ಹೊಸಕೋಟೆ ಸ್ವಾಭಿಮಾನ ಮಾರಾಟಕ್ಕಿಲ್ಲ, ಎಂಟಿಬಿಗೆ ಠಕ್ಕರ್ ನೀಡಿದ ಶರತ್ ಬಚ್ಚೇಗೌಡ

Published : Jun 30, 2022, 12:16 PM IST
ಹೊಸಕೋಟೆ ಸ್ವಾಭಿಮಾನ ಮಾರಾಟಕ್ಕಿಲ್ಲ, ಎಂಟಿಬಿಗೆ ಠಕ್ಕರ್ ನೀಡಿದ ಶರತ್ ಬಚ್ಚೇಗೌಡ

ಸಾರಾಂಶ

ಒಕ್ಕಲಿಗ ಸಚಿವರನ್ನ ಕರೆಸಿ ಎಂಟಿಬಿ ನಾಗರಾಜ್ ಕೆಂಪೇಗೌಡ ಜಯಂತಿ ಆಚರಣೆ ಸಚಿವ ಎಂಟಿಬಿ ನಾಗರಾಜ್ ಗೆ ಟಕ್ಕರ್ ಕೊಟ್ಟ ಬಚ್ಚೇಗೌಡ ಕುಟುಂಬ ಎರಡು ದಿನಗಳಿಂದೆ ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಉತ್ಸವ

ವರದಿ : ಟಿ. ಮಂಜುನಾಥ್ ‌ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣನ್ಯೂಸ್

ಹೊಸಕೋಟೆ (ಜೂನ್ 30): ನಾಡಪ್ರಭು ಕೆಂಪೇಗೌಡರ  ಜಯಂತಿ ನೆಪದಲ್ಲಿ ರಾಜ್ಯದಲ್ಲೇ ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ  ವಿಧಾನ ಸಭಾಕ್ಷೇತ್ರದಲ್ಲಿ  ಜಿದ್ದಾಜಿದ್ದಿನ ಕೆಂಪೇಗೌಡ ಉತ್ಸವಗಳು ನಡೆಯುತ್ತಿವೆ, ಇದೊಂದು ರೀತಿಯಾಗಿ ಒಕ್ಕಲಿಗೆ ಶಕ್ತಿ ಪ್ರದರ್ಶನ ನಡೆಯುತ್ತಿದೆ, ಹೊಸಕೋಟೆ ಜನ 25 ಲಕ್ಷಕ್ಕೋ ಇಲ್ಲವೇ 50 ಲಕ್ಷಕ್ಕೋ ಮಾರಾಟಕ್ಕಿಲ್ಲವೆಂದು‌ ಎದುರಾಳಿ ಎಂಟಿಬಿ.ನಾಗರಾಜ್ ಗೆ ಸ್ವಾಭಿಮಾನಿ ಶಾಸಕ.ಶರತ್ ಬಚ್ಚೇಗೌಡ ಕೆಂಪೇಗೌಡರ ಜಯಂತಿಯಲ್ಲಿ ಠಕ್ಕರ್ ನೀಡಿದ್ದಾರೆ.

ಎರಡು ದಿನಗಳಿಂದೆ ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಉತ್ಸವಕ್ಕೆ ಒಕ್ಕಲಿಗ ಮಂತ್ರಿ ಆರ್.ಅಶೋಕ್ ರನ್ನ ಕರೆಸಿ ಕೆಂಪೇಗೌಡರ ಸಮೂದಾಯ ಭವನಕ್ಕೆ 3 ಎಕರೆ ಜಮೀನು ನೀಡೋದಾಗಿ ಘೋಷಿಸಿದ್ದರು, ಎಂಟಿಬಿ.ನಾಗರಾಜ್ ಮಾತಾನಾಡಿ ತಮ್ಮ ಸ್ವಂತ ಹಣ 50ಲಕ್ಷರೂಗಳನ್ನ ಭವನಕ್ಕೆ ನೀಡೋದಾಗಿ ಘೋಷಿಸಿದಕ್ಕೆ ಇಂದು ಠಕ್ಕರ್ ನೀಡಿದರು, ಸಂಸದ ಡಿ.ಕೆ.ಸುರೇಶ್ ಮಾತಾನಾಡಿ 2023ಕ್ಕೆ ಮತ್ತೊಮ್ಮೆ ಶರತ್ ಬಚ್ಚೇಗೌಡರನ್ನ ಗೆಲ್ಲಿಸುವಂತೆ ಒಕ್ಕಲಿಗೆ ಕರೆ ನೀಡುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದರು.

ಹೊಸಕೋಟೆಯಲ್ಲಿ ಒಕ್ಕಲಿಗರ ಶಕ್ತಿ ಪ್ರದರ್ಶನ:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲು ಮೂಲಕ ಒಕ್ಕಲಿಗರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇಷ್ಟು ದಿನ ತಾಲೂಕಿನಲ್ಲಿ ಎರಡು ಒಕ್ಕಲಿಗ ಸಮುದಾಯದ ಸಂಘಗಳಿದ್ದವು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ   ಎರಡು ಸಂಘಗಳು ಒಟ್ಟಾಗಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.  ಹೊಸಕೋಟೆ ಪಟ್ಟಣದಲ್ಲಿ ಅದ್ದೂರಿಯಾದ ಕೆಂಪೇಗೌಡ ಜಯಂತಿ ಆಚರಣೆ ಮಾಡುವುದರ ಮೂಲಕ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ದಸರಾ ಮಾದರಿಯಲ್ಲಿ ಕೆಂಪೇಗೌಡ ಜಯಂತಿ: ನಿರ್ಮಲಾನಂದನಾಥ ಸ್ವಾಮೀಜಿ

ತಾಲೂಕಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಒಕ್ಕಲಿಗರ ಸಮುದಾಯದವರು ಸೇರಿ 50 ಹೆಚ್ಚು ಪಲ್ಲಕ್ಕಿಗಳೊಂದಿಗೆ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಯಿತು. ಪೀಠಾದಿಪತಿಗಳಾದ ಚಂದ್ರಶೇಖರಸ್ವಾಮೀಜಿ, ನಂಜಾವದೂತ ಮುಂತಾದ ಸ್ವಾಮೀಜಿಗಳು ಸಂಸದ ಬಚ್ಚೇಗೌಡರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಎರಡು ದಿನಗಳಿಂದಷ್ಟೇ ಎಂಟಿಬಿ.ನಾಗರಾಜ್ ಕೆಂಪೇಗೌಡ ಜಯಂತಿಯನ್ನ ಸರ್ಕಾರದ ‌ವತಿಯಿಂದ ಆಚರಿಸಿ ಕೆಂಪೇಗೌಡ ಭವನಕ್ಕೆ 3 ಎಕರೆ ಜಮೀನು, ನಿಗಮ ಮಂಡಳಿವತಿಯಿಂದ ಭವನ‌‌ ನಿರ್ಮಾಣಕ್ಕೆ ಸಹಾಯ ಮಾಡೋದಾಗಿ ಆರ್.ಆಶೋಕ್ ಘೋಷಿಸಿದ್ದರು, ಎಂಟಿಬಿ.ನಾಗರಾಜ್ ಸ್ವಂತ ಹಣದಿಂದ ಭವನಕ್ಕೆ 50ಲಕ್ಷರೂಗಳ ಸಹಾಯ ಮಾಡೋದಾಗಿ ಘೋಷಿಸಿದಕ್ಕೆ ಸ್ವಾಭಿಮಾನಿ ಶಾಸಕ.ಶರತ್ ಬಚ್ಚೇಗೌಡ ತಾಲೂಕಿನ ಜನ 25 ಲಕ್ಷಕೋ ಇಲ್ಲವೇ 50 ಲಕ್ಷಕ್ಕೋ ಮಾರಾಟಕ್ಕಿಲ್ಲವೆನ್ನುವ ಮೂಲಕ ತಿರುಗೇಟು ನೀಡಿದರು.

 ಹೊಸಕೋಟೆಯ ಕೆಂಪೇಗೌಡ ಜಯಂತಿ ಒಂದು ರೀತಿಯ ಪ್ರತಿಷ್ಠೆಯ ಜಯಂತಿಯಾಗಿದೆ, ಎರಡು ದಿನಗಳಿಂದಷ್ಟೇ ಎಂಟಿಬಿ. ಟೀಮ್ ನಡೆಸಿದ್ದ ಜಯಂತಿಗೆ ಎದುರಾಗಿ ಬಚ್ಚೇಗೌಡರ ತಂಡ ಕೆಂಪೇಗೌಡ ಜಯಂತಿಯಲ್ಲಿ ಡಿ.ಕೆ.ಸಹೋದರರು ಆಹ್ವಾನವಿತ್ತು, ಸಂಸದ ಡಿ.ಕೆ ಸುರೇಶ್ ಭಾಗವಹಿಸುವ ಮೂಲಕ ಸಮೂದಾಯಕ್ಕೆ ಸಂದೇಶ ರವಾನಿಸಿದ್ದಾರೆ,  2023ರ ಚುನಾವಣೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಪರ ಒಕ್ಕಲಿಗ ಸಮುದಾಯದವೂ ನಿಲ್ಲಬೇಕು. ಮತ್ತೊಮ್ಮೆ ಹೊಸಕೋಟೆ ಕ್ಷೇತ್ರದಲ್ಲಿ ಶಾಸಕ ಶರತ್ ಬಚ್ಚೇಗೌಡರನ್ನ ಶಾಸಕರಾನ್ನಗಿ ಮಾಡಬೇಕು ಆ ಮೂಲಕ ಡಿ.ಕೆ.ಶಿವಕುಮಾರ್ ಜೊತೇ ಶರತ್ ಬಚ್ಚೇಗೌಡರನ್ನ ಕಳಿಸಬೇಕೆಂದು ಡಿ.ಕೆ.ಸುರೇಶ್ ಸಮೂದಾಯಕ್ಕೆ ಕರೆ ನೀಡುವ ಚುನಾವಣಾ ರಣ ಕಹಳೆ ಮೊಳಗಿಸಿದರು.

ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ: ಸಿಎಂ ಬೊಮ್ಮಾಯಿ

ಒಟ್ಟಾರೆ ಹೊಸಕೋಟೆಯ ಕೆಂಪೇಗೌಡರ ಜಯಂತಿಯಲ್ಲಿ SSLC  ಮತ್ತು PUC ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನ ಸನ್ಮಾನಿಸಿದರು, ಮುಂದಿನ ವಿಧಾನ ಸಭಾ ಚುನಾವಣೆಗೆ ಒಕ್ಕಲಿಗ ಸಮುದಾಯದ ಶರತ್ ಬಚ್ಚೇಗೌಡರ ಪರ ನಿಲ್ಲುವುದಕ್ಕೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದೇ ರೀತಿ ಒಕ್ಕಲಿಗ ಸಮುದಾಯ ಒಗ್ಗಟ್ಟು ಪ್ರದರ್ಶನ ಮಾಡಿದರೆ ಸಚಿವ ಎಂಟಿಬಿ ನಾಗರಾಜ್ ಗೆ ಚುನಾವಣೆ ವೇಳೆ ನುಂಗಲಾರದ ತುತ್ತಾಗಿ ಪರಿಣಮಿಸೋದಂತು ಗ್ಯಾರೆಂಟಿ,

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್