ದಾವಣಗೆರೆ ನಗರ ಇದೀಗ ಸಿಸಿ ಟಿ ವಿ ಕಣ್ಗಾವಲ್ಲಿನಿದೆ. ದಾವಣಗೆರೆ ನಗರದ ಪ್ರಮುಖ ರಸ್ತೆಗಳಲ್ಲಿ 210 ಕ್ಕು ಹೆಚ್ಚು ಕ್ಯಾಮೆರಾಗಳು 24/7 ಕೆಲಸ ನಿರ್ವಹಿಸುತ್ತಿವೆ.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂನ್ 30): ತಲೆಗೆ ಹೆಲ್ಮೆಟ್ ಇಲ್ದೇ ಬೈಕ್ ನಲ್ಲಿ ದಿಲ್ ದಾರ್ ಆಗಿ ಗಾಡಿ ಓಡಿಸಬಹುದು, ಏನ್ ಮಾಡಿದ್ರು ನಡಿಯತ್ತೇ ಎನ್ನೋರು ಇನ್ಮೆಲೆ ಹುಷಾರಾಗಿರಬೇಕು. ಏಕೆಂದ್ರೆ ನಿಮ್ಮನ್ನ ವಾಚ್ ಮಾಡೋಕೆ ಸಿಟಿ ತುಂಬಾ ಕ್ಯಾಮೆರಗಳು 24/7 ಅಲರ್ಟ್ ಇವೆ.
ದಾವಣಗೆರೆ ನಗರ ಇದೀಗ ಸಿಸಿ ಟಿ ವಿ ಕಣ್ಗಾವಲ್ಲಿನಿದೆ. ದಾವಣಗೆರೆ ನಗರದ ಪ್ರಮುಖ ರಸ್ತೆಗಳಲ್ಲಿ 210 ಕ್ಕೂ ಹೆಚ್ಚು ಕ್ಯಾಮೆರಾಗಳು 24/7 ಕೆಲಸ ನಿರ್ವಹಿಸುತ್ತಿವೆ. ಅದನ್ನು ದಾವಣಗೆರೆ ಪೊಲೀಸರು ಇಪ್ಪತ್ತನ್ನಾಲ್ಕು ಗಂಟೆಯೂ ಮಾನಿಟಿರಿಂಗ್ ಮಾಡುತ್ತಿದ್ದಾರೆ. ಇಂತಹದೊಂದು ಟ್ರಾಪಿಕ್ ಕಮಾಂಡೆಂಟ್ ಕಂಟ್ರೋಲ್ ಯುನಿಟ್ ದಾವಣಗೆರೆಯಲ್ಲಿ ಕಾರ್ಯಾರಂಭಗೊಂಡಿದೆ.
ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿ ಆಪೀಸ್ ನಲ್ಲಿ ಟ್ರಾಫಿಕ್ ಕಮಾಂಡೆಂಟ್ ಕಚೇರಿ ವಾಪನ್ ಆಗಿದ್ದು ವಾಹನಸವಾರರು, ಕಳ್ಳಕಾಕರಿಗೆ, ಕಾನೂನು ಉಲ್ಲಂಘಿಸುವವರಿಗೆ ದಂಡ ಕಟ್ಟಿಟ್ಟಿ ಬುತ್ತಿಯಾಗಿದೆ.
DAVANAGERE; ವಿಚ್ಚೇದನ ಪಡೆದಿದ್ದ ದಂಪತಿಗಳನ್ನು ಒಂದು ಮಾಡಿದ ಲೋಕ ಅದಾಲತ್
ದಾವಣಗೆರೆ ಪಿ ಬಿ ರಸ್ತೆ, ಹದಡಿ ರಸ್ತೆ, ಶಾಮನೂರು ರಸ್ತೆ,ಆಶೋಕ ರಸ್ತೆ, ಮಂಡಿಪೇಟೆ, ಗಡಿಯಾರ ಕಂಬ ಎವಿಕೆ ರಸ್ತೆ, ಎಂಸಿಸಿ ಎ ಬ್ಲಾಕ್ ಬಿ ಬ್ಲಾಕ್, ಗುಂಡಿ ಸರ್ಕಲ್ , ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್ , ವಿದ್ಯಾರ್ಥಿ ಭವನ ಹೀಗೆ ಎಲ್ಲೆ ಹೋದ್ರು ನಿಮ್ಮನ್ನು ಸಿಸಿಟಿವಿ ಸರ್ವಲೆನ್ಸ್ ವಾಚ್ ಮಾಡುತ್ತಿರುತ್ತದೆ. ನೀವು ಬೈಕ್ ಕಾರು , ಅಥವಾ ನಡೆದುಕೊಂಡು ಹೋದ್ರು ನಿಮ್ಮ ಎಲ್ಲಾ ಚಲನವಲನಗಳು ಸಿಸಿಟಿವಿಯಲ್ಲಿ ರೇಕಾರ್ಡ್ ಗ್ಯಾರಂಟಿ. ದಾವಣಗೆರೆ ಪೊಲೀಸ್ ಕಚೇರಿ, ದಾವಣಗೆರೆ ಸ್ಮಾರ್ಟ್ ಸಿಟಿ ಪ್ರಾಧಿಕಾರ ದ ವತಿಯಿಂದ ಇಡೀ ಸ್ಮಾರ್ಟ ಸಿಟಿ ನಗರ ಸಿಸಿಟಿವಿ ಕಣ್ಗಾವಲಿನಲ್ಲಿ ಬಂಧಿಯಾಗಿದೆ. ಅದಕ್ಕಾಗಿ ಪ್ರತಿದಿನ 20 ಕ್ಕು ಹೆಚ್ಚು ಪೊಲೀಸರ ತಂಡ ಮಾನಿಟರಿಂಗ್ ಗೆ ನಿಯೋಜನೆ ಆಗಿದೆ
ಕಳೆದ ಮೂರು ದಿನಗಳ ಹಿಂದೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಇಂತಹದೊಂದು ಟ್ರಾಪಿಕ್ ಕಮಾಂಡೆಂಟ್ ಕಚೇರಿಯನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಿದ್ದಾರೆ.
ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಅದರ ಕಾರ್ಯವೈಖರಿ ಬಗ್ಗೆ ವಿಸೃತ ಮಾಹಿತಿ ನೀಡಿದ್ದಾರೆ. 210 ಕ್ಯಾಮೆರಾಗಳು ಮೂರು ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಒಂದು ಟ್ರಾಫಿಕ್ ಗಳಲ್ಲಿ ಸಿಗ್ನಲ್ ಜಂಪ್, ಹೆಲ್ಮೆಟ್ ಧರಸಿದೇ ಪ್ರಯಾಣ, ವೇಗದ ಬೇಕಾಬಿಟ್ಟಿ ಚಾಲನೆ ಹೀಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ರೆ ಅವರಿಗೆ ಪೈನ್ ಅವರ ಮನೆಗೆ ಹೋಗುತ್ತದೆ..
ಎರಡನೇಯದಾಗಿ ಟ್ರಾಫಿಕ್ ಸರ್ವಲೆನ್ಸ್ ಕೆಲಸವನ್ನು ಈ ಸಿಸಿಟಿವಿ ಮೂಲಕ ಮಾಡಲಾಗುತ್ತದೆ. ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಸಂಚಾರ ಮಾಡುವವರಿಗೆ ಯಾವ ಮಾರ್ಗ ಸುರಕ್ಷಿತ, ಪೊಲೀಸರು ಎಲ್ಲೆಲ್ಲಿ ಕೆಲಸ ಮಾಡಬೇಕು ಹೀಗೆ ಟ್ರಾಫಿಕ್ ಕಂಟ್ರೋಲ್ ಮಾಡುವುದಕ್ಕೆ ಸಿಸಿಟಿವಿ ಉಪಯೋಗವಾಗಲಿದೆ.
ಇನ್ನು ಮೂರನೇಯದಾಗಿ ಕ್ರೈಮ್ ಡಿಟೆಕ್ಸನ್ ಗೆ ಸಿಸಿಟಿವಿ ಬಳಕೆಯಾಗುತ್ತಿದೆ.. ಇತ್ತಿಚೆಗೆ ಬೈಕ್ ಗಳಲ್ಲಿ ಸರಣಿಗಳ್ಳತನ ಹೆಚ್ಚಾಗಿ ನಡೆಯುತ್ತಿದ್ದು ಬೈಕ್ ಸವಾರರ ಮೇಲೆ ನಿಗಾ ಇರಿಸಲು, ಅವರ ಬೈಕ್ ನಂಬರ್ ಟ್ರೇಸ್ ಮಾಡಲು, ಗಮನ ಬೇರೆಡೆ ಸೆಳೆದು ಹಣ ವಡೆವೆ ದೋಚುವ ಟೀಮ್ ಗಳ ಮೇಲೆ ನಿಗಾ ಇಡಲು ಸಿಸಿಟಿವಿ ಸರ್ವಲೆನ್ಸ್ ಪ್ರತಿದಿನ ವಾಚ್ ಮಾಡಲಿದೆ.
Davanagere; ನಾಲ್ಕು ಬಾಲ್ಯವಿವಾಹಕ್ಕೆ ಬ್ರೇಕ್, ಕಣ್ತಪ್ಪಿಸಿ ಮದುವೆಯಾದವ ಅರೆಸ್ಟ್
ದಾವಣಗೆರೆ ಸಿಟಿಗೆ ಒಳಬರುವುದಕ್ಕೆ ಆರು ಮಾರ್ಗ ಗಳಿದ್ದು ಆ ಎಲ್ಲಾ ಎಂಟ್ರೆನ್ಸ್ ಗಳಲ್ಲಿ ವೆಹಿಕಲ್ ನಂಬರ್ ರಿಜಿಸ್ಟರ್ ಮಾಡುವ ಎಎನ್ ಪಿ ಆರ್ ಕ್ಯಾಮೆರಾಗಳು 24 ಗಂಟೆ ಕಾರ್ಯನಿರ್ವಹಿಸಲಿವೆ.. ಇದೀಗ 210 ಸಿಸಿಟಿವಿ ಕ್ಯಾಮರಾಗಳು ಪ್ರತಿ ಪ್ರಮುಖ ರಸ್ತೆಯನ್ನು ಕವರ್ ಮಾಡಿದ್ದು ಮುಂದಿನ ದಿನಗಳಲ್ಲಿ ಸಬ್ ರೋಡ್ ಗಳಲ್ಲು ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದು ಎಸ್ ಪಿ ರಿಷ್ಯಂತ್ ತಿಳಿಸಿದ್ದಾರೆ..
ಆಸ್ಪತ್ರೆಗಳಲ್ಲಿ ಮಕ್ಕಳ ಕಳ್ಳತನ, ಮನೆಗಳ ಬೀಗ ಮುರಿದು ಕಳ್ಳತನ, ರಾತ್ರಿವಿಡಿ ಕುಡಿದು ಖಾಲಿ ಸೈಟ್ ನಲ್ಲಿ ಜಗಳವಾಡುವ ಪೋಕರಿಗಳು. ಮನೆಯಲ್ಲಿ ದುಡ್ಡಿದೆ ಅಂತಾ ದುಬಾರಿ ಬೈಕ್ ಗಳನ್ನ ತಂದು ಅವಳ ಪ್ರದರ್ಶನಕ್ಕಾಗಿ ಅತಿ ಜೋರಾಗಿ ಓಡಿಸಿ ಇತರರಿಗೆ ತೊಂದರೆ ಕೊಡುವುದು, ಹೀಗೆ ಹತ್ತು ಹಲವಾರು ಪ್ರಕಾರದ ಪ್ರಕರಣಗಳ ಪತ್ತೆಗು ಈ ಸಿಸಿಟಿವಿ ಸರ್ವಲೆನ್ಸ್ ಸಹಕಾರಿ. ಯಾವುದೇ ಸಭೆ ಸಮಾರಂಭಗಳ ನಡೆದ ಬಗ್ಗೆ ಖಚಿತ ಮಾಹಿತಿ ನೀಡುವ ವ್ಯವಸ್ಥೆ ಸರ್ವಲೆನ್ಸ್ ನಲ್ಲಿ ಅಳವಡಿಕೆಯಾಗಿದೆ.