Gadag ಗಾಯಗೊಂಡ ಹಸುಗಳ ರಕ್ಷಣೆಗಾಗಿ ತಂಡ ಕಟ್ಟಿದ ಯುವಕರು

By Suvarna NewsFirst Published May 6, 2022, 12:29 PM IST
Highlights
  • ಗಾಯಗೊಂಡ ಹಸುಗಳಿಗಾಗಿ ಮಿಡಿಯುವ ಯುವಕರ ಹೃದಯ
  • ನೋವಿನಿಂದ ಬಳಲುವ ರಾಸುಗಳಿಗೆ ಟ್ರೀಟ್ ಮಾಡುವ ಯಂಗ್ ಟೀಮ್!
  • ಗದಗನಲ್ಲಿದ್ದಾರೆ ಗೋಮಾತೆಯ ಆಪತ್ಬಾಂಧವರು 

ವರದಿ : ಗರೀಶ್ ಕುಮಾರ್ ಏಷ್ಯಾನೆಟ್ ಸುವರ್ಣನ್ಯೂಸ್

ಗದಗ (ಮೇ.6): ಆಕಸ್ಮಿಕವಾಗಿ ಗಾಯಗೊಂಡು ಮೂಕ ವೇದನೆ ಪಡುವ ಹಸುಗಳಿಗೆ ಗದಗ ಬೆಟಗೇರಿಯ ಯುವಕರ ಗುಂಪೊಂದು ಸಂಜೀವಿನಿಯಾಗಿದೆ. ಗದಗ ಬೆಟಗೇರಿ ಭಾಗದಲ್ಲಿ ಗಾಯಗೊಂಡು ಓಡಾಡ್ತಿದ್ದ ಅನೇಕ ಹಸುಗಳಿಗೆ ಬೆಟಗೇರಿ ಯುವಕರ ಗುಂಪು  ಟ್ರೀಟ್ಮೆಂಟ್ ಕೊಡ್ತಾ ಬಂದಿದೆ. ಸಾಮಾನ್ಯವಾಗಿ ಗಾಯಗೊಂಡು ಹಸುಗಳನ್ನ ನೋಡಿ, 'ಪಾಪ' ಅಂತಾ ಹೇಳಿ ಮುನ್ನಡೆಯೋ ಜನರೇ ಹೆಚ್ಚು. ಅಂಥದ್ರಲ್ಲಿ ತೀವ್ರವಾಗಿ ಗಾಯಗೊಂಡ ಹಸುಗಳನ್ನ ಗುರಿತಿಸುವ ಯುವಕರು ರಾತ್ರಿ ವೇಳೆ ಚಿಕಿತ್ಸೆ ನೀಡ್ತಾರೆ.

ಗದಗ ಬೆಟಗೇರಿಯ 20 ಜನರ ಗುಂಪು ಸ್ವಯಂಸೇವಕರಾಗಿ ಗೋ ಸೇವೆಯಲ್ಲಿ‌ ತೋಡಗಿದ್ದಾರೆ. ಬಜರಂಗದಳದ ಜೊತೆಗೂ ಗುರುತಿಸಿಕೊಂಡಿರುವ ಈ ಯುವಕರು, ಪ್ರಚಾರಕ್ಕಾಗಲ್ಲ ಗೋ ಸೇವೆಗಾಗಿ ಕೆಲಸ ಮಾಡ್ತಿರೋದಾಗಿ ಹೇಳ್ತಾರೆ.

PSI RECRUITMENT SCAM ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ವಾರಕ್ಕೆ ಒಂದು ದಿನ ಗೋ ಸೇವೆಗೆ ಮೀಸಲು: ಇತ್ತೀಚೆಗೆ ಗದಗ ಬೆಟಗೇರಿಯಲ್ಲಿ ಬಿಡಾಡಿದನಗಳ ಸಂಖ್ಯೆ ಹೆಚ್ಚುತಿದ್ದು, ಗಾಯಗೊಳ್ಳುವ ಗೋವುಗಳ ಸಂಖ್ಯೆಯೂ ಹೆಚ್ಚಿದೆ. ದುಷ್ಕರ್ಮಿಗಳಿಂದ ಕೆಲ ದನಗಳು ಗಾಯಗೊಂಡ್ರೆ, ಆಕ್ಸಿಡೆಂಟ್ ನಿಂದಾಗಿ ಕೆಲ ರಾಸುಗಳು ಗಾಯಗೊಳ್ಳುತ್ತವೆ. ಹೀಗಾಗಿ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡೋ ಯುವಕರು ವಾರಕ್ಕೆ ಒಂದು ದಿನ ಗೋವುಗಳ ಸೇವೆಗೆ ಮೀಸಲಿಟ್ಟಿದ್ದಾರೆ. ಬಿಡುವಿನ ಸಮಯದಲ್ಲಿ ಗಾಯಗೊಂಡ  ಗೋವುಗಳನ್ನ ಗುರುತಿಸಿ ಅವ್ರುಗಳು ಇರುವ ಜಾಗಕ್ಕೆ ತೆರಳಿ ಯುವಕರಗುಂಪು ಟ್ರೀಟ್ಮೆಂಟ್ ಕೊಡುತ್ತೆ.. ಕಳೆದ ಕೆಲ ದಿನಗಳಿಂದ ಈ ಗುಂಪು ಸದ್ದಿಲ್ಲದೇ ಗೋ ಸೇವೆಯಲ್ಲಿ ತೊಡಗಿದೆ. 

ಹಸುಗಳ ಪಾಲಿಗೆ ಆಪತ್ಬಾಂಧವ 'ANIMAL AID' ವಾಟ್ಸಾಪ್ ಗ್ರೂಪ್: ಸಾರ್ವಜನಿಕರನ್ನೊಳಗೊಂಡ ANIMAL AID ವಾಟ್ಸಾಪ್ ಗ್ರೂಪ್ ಮಾಡ್ಕೊಂಡಿರೋ ಯುವಕರು, ಗಾಯಗೊಂಡ ಹಸುಗಳ ಮಾಹಿತಿಯನ್ನ ಇದ್ರಲ್ಲೇ ಹಂಚಿಕೊಳ್ತಾರೆ.. ಲೊಕೇಷನ್ ಪತ್ತೆಹಚ್ಚಿ ಗೋ ರಕ್ಷಕರ ಗುಂಪು ಅಲ್ಲಿಗೆ ತಲುಪುತ್ತೆ‌. ಕೆಲ ಖಾಸಗಿ ಗೋಶಾಲೆ ಸಹಾಯ ಪಡೆಯೋ ಯುವಕರು ವೈದ್ಯಕೀಯ ಸಲಹೆ ಸಹಕಾರ ಪಡೀತಾರೆ.  

ಗಂಭೀರವಾಗಿ ಗಾಯಗೊಂಡ ರಾಸುಗಳನ್ನ ಪಶು ಚಿಕಿತ್ಸಾಲಯ ಅಥವಾ ಗೋಶಾಲೆಗೆ ದಾಖಲಿಸಲಾಗುತ್ತೆ. ಅಲ್ಲಿ,  ಚಿಕಿತ್ಸೆ ನೀಡಿ ನೋಡಿಕೊಳ್ಳಲಾಗುತ್ತೆ. ಪ್ರಸವ ಸಂದರ್ಭದಲ್ಲಿ ಗರ್ಭದಾಚೆ ಅರ್ಧಕ್ಕೆ ಬಂದು ಕರು ಸತ್ತು  ಹೋಗುವ ಪ್ರಸಂಗ,  ಹುಳು ಬಿದ್ದ ಹಸುವಿನ ಕಾಲು ಟ್ರೀಟ್ಮೆಂಟ್ ಮಾಡಿದ್ದು, ಕಣ್ಣು ಕಳೆದುಕೊಂಡ ವೇದನೆ ಪಡುತ್ತಿದ್ದ ಹಸುವಿಗೆ ಬ್ಯಾಂಡೇಜ್ ಮಾಡಿದ್ದ ನೆಮ್ಮದಿ ಈ ಗುಂಪಿಗಿದೆ. 

ಕೊಲ್ಲೂರು ಮಠದ ಸ್ವಾಮೀಜಿ ಹೆಸರಿನಲ್ಲಿ ವಂಚನೆ, ಲಕ್ಷಗಟ್ಟಲೆ ಕಿತ್ತ ಕಿರಾತಕರು!

ಅಪಘಾತ ತಪ್ಪಿಸಲು 'ರೇಡಿಯಂ' ಪ್ಲಾನ್..!
ಬಿಡಾಡಿ ದನಗಳು ರಾತ್ರಿ ವೇಳೆ ಅಪಘಾತಕ್ಕೀಡಾಗಿ ಗಾಯಗೊಳ್ತವೆ.  ಇದನ್ನ ತಪ್ಪಿಸೋದಕ್ಕೆ ಬೆಟಗೇರಿಯ ಯುವಕರು ರೇಡಿಯಂ ಪ್ಲಾನ್‌ ಮಾಡ್ಕೊಂಡಿದಾರೆ. ಬಿಡಾಡಿ ಜಾನುವಾರುಗಳ ಕೊಂಬಿಗೆ ರೇಡಿಯಂ ಅಂಟಿಸೋ ಮೂಲಕ ರಾತ್ರಿ ವೇಳೆಯೂ ವಾಹನದ ಹೆಡ್ ಲೈಟ್ ಗೆ ವಿಸಿಬಲ್ ಆಗೋಥರ ಮಾಡ್ತಾರೆ. ಹೀಗೆ ಮಾಡೋದ್ರಿಂದ ಹಸುಗಳ ಅಪಘಾತ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿದೆ ಅಂತಾ ಯುವಕರ ಗುಂಪಿನಲ್ಲೊಬ್ಬರಾದ ಸ್ವರೂಪ್  ಹೇಳ್ತಾರೆ. ಹೆಸರು ಪ್ರಚಾರ ಬೇಡ. ಗೋ ಮಾತೆಯ ಸೇವೆಯನ್ನ ಮಾಡೋದು ನಮ್ಮ ಕರ್ತವ್ಯ ಅಂತಾ ಸದ್ದಿಲ್ಲದೇ ಗೋ ಸೇವೆ ಮಾಡ್ತಿರೋ ಈ ಯುವಕರಿಗೆ ಸಲಾಂ.

click me!