ಸುಡಾನ್‌ನಿಂದ ಮರಳಿದ ದಾವಣಗೆರೆಯ ಹಕ್ಕಿ-ಪಿಕ್ಕಿ ಜನರು: ಚಾಕು ಎದೆಗಿಟ್ಟು ಲೂಟಿ ಮಾಡಿದ್ರು!

By Sathish Kumar KH  |  First Published May 1, 2023, 9:14 PM IST

ಸುಡಾನ್ ದೇಶದಿಂದ ದಾವಣಗೆರೆ ಹಕ್ಕಿಪಿಕ್ಕಿ ಜನಾಂಗದವರು ಸುರಕ್ಷಿತವಾಗಿ ಬಂದಿದ್ದಾರೆ ಎಂದು‌ ಕರ್ನಾಟಕ ಹಕ್ಕಿಪಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಹೇಳಿದರು.


ವರದಿ: ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್

ದಾವಣಗೆರೆ. (ಮೇ 1) ಸುಡಾನ್ ದೇಶದಿಂದ ದಾವಣಗೆರೆ ಹಕ್ಕಿಪಿಕ್ಕಿ ಜನಾಂಗದವರು ಸುರಕ್ಷಿತವಾಗಿ ಬಂದಿದ್ದಾರೆ ಭಾರತ ಸರ್ಕಾರ ನಮ್ಮವರನ್ನು ಸುರಕ್ಷಿತವಾಗಿ ಕರೆತಂದಿದೆ ಎಂದು‌ ಕರ್ನಾಟಕ ಹಕ್ಕಿಪಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಹೇಳಿದರು.

Tap to resize

Latest Videos

ಕಳೆದ 20 ದಿನಗಳಿಂದ ಸೂಡಾನ್ ದೇಶದಲ್ಲಿ ಯುದ್ದ ನಡೆಯುತ್ತಿದೆ. ರಾಜ್ಯ ಹಾಗೂ ಜಿಲ್ಲೆಯಿಂದ ಸುಮಾರು 800 ಕ್ಕೂ‌ ಹೆಚ್ವು ಹಕ್ಕಿಪಿಕ್ಕಿ ಜನಾಂಗದವರು ವ್ಯಾಪಾರಕ್ಕಾಗಿ ತೆರಳಿದ್ದರು.ಆಯುರ್ವೇದ, ಗಿಡಮೂಲಿಕೆ ವ್ಯಾಪಾರಕ್ಕೆಂದು ತೆರಳಿದ್ದರು. ನಮ್ಮ ಜನ ಆಫ್ರಿಕಾ, ಯುರೋಪ್, ಅಮೇರಿಕಾ‌ದೇಶಕ್ಕೆ ಹೊಗುತ್ತಾರೆ ಹೊಟ್ಟೆಪಾಡಿಗಾಗಿ ಹಾಗೂ ಜೀವನ‌ಕಟ್ಟಿಕೊಳ್ಳಲು ವ್ಯಾಪಾರ ಮಾಡುತ್ತಾರೆ. ಈ‌  ಬಾರಿ ಹೋದಾಗ ಸೂಡಾನ್ ನಲ್ಲಿ ಯುದ್ದ ಘೋಷಣೆಯಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಕೇಂದ್ರ ಸರ್ಕಾರ ಸುರಕ್ಷಿತವಾಗಿ‌ ನಮ್ಮವರನ್ನು ಕರೆತಂದಿದ್ದಾರೆ ಆದರೆ ನಮ್ಮ ಸರ್ಕಾರಗಳು‌ ನಮಗೆ ಉಳುಮೆ‌ಮಾಡಲು‌ ಭೂಮಿ,‌ನಿವೇಶನ ರಹಿತರಿಗೆ ಹಾಗೂ ಜೀವನ ನಡೆಸಲು ವ್ಯವಸ್ಥೆ ಮಾಡಬೇಕು ಆಗ ಮಾತ್ರ ನಮ್ಮವರು ಹೊಟ್ಟೆಪಾಡಿಗಾಗಿ ಹೋರದೇಶಗಳಿಗೆ ತೆರಳುವುದು ತಪ್ಪುತ್ತದೆ ಎಂದು ಮನವಿ ಮಾಡಿದರು.

Operation Kaveri: ಸೂಡಾನ್‌ನಲ್ಲಿ ಇನ್ನೂ 500 ಕನ್ನಡಿಗರಿದ್ದೇವೆ, ಕಾಪಾಡಿ!

ಸೂಡಾನ್ ನಲ್ಲಿ ಸಿಲುಕಿ ಸುರಕ್ಷಿತವಾಗಿ ಬಂದಿರುವ ನಂದಕುಮಾರ್ ಮಾತನಾಡಿ ಇದ್ದಕ್ಕಿದ್ದಂತೆ ಯುದ್ದ ನಡೆಯಿತು ನಾವು ಹೊರಗಡೆ ಹೋದಾಗ ನಮ್ಮ ಹಣ ,ಮೊಬೈಲ್ ಕಸಿದುಕೊಂಡ ಘಟನೆಯೂ ಜರುಗಿತ್ತು ಆದರೆ ಹಲ್ಲೆ ಮಾಡಲಿಲ್ಲ ನಮಗೆ ಜೀವಭಯ ಉಂಟಾಗಿತ್ತು.ನಮ್ಮವರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆತಂದಿದೆ.ದಾವಣಗೆರೆ ಜಿಲ್ಲೆಯಿಂದ ಸುಮಾರು 43 ಜನರು ಹೊಗಿದ್ದೆವು.ಈಗ 30 ಜನ ಬಂದಿದ್ದೇವೆ.ಮುಂದಿನ ದಿನಗಳಲ್ಲಿ ಎಲ್ಲರೂ ಸುರಕ್ಷಿತವಾಗಿ ಆಗಮಿಸಲಿದ್ದಾರೆ ಎಂದರು. ಫಾರಿನ್ ಎಂಬೆಸಿಯ ಸ್ವಯಂಸೇವಕರಾದ ದರ್ಶಿತ್ ಮೆಹತಾ ಅವರು ನಮಗೆ ಸಾಕಷ್ಟು ನೆರವು ನೀಡಿದರು ಎಂದರು.

ಭವಾನಿ ಎಂಬುವವರು ಮಾತನಾಡಿ ಯುದ್ದ ನಡೆದಾಗ ನಮಗೆ ಚಾಕು ತೋರಿಸಿ ಲೂಟಿ ಮಾಡಿದರು. ನಮ್ಮ ತಾಯಿ ಸೇರಿದಂತೆ ಅನೇಕರು ಸುರಕ್ಷಿತವಾಗಿದ್ದಾರೆ. ನಾಳೆ ಅವರೆಲ್ಲರೂ ಆಗಮಿಸಲಿದ್ದಾರೆ. ಸರ್ಕಾರ ನಮಗೆ ಮೀಸಲಾತಿ ಸೇರಿದಂತೆ ‌ಎಲ್ಲಾ ಸೌಲಭ್ಯ ನೀಡಿದರೆ ನಾವು ಸಹ‌ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.

ನಾವಿರುವ ಸ್ಥಳದಿಂದಲೇ ಏರ್‌ಲಿಫ್ಟ್‌ ಮಾಡಿ: ‘ಆಪರೇಷನ್‌ ಕಾವೇರಿ’ಯಿಂದ ನಮಗಾರಿಗೂ ನೆರವು ಸಿಗುತ್ತಿಲ್ಲ. ನಾವೆಲ್ಲರೂ ತೀವ್ರ ಕಷ್ಟದಲ್ಲೇ ಕ್ಷಣ ಕಳೆಯುತ್ತಿದ್ದೇವೆ. ಮಧುಮೇಹ, ಕೈ-ಕಾಲು ನೋವು, ಲೋ ಬಿಪಿ, ಖಿನ್ನತೆ...ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುತ್ತಿದ್ದೇವೆ. ಖಾರ್ತೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೆ, ಹೇಗಾದರೂ ಬಸ್ಸನ್ನು ಮಾಡಿಕೊಂಡು, ಪೋರ್ಚ್‌ ಸೂಡಾನ್‌ಗೆ ಬನ್ನಿ ಎನ್ನುತ್ತಿದ್ದಾರೆ. ನಾವೆಲ್ಲರೂ ಕಳೆದ 2-3 ದಿನದಿಂದ ಅಲ್ಬಶೇರ್‌ ನಗರದ ಬಸ್ಸು ನಿಲ್ದಾಣ ಮೋಗಾಫ್‌ಗೆ ಬಂದಿದ್ದೇವೆ. ಆದರೆ, ಬಸ್ಸುಗಳ ಸುಳಿವಿಲ್ಲ. ಹೆಚ್ಚು ಬಾಡಿಗೆ ಕೊಡುತ್ತೇವೆ ಎಂದರೂ ಬಸ್ಸುಗಳು ಬರುತ್ತಿಲ್ಲ. ನಮ್ಮಲ್ಲಿ ಈಗ ಯಾರ ಬಳಿಯೂ ಹಣವಿಲ್ಲ’. ಇದು ಸೂಡಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತ್ರಸ್ತ, ಹಕ್ಕಿಪಿಕ್ಕಿ ಜನಾಂಗದ ಗೋಪನಾಳ್‌ ಪ್ರಭು ಎಂಬುವವರು ಅಳಲು ತೋಡಿಕೊಂಡಿದ್ದಾರೆ. 

ಸೂಡಾನ್‌ನಿಂದ ಕರ್ನಾಟಕಕ್ಕೆ ಬಂದವರಲ್ಲಿ ಹಳದಿ ಜ್ವರದ ಭೀತಿ..!

ಇನ್ನೂ 500 ಜನರು ಅತಂತ್ರ ಸ್ಥಿತಿ: ‘ಆಪರೇಷನ್‌ ಕಾವೇರಿ’ ಮೂಲಕ ಸೂಡಾನ್‌ನ ರಾಜಧಾನಿ ಖಾರ್ಟೂಮ್‌ನ ಕಂಪನಿಗಳಲ್ಲಿ, ಕಾರ್ಖಾನೆಗಳ ಮಾಲೀಕರಿಂದ ಹಣ ಪಡೆದು, ಅಲ್ಲಿಂದ 4 ಬಸ್ಸುಗಳಲ್ಲಿ ಕೆಲಸಗಾರರನ್ನು ಕರೆದೊಯ್ದಿದ್ದಾರೆ. ಹಕ್ಕಿಪಿಕ್ಕಿ ಜನರೂ ಅಲ್ಲಿಂದ ಹೋಗಿದ್ದಾರೆ. ಆದರೆ, ಅಲ್ಬಶೇರ್‌, ಗಿನಿನಾ, ಗದಾರಿ, ಕಸಾಲ, ಚಾಟ್‌ ಬಾರ್ಡರ್‌ ಸೇರಿ ಹಲವಾರು ಗ್ರಾಮಗಳಲ್ಲಿ ಇನ್ನೂ 500ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಜನರು ಅತಂತ್ರರಾಗಿದ್ದೇವೆ. ಅಲ್ಭಶೇರ್‌ ನಗರದಿಂದ ಪೋರ್ಚ್‌ ಸೂಡಾನ್‌ಗೆ ಹೋಗುವುದಕ್ಕೆ ಬಸ್ಸುಗಳು ಸಿಗುತ್ತಿಲ್ಲ. ಅಲ್ಬಶೇರ್‌ ನಗರದಲ್ಲೇ ವಿಮಾನ ನಿಲ್ದಾಣ ಇದ್ದು, ಇಲ್ಲಿಂದಲೇ ನಮ್ಮನ್ನು ಏರ್‌ ಲಿಫ್ಟ್‌ ಮಾಡುವ ಮೂಲಕ ರಕ್ಷಣೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

click me!