ಜುಲೈ 1, ಲೆಕ್ಕ ಪರಿಶೋಧಕರ ದಿನ. ಲೆಕ್ಕಪರಿಶೋಧಕರಾಗುವುದು ಸುಲಭದ ಮಾತಲ್ಲ. ಅಂತಾದ್ರಲ್ಲಿ ಉಡುಪಿಯಲ್ಲಿ ಒಂದು ಲೆಕ್ಕಪರಿಶೋಧಕರ ಕುಟುಂಬವಿದೆ. ಈ ಕುಟುಂಬದ ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ.
ಉಡುಪಿ (ಜುಲೈ 1): ಲೆಕ್ಕ ಪರಿಶೋಧಕರ ದಿನ. ಲೆಕ್ಕಪರಿಶೋಧಕರಾಗುವುದು ಸುಲಭದ ಮಾತಲ್ಲ. ಸತತ ಪರೀಕ್ಷೆಗಳನ್ನು ಎದುರಿಸಿ, ಶೇಕಡವಾರು ಕೆಲವೇ ಪರೀಕ್ಷಾರ್ಥಿಗಳು ಆಯ್ಕೆಯಾಗುವ ಪ್ರಕ್ರಿಯೆಯೇ ಅತಿಕಠಿಣ, ಅಂತಾದ್ರಲ್ಲಿ ಉಡುಪಿಯಲ್ಲಿ ಒಂದು ಲೆಕ್ಕಪರಿಶೋಧಕರ ಕುಟುಂಬವಿದೆ. ಈ ಕುಟುಂಬದ ವಿಶೇಷವೇನು ಗೊತ್ತಾ?
ಗ್ರಾಮದ ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಶಾನುಭೋಗರ ಕುಟುಂಬ ತಲೆ ತಲಾಂತರದಲ್ಲಿ ಅದಕ್ಕೆ ಸಮನಾದ ಆಧುನಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದೆ. ಕುಂದಾಪುರದ ಕುಟುಂಬವೊಂದರಲ್ಲಿ ಲೆಕ್ಕಪರಿಶೋಧಕರದ್ದೇ (ಸಿಎ) ಪ್ರಾಬಲ್ಯ ಹೆಚ್ಚಿದೆ!
ಭಾರೀ ಮಳೆಯ ಮುನ್ಸೂಚನೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಉಡುಪಿ ಜಿಲ್ಲೆ ಕುಂದಾಪುರದ ವಿನಾಯಕ ಟಾಕೀಸ್ ಬಳಿಯ ಶ್ರೀಗುರುಕೃಪಾದಲ್ಲಿರುವ ಕುಟುಂಬಕ್ಕೆ ಶಾನುಭೋಗ ಕುಲನಾಮ ಹಿರಿಯರಿಂದ ಬಂದಿದ್ದು. ಹಿಂದಿನ ಕಾಲದ ಶಾನುಭೋಗರೆಂದರೆ, ಲೆಕ್ಕಾಚಾರ ದಲ್ಲಿ ಬಲುಚುರುಕು. ಗ್ರಾಮದ ಜವಾಬ್ದಾರಿ ಹುದ್ದೆಯಲ್ಲಿ ಇದ್ದು ಇವರು ಗೌರವ ಪಡೆಯುತ್ತಿದ್ದರು. ಸದ್ಯ ಈ ಕುಟುಂಬದಲ್ಲಿ ಬರೋಬ್ಬರಿ 8 ಮಂದಿ ಲೆಕ್ಕಪರಿಶೋಧಕರು ವೃತ್ತಿ ನಿರತರಾಗಿದ್ದಾರೆ.
ದಿ.ವಿ. ಶಾಂತಮೂರ್ತಿ ಶಾನುಭಾಗ್ ಅವರಿಗೆ ಐದು ಗಂಡು, ಮೂವರು ಹೆಣ್ಣು ಮಕ್ಕಳಿದ್ದು ಗೋವಾದಲ್ಲಿ ಲೆಕ್ಕಪರಿಶೋಧಕ ವೃತ್ತಿ ನಿರತರಾಗಿದ್ದ ಸಿಎ ದಿ. ಗಣೇಶ್ ಶಾನುಭಾಗರ ಪುತ್ರಿ ಸಿ ಎ ಶಿಲ್ಪಾ ಪ್ರಸಾದ್ ಕಾಮತ್, ಸಿ ಎ ರಾಧಾಕೃಷ್ಣರ ಪುತ್ರಿ ಸಿ ಎ ಸುಪ್ರಿಯಾ ಶಾನುಭಾಗ್ ಹಾಗೂ ಶಾಂತಮೂರ್ತಿ ಶಾನುಭಾಗರ ಮತ್ತೊಬ್ಬ ಪುತ್ರ ಕುಂದಾಪುರದ ಮಾಧವ ಶಾನುಭಾಗರ ಮಗ ವಸಂತ ಶಾನುಭಾಗ್, ಪತ್ನಿ ಅಕ್ಷತಾ ಇಬ್ಬರೂ ಸಿಎ ವೃತ್ತಿ ನಿರತರು.
ಮಾಧವ ಶಾನುಭಾಗರ ಪುತ್ರಿ ಶಾಂತಲಾ ಅವರ ಪತಿ ನಾಗೇಶ್ ಹೆಗ್ಡೆಯೂ ಲೆಕ್ಕ ಪರಿಶೋಧಕರಾಗಿದ್ದರೆ ಶಾಂತಮೂರ್ತಿಯವರ ಪುತ್ರಿ ಜಯಂತಿ ಶೆಣೈ ಪುತ್ರ ಪ್ರಶಾಂತ್ ಪಿ. ಶೆಣೈ ಹಾಗೂ ಶಾಂತಮೂರ್ತಿಗಳ ಮತ್ತೊಬ್ಬ ಪುತ್ರ ಮಧುಸೂದನರ ಮಗ ರಾಮನಾಥ ಶಾನುಭಾಗ್ ಕೂಡ ಸಿಎ ವೃತ್ತಿಯಲ್ಲಿ ತೊಡಗಿದ್ದಾರೆ.
ಕಲ್ಲಣಬೆ ಸಾಂಬರಿನಲ್ಲಿ ನೀರುದೋಸೆ ತಿನ್ನೋ ಮಜಾನೆ ಬೇರೆ, ಉಡುಪಿ ಕಡೆ ಬಂದ್ರೆ
ಈ ಒಂದು ಕುಟುಂಬದಲ್ಲಿ ಹಲವರು ಇಂಜಿನಿಯರಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಕೂಡ ಇದ್ದಾರೆ. ಆದರೆ ಇಂಜಿನಿಯರಿಂಗ್ ಸದಸ್ಯರಿಗೆ ಮೀರಿಸುವಂತೆ ಲೆಕ್ಕ ಪರಿಶೋಧಕರು ಇರುವುದು ಒಂದು ವೈಶಿಷ್ಟ್ಯವೇ ಸರಿ.
ಕಲಾವಿದರಾಗಿರಲಿ, ಶಿಕ್ಷಕ ಅಥವಾ ಎಂಜಿನಿಯರ್, ಸಿಎ , ಡಾಕ್ಟರ್ ಏನೇ ಇರಲಿ ತಮ್ಮ ಆಯ್ಕೆಯ ಕ್ಷೇತ್ರ, ಮಾಡುವ ಕೆಲಸದಲ್ಲಿ ಆಸಕ್ತಿ, ಶ್ರದ್ಧೆ, ಪ್ರಾಮಾಣಿಕತೆ ಸಾಧನೆ ಹಾದಿಯಲ್ಲಿ ಬಲು ಮುಖ್ಯ. ದೇಶಕ್ಕೆ ಕೊಡುಗೆ ನೀಡುವ ಕರ್ತವ್ಯ ಪ್ರತಿಯೊಬ್ಬರಿಗಿದೆ ಎಂದು ಈ ಕುಟುಂಬದಲ್ಲಿ ಎಂಜಿನಿಯರ್ ಆಗಿರುವ ಸುಮಂತ ಶಾನುಭಾಗ್, ಹೇಳುತ್ತಾರೆ.
ಮಂಗಳೂರಿನಲ್ಲಿ ಮುಳುಗಿದ ಹಡಗಿನಿಂದ ತೈಲ ಸೋರಿಕೆ, ಸ್ಥಳೀಯರಿಗೆ ಆರೋಗ್ಯ ಸಮಸ್ಯೆ!
ಜಗತ್ತೇ ಒಂದು ಚಿಕ್ಕ ಹಳ್ಳಿಯಾಗಿ ಮಾರ್ಪಾಡಾಗಿರುವ ಈ ಒಂದು ಸಮಯದಲ್ಲಿ ಯಾವುದೇ ವೃತ್ತಿಯು ಅಪರಿಮಿತ ಅವಕಾಶವನ್ನು ಯುವಜನತೆಗೆ ಒದಗಿಕೊಡುತ್ತಿದೆ. ಆದಕಾರಣ ಸರಿಯಾದ ಸಮಯದಲ್ಲಿ ಮಾರ್ಗದರ್ಶನ ಪಡೆದು ಉತ್ತಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹಾಗೂ ಜವಾಬ್ದಾರಿ ಯುವ ಜನರಿಗೆ ಇದೆ ಎಂದು ಕುಂದಾಪುರದಲ್ಲಿ ಲೆಕ್ಕಪರಿಶೋಧಕರಾಗಿರುವ
ವಸಂತ ಶಾನುಭಾಗ್ ತಿಳಿಸಿದ್ದಾರೆ.