Udupi Floating Bridge ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ, ದೇಶದಲ್ಲೇ ಎರಡನೆಯದು!

By Suvarna News  |  First Published May 6, 2022, 2:20 PM IST

ಉಡುಪಿಯ ಮಲ್ಪೆ ಬೀಚ್  ನಲ್ಲಿ ಪ್ರವಾಸಿಗರ ಆಕರ್ಷಣೆಗೆ ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಕರ್ನಾಟಕ ರಾಜ್ಯದಲ್ಲೇ ಇದು ಪ್ರಥಮ ತೇಲುವ ಸೇತುವೆಯಾಗಿದ್ದು, ದೇಶದ ಎರಡನೇ ತೇಲುವ ಸೇತುವೆ ಎಂಬ ಹೆಗ್ಗಳಿಕೆ ಸಾಕ್ಷಿಯಾಗಿದೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಮೇ.6): ರಜಾದಿನಗಳನ್ನು ಎಂಜಾಯ್ ಮಾಡುವುದಕ್ಕೆ ಜನ ಲಕ್ಷಾಂತರ ಸಂಖ್ಯೆಯಲ್ಲಿ ಕರಾವಳಿಯ ಬೀಚ್ (coastal beaches) ಕಡೆಗೆ ಬರುತ್ತಿದ್ದಾರೆ. ವೀಕೆಂಡ್ ಬಂದ್ರೆ ಸಾಕು ಬೀಚ್ ಗಳು ತುಂಬಿತುಳುಕುತ್ತವೆ. ಇದೀಗ ಉಡುಪಿಗೆ (Udupi) ಬರುವ ಪ್ರವಾಸಿಗರಿಗೆ (Tourist) ಒಂದು ಸಿಹಿ ಸುದ್ದಿ ಕಾದಿದೆ. ಉಡುಪಿಯ ಮಲ್ಪೆ ಬೀಚ್ (Malpe beach) ನಲ್ಲಿ ಪ್ರವಾಸಿಗರ ಆಕರ್ಷಣೆಗೆ ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಕರ್ನಾಟಕ ರಾಜ್ಯದಲ್ಲೇ ಇದು ಪ್ರಥಮ ತೇಲುವ ಸೇತುವೆ ( floating bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Tap to resize

Latest Videos

ಕರಾವಳಿಯ ಪ್ರಮುಖ ಆಕರ್ಷಣೆಗಳು ಸಮುದ್ರತೀರಗಳು. ಮರುಸೃಷ್ಟಿ ಮಾಡಲು ಸಾಧ್ಯವಿಲ್ಲದ ಸಮುದ್ರದ ಅಲೆಗಳ ರೌದ್ರಾವತಾರ ಕಾಣುವುದಕ್ಕಂತಲೇ ಲಕ್ಷಾಂತರ ಜನ ಬರುತ್ತಾರೆ. ಕಡಲತೀರಗಳಲ್ಲಿ ಮಿಂದು ಖುಷಿಪಡುತ್ತಾರೆ. ಕೆಲವೊಮ್ಮೆ ತೀರವನ್ನು ಮೀರಿ ಸಮುದ್ರದ ಅಲೆಗಳಿಗೆ ಕಡೆಗೆ ಮುಂದೆ ಮುಂದೆ ಸಾಗುತ್ತಾರೆ. ಅಪಾಯ ದ ಅರಿವಿಲ್ಲದೆ ಜೀವ ಕಳೆದುಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ಯಾವುದೇ ಜೀವಭಯವಿಲ್ಲದೆ ಸಮುದ್ರದ ಮೇಲೆ ನಡೆದಾಡಬಹುದು!

PSI recruitment scam ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ಉಡುಪಿಯ ಮಲ್ಪೆ ಬೀಚ್ ನಲ್ಲಿ ತೇಲುವ ಸೇತುವೆಯನ್ನು ವ್ಯವಸ್ಥೆ ಮಾಡಲಾಗಿದ್ದು ಅಲೆಗಳ ಮೇಲೆ ನಡೆಯುವ ಅಪೂರ್ವ ಅವಕಾಶ ಪ್ರವಾಸಿಗರಿಗೆ ಸಿಗಲಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರದೊಂದಿಗೆ ಈ ಅಪರೂಪದ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣವಾಗಿದೆ.

ಅತ್ಯಂತ ಸುರಕ್ಷಿತ ಬೀಚ್ ಎಂಬುದು ಮಲ್ಪೆಗಿರುವ ಹೆಗ್ಗಳಿಕೆ. ಆದರೆ ಇತ್ತೀಚೆಗೆ ಕೆಲ ಪ್ರವಾಸಿಗರ ಮಿತಿಮೀರಿದ ವರ್ತನೆಯಿಂದ ಸಾವು-ನೋವು ಸಂಭವಿಸಿದ್ದೂ ಇದೆ. ಅಲೆಗಳ ಸಮೀಪಕ್ಕೆ ಹೋಗಿ ಖುಷಿಪಡುವ ಅವಕಾಶ ನೀಡಲಿದೆ. ಅಲೆಗಳ ಮೇಲೆ ನಡೆಯುವ ಅಪೂರ್ವ ಅನುಭವ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಸಾಧ್ಯತೆ ಇದೆ. ಸಾಹಸ ಕ್ರೀಡೆಗಳನ್ನು ಇಷ್ಟಪಡುವವರಿಗಂತೂ ಇದು ಅಚ್ಚುಮೆಚ್ಚಿನ ಪ್ರವಾಸ ವಾಗಲಿದೆ.

ಕೊಲ್ಲೂರು ಮಠದ ಸ್ವಾಮೀಜಿ ಹೆಸರಿನಲ್ಲಿ ವಂಚನೆ, ಲಕ್ಷಗಟ್ಟಲೆ ಕಿತ್ತ ಕಿರಾತಕರು!

ಕೇರಳದ ಬೇಪೋರ್ ಬೀಚ್ (kerala beypore beach) ಬಿಟ್ಟರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇಲ್ಲ. ಕೆಲವೊಂದು ಹಿನ್ನೀರಿನ ಪ್ರದೇಶಗಳಲ್ಲಿ ಈ ಥರದ ಸೇತುವೆ ಅಳವಡಿಸಿದ್ದರೂ ಸಮುದ್ರದ ಅಲೆಗಳ ಮೇಲೆ ನಡೆದ ರೋಚಕ ಅನುಭವ ಅಲ್ಲಿ ಸಿಗುವುದಿಲ್ಲ.

ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿದೆ. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದು. ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದೆ ಇದರಲ್ಲಿ 15 ನಿಮಿಷ ಕಾಲ ಕಳೆಯಲು ಅವಕಾಶ ಕಲ್ಪಿಸಲಾಗಿದೆ.

ಚಾರ್ಮಾಡಿ ಘಾಟ್ ನಲ್ಲಿ ಕಾರು ಅಪಘಾತ, ಹಣ ಚಿನ್ನ ದೋಚಿದ ದರೋಡೆಕೋರರು!

ಸೇತುವೆ ಅಕ್ಕಪಕ್ಕದಲ್ಲಿ ಹತ್ತುಮಂದಿ ಲೈಫ್ ಕಾರ್ಡುಗಳು ಇರುತ್ತಾರೆ ಸ್ಥಳೀಯರ ನೆರವಿನೊಂದಿಗೆ ಈ ತೇಲುವೆ ಸೇತುವೆಯನ್ನು ನಿರ್ಮಾಣ ಮಾಡಿದ್ದು ಸಮುದ್ರದ ಅಲೆಗಳ ಉಬ್ಬರ ಇಳಿತಕ್ಕೆ ಹೊಂದಿಕೊಂಡು ಮೋಜುಮಸ್ತಿ ಮಾಡುವುದು ಪ್ರವಾಸಿಗರಿಗೆ ಒಂದು ಅಪೂರ್ವ ಅನುಭವ ಆಗಲಿದೆ.

click me!