ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ( ಮೇ6): ದಾವಣಗೆರೆ ಜಿಲ್ಲಾ ಪಂಚಾಯತ್ (Davanagere Zilla Panchayath) ಕಚೇರಿಯಲ್ಲಿ ಇಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ,ಜಗಳೂರು ಶಾಸಕ ರಾಮಚಂದ್ರಪ್ಪ , ಹರಿಹರ ಶಾಸಕ ಎಸ್ ರಾಮಪ್ಪ ಪಾಲ್ಗೊಂಡಿದ್ದ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಅಧಿಕಾರಿಗಳು ಜಡ ಅವಸ್ಥೆಯಿಂದ ಹೊರಬರಬೇಕು. ಸರ್ಕಾರಕ್ಕೆ ಒಳ್ಳೆ ಹೆಸರು ಬರಬೇಕೆಂದ್ರೆ ನೀವು ಕೆಲಸ ಮಾಡಬೇಕು.ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮುಖ್ಯಮಂತ್ರಿ ರೈತ ನಿಧಿ ಯೋಜನೆಯಲ್ಲಿ 9.25 ಕೋಟಿ ಪಾವತಿ: ರೈತ ಮಕ್ಕಳಿಗೆ ಹೆಚ್ಚಿನ ಮತ್ತು ಉನ್ನತ ವ್ಯಾಸಂಗ ಪ್ರೋತ್ಸಾಹಿಸಲು ದಾವಣಗೆರೆ
ಜಿಲ್ಲೆಯಲ್ಲಿ 22260 ರೈತರ ಮಕ್ಕಳಿಗೆ 9.25 ಕೋಟಿ ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮಾಡಲಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗು 72 ಪ್ರಸ್ತಾವನೆ ಸಲ್ಲಿಕೆಯಾಗಿದ್ದು 20 ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಸೌಲಭ್ಯದೊಂದಿದೆ 1.17 ಕೋಟಿ ಸಹಾಯ ಧನ ನೀಡಲಾಗಿದೆ.
ರಸಗೊಬ್ಬರ ತೊಂದೆರೆಯಾಗದಂತೆ ಕ್ರಮ ಕೈಗೊಳ್ಳಿ: ಜಿಲ್ಲೆಯಲ್ಲಿ 24741 ಮೆಟ್ರಿಕ್ ಟನ್ ಬೇಡಿಕೆಯಿದ್ದು 21659 ಮೆಟ್ರಿಕ್ ಟನ್ ದಾಸ್ತಾನಿದ್ದು ಇನ್ನು 3 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದ ಅವಶ್ಯಕತೆ ಇದೆ.ಮುಂಗಾರು ಮಳೆ ಉತ್ತಮವಾಗಿದ್ದು ರಸಗೊಬ್ಬರ ಹೆಚ್ಚು ದಾಸ್ತಾನು ಮಾಡುವಂತೆ ಸಚಿವರು ಸೂಚಿಸಿದರು.
UDUPI FLOATING BRIDGE ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ, ದೇಶದಲ್ಲೇ ಎರಡನೆಯದು!
ರಾಗಿ ಬೆಂಬಲ ಕೇಂದ್ರದಲ್ಲಿ ಅವ್ಯವಹಾರ: ಜಗಳೂರು ತಾಲ್ಲೂಕಿನಲ್ಲಿ ರಾಗಿ ಬೆಂಬಲ ಕೇಂದ್ರದಲ್ಲಿ ಭಾರಿ ಅವ್ಯವಹಾರಗಳಾಗುತ್ತಿದ್ದು ಅದರ ಬಗ್ಗೆ ನಿಗಾವಹಿಸಬೇಕು.ರೈತರ ಹೆಸರಿನಲ್ಲಿ ದಲ್ಲಾಲಿಗಳು ಮಾರಾಟ ಆಗುವುದಕ್ಕೆ ಅವಕಾಶ ನೀಡಬಾರದು ಎಂದರು.
ಹಾನಿಯಾದ ತೋಟಗಾರಿಕೆ ಬೆಳೆಗೆ ಇನ್ನು ಪರಿಹಾರ ಬಂದಿಲ್: 2021-22 ನೇ ಸಾಲಿನಲ್ಲಿ ಮಳೆಗಾಳಿ ,ಬೆಂಕಿ ಅನಾಹುತ ಗಳಿಂದ ಹಾನಿಗೊಳಗಾದ ಬಾಳೆ ಅಡಿಕೆ ತೆಂಗು ಬೆಳೆಗಳಿಗೆ ಇನ್ನು ಪರಿಹಾರ ಬಂದಿಲ್ಲ ಕೂಡಲೇ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಪಶು ಸಂಗೋಪನೆ ಇಲಾಖೆಯಲ್ಲಿ ಆಸ್ಪತ್ರೆ ವೈದ್ಯರು ,ಸಿಬ್ಬಂದಿ ಕಡಿಮೆ ಇದ್ದು ಕೂಡಲೇ ಡೆಪ್ಯೂಟ್ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬೂಸ್ಟರ್ ಡೋಸ್ ಜಿಲ್ಲೆಯಲ್ಲಿ ಕಡಿಮೆಯಾಗಿದೆ: ಜಿಲ್ಲೆಯಲ್ಲಿ ಶೇ 26 ರಷ್ಟು ಮಾತ್ರ ಬೂಸ್ಟರ್ ಡೋಸ್ ಆಗಿದೆ. ನಾಲ್ಕನೇ ಅಲೆ ಬರುವ ಹಿನ್ನಲೆಯಲ್ಲಿ ಎಲ್ಲಾ ಪ್ರಂಟ್ ಲೈನ್ ವರ್ಕರ್ , ಜನಸಾಮಾನ್ಯರಿಗೆ ಬೂಸ್ಟರ್ ಡೋಸ್ ನೀಡಬೇಕೆಂದು ಸಚಿವರು ಸೂಚಿಸಿದರು.
ಪಿಹೆಚ್ ಸಿ ಗಳಲ್ಲಿ ವೈದ್ಯರು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿಲ್ಲ: ಪಿಹೆಚ್ ಸಿ ಗಳಲ್ಲಿ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕತ್ತಲೆಗೆರೆ ಪಿಹೆಚ್ ಸಿಯಲ್ಲಿ ಪಿ ಓನ್ (ಡಿ ಗ್ರೂಪ್ ) ಇಂಜಕ್ಷನ್ ಮಾಡಿದ ಉದಾಹರಣೆ ಇದೆ. ಹೂವಿನ ಮಡು ಗ್ರಾಮದಲ್ಲಿ ಇದೇ ರೀತಿ ಇದೆ. ಎಂದು ಮಾಯಕೊಂಡ ಶಾಸಕ ಪ್ರೋ ಲಿಂಗಣ್ಣ ಡಿಹೆಚ್ ಓ ರನ್ನು ತರಾಟೆಗೆ ತೆಗೆದುಕೊಂಡರು. ನರ್ಸ್ ಗಳನ್ನು ನೇಮಿಸಿಕೊಂಡು ಡಿ ಗ್ರೂಪ್ ನವರು ಇಂಜೆಕ್ಷನ್ ಮಾಡುವುದನ್ನು ತಪ್ಪಿಸಿ ಎಂದು ಸೂಚಿಸಿದರು.
ಬೆಂಗಳೂರಿನಲ್ಲಿ ಏಕಕಾಲಕ್ಕೆ 50 ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ಆರಂಭ
ನರೇಗ ಅನುದಾನದಲ್ಲಿ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಿ: ದುರಸ್ತಿ ಇರುವ ಶಾಲಾ ಕಟ್ಟಡಳಿಗೆ ಎನ್ ಆರ್ ಇ ಜಿ ಹಣ ಬಳಸುವಂತೆ ಶಾಸಕರು ಸೂಚಿಸಿದರು.ಜಿಲ್ಲಾ ಪಂಚಾಯತ್ ಅನುದಾನ ,ಶಾಸಕರ ಅನುದಾನ ಸೇರಿದಂತೆ ಯಾವುದೆ ಅನುದಾನ ಬಳಸಿಕೊಂಡು ಶಾಲಾ ಕಟ್ಟಡಗಳನ್ನು ದುರಸ್ತಿಮಾಡಬೇಕೆಂದರು. ನರೇಗದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ನರೇಗಾದಲ್ಲಿ ಶಾಲಾ ಕಾಂಪೋಂಡ್ , ಅಡುಗೆ ಕಟ್ಟಡ,ಆಟದ ಮೈದಾನ ಮಾಡಲು ಅವಕಾಶ ಇದ್ದು ಶಾಲಾ ಮಕ್ಕಳು ಹೊರಗೆ ಕೂತು ಪಾಠ ಕೇಳದಂತೆ ಕ್ರಮ ಕೈಗೊಳ್ಳಿ ಎಂದರು. ಕಳೆದ ಮೂರು ವರ್ಷಗಳಲ್ಲಿ 113 ಶಾಲಾ ಕಾಂಪೊಂಡ್ ಕಟ್ಟಿದ್ದೇವೆ. ಶೀಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಗೆ ಸರ್ಕಾರ ಬಿಡುಗಡೆ ಮಾಡಲಿದೆ.
ಕಾಳ ಸಂತೆಯಲ್ಲಿರುವ ಅನ್ನಭಾಗ್ಯ ಅಕ್ಕಿ ಸೀಜ್ ಮಾಡಿ: ಎಲ್ಲಾ ರೈಸ್ ಮಿಲ್‌ಗಳಲ್ಲಿ ಅನ್ನಭಾಗ್ಯ ಅಕ್ಕಿ ಸ್ಟಾಕ್ ಇದೆ ನಮ್ಮ ಜೊತೆ ಬನ್ನಿ ಹೋಗೋಣ ಸೀಜ್ ಮಾಡೊಣ ಎಂದು ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಹೇಳಿದರು.
ಹರಿಹರ ಶಾಸಕ ಎಸ್ ರಾಮಪ್ಪ ಮಾತನಾಡಿ ಅಕ್ಕಿ ಏಜೆಂಟ್ ಗಳು ಮನೆಯಲ್ಲಿ ಅಕ್ಕಿ ಇದೆ.ಲೋಡ್ ಗಟ್ಟಲೆ ಅಕ್ಕಿ ಹೋಗುತ್ತಿದೆ ಅದನ್ನು ತಡೆಯುತ್ತಿಲ್ಲ ಎಂದರು.ಎಪಿಎಂಸಿ ಯಿಂದಲೇ ನೇರವಾಗಿ ಅಕ್ಕಿ ಹೋಗುತ್ತಿದೆ. ದೊಡ್ಡ ವ್ಯವಹಾರದವರು ಸೊಸೈಟಿ ಯವರು ಬುಕ್ ಮಾಡಿಕೊಂಡು ದೊಡ್ಡ ಪ್ರಮಾಣದ ಅಕ್ಕಿ ಹೋಗುತ್ತಿದೆ ಎಂದು ಎಸ್ ರಾಮಪ್ಪ ನೇರ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಅನ್ನಭಾಗ್ಯ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ರಿಷ್ಯಂತ್. ಆಹಾರ ಇಲಾಖೆ ಅಧಿಕಾರಿಗಳು ಕೇಸ್ ಮಾಡಲು ಈ ಹಿಂದೆ ಬರುತ್ತಿರಲಿಲ್ಲ. ಈಗ ಬರುತ್ತಿದ್ದಾರೆ ಆದ್ರೆ ಎಪ್ ಸಿ ಐ ಚೀಲ ಇದ್ದರೆ ಮಾತ್ರ ನಮ್ಮದು ಎನ್ನುತ್ತಿದ್ದಾರೆ. ಪಾಲಿಷ್ ಮಾಡಿರುವ ಅಕ್ಕಿ ಯನ್ನು ಗುರುತಿಸುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಜೆಡಿ ಮಂಟೆಸ್ವಾಮಿ, ಅನ್ನಭಾಗ್ಯ ಅಕ್ಕಿ ಅಕ್ರಮ ದ ಬಗ್ಗೆ 12 ಅಂಗಡಿ ಲೈಸನ್ಸ್ ಕ್ಯಾನ್ಸಲ್ ಮಾಡಿದ್ದೇವೆ. ಪ್ರತಿ ತಿಂಗಳ ಎಲ್ಲಾ ಕಡೆ ಹೋಗಿದ್ದೇವೆ ಎಂದು ಜೆಡಿ ತಿಳಿಸಿದರು. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿರುವುದನ್ನು ತಡೆಗಟ್ಟಿ ಇಲ್ಲ ಅಂದ್ರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಿ ಎಂದರುಮ ಎಂದು ಸಚಿವ ಬೈರತಿ ಬಸವರಾಜ್ ಸೂಚಿಸಿದರು.