ದಾವಣಗೆರೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ: ಆರು ತಿಂಗಳಲ್ಲಿ 1 ಕೋಟಿ ರೂ. ದಂಡ ವಸೂಲಿ

By Govindaraj S  |  First Published Jul 3, 2022, 1:28 PM IST

ಜಿಲ್ಲೆಯ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆಯಲ್ಲಿ 1 ಕೋಟಿ ದಂಡ ವಸೂಲಿ ಮಾಡಿದ್ದಾರೆ. ದಾವಣಗೆರೆ ಉತ್ತರ ದಕ್ಷಿಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ  1 ಕೋಟಿ 2 ಲಕ್ಷದ 27 ಸಾವಿರ ದಂಡ ವಸೂಲು ಮಾಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 


ದಾವಣಗೆರೆ (ಜು.03): ಜಿಲ್ಲೆಯ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆಯಲ್ಲಿ 1 ಕೋಟಿ ದಂಡ ವಸೂಲಿ ಮಾಡಿದ್ದಾರೆ. ದಾವಣಗೆರೆ ಉತ್ತರ ದಕ್ಷಿಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ  1 ಕೋಟಿ 2 ಲಕ್ಷದ 27 ಸಾವಿರ ದಂಡ ವಸೂಲು ಮಾಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ದಾವಣಗೆರೆ ನಗರದಲ್ಲಿ ಸಂಚಾರ ಸುರಕ್ಷತೆ ದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ  ಮಾಡಲಾಗಿದ್ದು ತ್ರಿಬಲ್ ರೈಡ್‌ಗೂ ಭಾರಿ ಪ್ರಮಾಣದ ದಂಡ ವಸೂಲು ಆಗಿದೆ.

ದಾವಣಗೆರೆ ಉತ್ತರ ಸಂಚಾರ ಠಾಣೆ: ದಾವಣಗೆರೆ  ಉತ್ತರ ಸಂಚಾರ ಠಾಣೆಯಲ್ಲಿ ಒಟ್ಟು 2804 FTVR ಪ್ರಕರಣಗಳು ದಾಖಲಾಗಿದ್ದು ಒಟ್ಟು ದಂಡದ ಮೊತ್ತ 14,88,900-00 ರೂಗಳಾಗಿದೆ. 9418 IMV ಪ್ರಕರಣಗಳು ದಾಖಲಾಗಿದ್ದು ವಸೂಲಾದ ದಂಡದ ಮೊತ್ತ 32,779-00 ರೂಗಳು. ಉತ್ತರ ಸಂಚಾರ ಠಾಣೆಯಲ್ಲಿ FTVR ಹಾಗು IMV ಒಟ್ಟು  12,222  ಪ್ರಕರಣಗಳಿಂದ ವಸೂಲಾದ ದಂಡದ  ಮೊತ್ತ, 47,66,800-00 ರೂಗಳು ಆಗಿರುತ್ತದೆ.

Latest Videos

undefined

Davangere ಪಾಲಿಕೆ ದಿವಾಳಿ, ವಿರೋಧ ಪಕ್ಷ ನಾಯಕ ಗಂಭೀರ ಆರೋಪ

ದಕ್ಷಿಣ ಸಂಚಾರ ಠಾಣೆ: ದಾವಣಗೆರೆ  ದಕ್ಷಿಣ ಸಂಚಾರ ಠಾಣೆಯಲ್ಲಿ ಒಟ್ಟು 1958 FTVR ಪ್ರಕರಣಗಳಿಂದ  10,42,300-00 ರೂ, 9217 IMV ಪ್ರಕರಣಗಳಿಂದ  41,63,500 ರೂ ದಂಡ ವಸೂಲಾಗಿರುತ್ತದೆ. ದಕ್ಷಿಣ ಸಂಚಾರ ಠಾಣೆಯಲ್ಲಿ ಒಟ್ಟು 11,175  ಪ್ರಕರಣಗಳಲ್ಲಿ  52,05,800-00 ರೂಗಳು ದಂಡ ವಸೂಲಾಗಿರುತ್ತದೆ.

ತ್ರಿಬಲ್ ರೈಡಿಂಗ್ ಮಾಡುವವರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು: TRIPLE ರೈಡಿಂಗ್ 86 ಪ್ರಕರಣ, DL ಅಮಾನತು 41, PT ಕೇಸ್ 22 6. DEFECTIVE SILENCER 40 ಪ್ರಕರಣಗಳು 40 SILENCER ಗಳನ್ನು ಸೀಜ್ ಮಾಡಲಾಗಿದೆ. ಒಟ್ಟು 5252 FTVR ಪ್ರಕರಣಗಳು, 18,635 IMV ಪ್ರಕರಣಗಳು, ಸೇರಿ ಒಟ್ಟಾರೆ ದಂಡದ ಮೊತ್ತ 01,02,27,300 (ಒಂದು ಕೋಟಿ, ಎರಡು ಲಕ್ಷದ ಇಪ್ಪತ್ತೇಳು ಸಾವಿರದ ಮುನ್ನೂರು) ರೂಪಾಯಿಗಳಾಗಿದ್ದು ಇನ್ನಾದ್ರು ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೇ  ಎಚ್ಚೆತ್ತುಕೊಳ್ಳಬೇಕಿದೆ.

click me!