ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.2) : ಮೊನ್ನೆ-ಮೊನ್ನೆ ಅಕ್ರಮ ಕಸಾಯಿಖಾನೆಗಳ (illegal cow slaughter) ಮೇಲೆ ಸಮರ ಸಾರಿ ದಾಳಿ ಮಾಡಿದ್ದ ಚಿಕ್ಕಮಗಳೂರು ನಗರಸಭೆ (Chikkamagaluru Municipal Council ) ಇದೀಗ ಅಕ್ರಮ ಮನೆಗಳ ಮೇಲೂ ಜೆಸಿಬಿ ಹರಿಸಲು ಮುಂದಾಗಿದೆ. ಚಿಕ್ಕಮಗಳೂರು (Chikkamagaluru) ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳ (House) ಮೇಲೆ ಜೆಸಿಬಿ ಘರ್ಜಿಸಿದ್ದು ಹತ್ತಕ್ಕೂ ಹೆಚ್ವು ಮನೆಗಳನ್ನ ನೆಲ ಸಮ ಮಾಡಿದೆ.
ಅಕ್ರಮ ವಲಸಿಗರ ವಿರುದ್ಧ ನಗರಸಭೆ ಸಮರ: ಚಿಕ್ಕಮಗಳೂರು ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಕೆಲವರು ನಕಲಿ ದಾಖಲೆಗಳನ್ನು ಸೃಷ್ಠೀಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ ಎನ್ನುವ ದೂರು ಇತ್ತು. ಈ ಬಗ್ಗೆ ನಗರಸಭೆ ದೂರನ್ವಯ ಕಾರ್ಯಚಾರಣೆ ನಡೆಸಿ ಅಕ್ರಮ ಮನೆಗಳನ್ನು ಪಟ್ಟಿ ಮಾಡಿತ್ತು. ಇದರನ್ವಯ ಇಂದು ನಗರಸಭೆ ಅಧ್ಯಕ್ಷರು, ಆಯುಕ್ತರು, ಸಿಬ್ಬಂದಿಗಳು ಸಮ್ಮುಖದಲ್ಲಿ ದಾಳಿ ನಡೆಸಿ ಅಕ್ರಮ ಮನೆಗಳನ್ನು ನೆಲಸಮ ಮಾಡಲಾಯಿತು.
Chikkamagaluru ಪೊಲೀಸರಿಂದ ಗೋಮಾಂಸ ಮಾರಾಟಗಾರರಿಗೆ ವಾರ್ನಿಂಗ್
ಬಡಾವಣೆಯಲ್ಲಿ ಅಕ್ರಮವಾಗಿ ಮನೆ ನಿರ್ಮಾಣಮಾಡಿಕೊಂಡಿರವರು ಯಾರು ಸ್ಥಳೀಯರು ಅಲ್ಲ ಎನ್ನುವುದು ನಗರಸಭೆ ವಾದ. ಇಂದಿರಾಗಾಂಧಿ ಬಡಾವಣೆಯಲ್ಲಿ ಹೊರ ರಾಜ್ಯದ ಅಕ್ರಮ ವಲಸಿಗರು ಬಂದಿದ್ದಾರೆ. ಅಕ್ರಮವಾಗಿ ಹೊರ ರಾಜ್ಯಗಳಿಂದ ಬಂದು ದಾಖಲೆ ಇಲ್ಲದೆ, ಮನೆ ನಿರ್ಮಿಸಿಕೊಂಡಿದ್ದವರ ಮನೆಯನ್ನ ನೆಲಸಮ ಮಾಡಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಅಕ್ರಮ ನಿವಾಸಿಗಳು ದಾಖಲೆ ಇಲ್ಲದೆ ವಾಸ ಮಾಡುತ್ತಿರುವುದಾಗಿ ಪಟ್ಟಿ ತಯಾರಿಸಿದ್ದ ನಗರಸಭೆ ಅಕ್ರಮ ಮನೆಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಅಕ್ರಮ ನಿವಾಸಿಗಳು ನಗರಸಭೆ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮೇಲೆಯೇ ಜೆಸಿಬಿ ಹರಿಸಿ, ನಮ್ಮ ಮನೆಗಳ ಬೇಡ ಎಂದು ಜೆಸಿಬಿ ಅಡ್ಡ ನಿಂತಿದ್ದರು. ಈ ವೇಳೆ ಸ್ಥಳಿಯ ಕೆಲ ಕಾಂಗ್ರೆಸ್ ಮುಖಂಡರು ಅಕ್ರಮ ನಿವಾಸಿಗಳ ಪರ ನಿಂತಿದ್ದರು.
ಪೊಲೀಸ್ ಭದ್ರತೆ ತೆರೆವು ಕಾರ್ಯ: ಪೊಲೀಸರ ಭದ್ರತೆಯಲ್ಲಿ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತರು ಬಸವರಾಜ್ ಅನಧೀಕೃತ 10ಕ್ಕೂ ಹೆಚ್ಚು ಮನೆಗಳ ತೆರವು ಮಾಡಿದ್ದಾರೆ. ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರು ,10 ವರ್ಷಗಳಿಂದ ವಾಸವಿದ್ದರೂ ದಾಖಲೆ ಮಾಡಿಕೊಳ್ಳದೆ ಇಂದು ತೆರವಿನ ಜಾಗದಲ್ಲಿ ಕೆಲವರು ಕಣ್ಣೀರು ಹಾಕಿ ನಗರಸಭೆಗೆ ಹಿಡಿ ಶಾಪ ಹಾಕಿದರು. ಈ ಬಡಾವಣೆಯಲ್ಲಿ ಭಯದ ವಾತಾರಣವನ್ನು ಸೃಷ್ಠಿ ಮಾಡುವ ಕೆಲಸವನ್ನು ಕೆಲವರು ಮಾಡಲು ಮುಂದಾಗಿದ್ದಾರೆ. ಸ್ಥಳೀರಿಗೆ ಮೀಸಲು ಆಗಿರುವ ಜಾಗದಲ್ಲಿ ಅನ್ಯ ರಾಜ್ಯದರಿಂದ ಬಂದಿರುವ ಕೆಲವರು ಮನೆ ನಿರ್ಮಾಣ ಮಾಡಿದ್ದಾರೆ.
ಆಫ್ ಹೆಲ್ಮೆಟ್, ಶೋಕಿ ಸೈಲೆನ್ಸರ್: ಪುಡಿ-ಪುಡಿ ಮಾಡಿದ ರೋಡ್ ರೋಲರ್
ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಗರಸಭೆ ಆಯುಕ್ತರಾದ ಬಸರಾಜ್ ತಿಳಿಸಿದರು. ಅಲ್ಲದೆ ಸೂಕ್ತ ದಾಖಲೆಗಳನ್ನು ಹೊಂದಿರುವ ಜನರಿಗೆ ನಗರಸಭೆ ತೊಂದರೆ ನೀಡುತ್ತಿಲ್ಲ, ಬದಲಾಗಿ ಜನರಿಗೆ ನ್ಯಾಯಾ ಒದಗಿಸುವ ಕೆಲಸವನ್ನು ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಸ್ಪಷ್ಟಪಡಿಸಿದರು. ಆದ್ರೆ ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.ದಾಖಲೆಗಳು ಇದ್ದರೂ ಮನೆಗಳನ್ನು ನೆಲಸಮಮಾಡಲಾಗಿದ್ದು ಉದ್ದೇಶಪೂರ್ವಕ ದಾಳಿ ಎನ್ನುವ ಅಭಿಪ್ರಾಯವನ್ನು ಸ್ಥಳೀಯರಾದ ಗೀತಾ ಹೊರಹಾಕಿದರು. ಒಟ್ಟಾರೆ ಚಿಕ್ಕಮಗಳೂರು ನಗರಸಭೆಯ ಅಕ್ರಮ ಮನೆಗಳನ್ನು ನಿರ್ಮಾಣಮಾಡಿಕೊಂಡಿರುವ ಜನರಿಗೆ ಶಾಕ್ ನೀಡಿದೆ.