ, ಹೊಸ ಯೋಜನೆಗಳ ಬಗ್ಗೆ ಸಭೆ ನಡೆಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

click me!