
ಮಂಜುನಾಥ್, ಏಷಿಯಾನೆಟ್ ಸುವರ್ಣನ್ಯೂಸ್, ಬೆಂಗಳೂರು
ಬೆಂಗಳೂರು (ಜು.03): ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಲೇಡಿ ಸಿಂಗಂ ಅಂತಲೇ ಹೆಸರುವಾಸಿಯಾಗಿರುವ ನಿಶಾ ಜೇಮ್ಸ್ ಮತ್ತೊಮ್ಮೆ ಮೇಜರ್ ಸರ್ಜರಿ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕ, ನಿಷ್ಟಾವಂತ ಅಧಿಕಾರಿ ಅಂತಲೇ ಕರೆಸಿಕೊಳ್ಳುವ ನಿಶಾ ಜೇಮ್ಸ್ ಇಲಾಖೆಯ ಆಡಳಿತ ವಿಭಾಗದಲ್ಲಿ ಒಂದು ವರ್ಷ ಎಂಟು ತಿಂಗಳು ಕಾರ್ಯ ನಿರ್ವಹಿಸಿದ್ದಾರೆ ಹಾಗೂ ನಿರ್ವಹಿಸುತ್ತಿದ್ದಾರೆ. ಇವರ ಆಡಳಿತಾವಧಿಯಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್‌ನಲ್ಲಿ ಕಿಂಚಿತ್ತೂ ಅಕ್ರಮಕ್ಕೆ ದಾರಿ ಮಾಡಿಕೊಡದ ನಿಶಾ ಜೇಮ್ಸ್ ಇಲಾಖೆಯಲ್ಲಿ ನಡೆಯುವ ಬಗ್ಗೆ ಮಾಹಿತಿ ಪಡೆದು ಮೇಜರ್ ಸರ್ಜರಿ ನಡೆಸಿದ್ದಾರೆ.
ಲೇಡಿ ಸಿಂಗಂನಿಂದ ಏನಿದು ಸರ್ಜರಿ ಅಂತಿರಾ..?: ಮೊನ್ನೆ ನಡೆದ ಅಧಿಕಾರಿ ಸಿಬ್ಬಂಧಿಗಳ (ಕಾನ್ಸ್‌ಟೇಬಲ್‌ಗಳು) ವರ್ಗಾವಣೆಯಲ್ಲಿ ಪಾರದರ್ಶಕವಾಗಿ ನಡೆದ ಹಿನ್ನೆಲೆ ಪೊಲೀಸ್ ಇಲಾಖೆಯಲ್ಲೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಲಾಖೆಯಲ್ಲಜನ ತೊಡಕುಗಳು ಹಾಗೂ ಸಾರ್ವಜನಿಕರ ಬಳಿ ಸಿಬ್ಬಂಧಿಗಳ ವರ್ತಿಸುವ ಮಾಹಿತಿ ಪಡೆದ ನಿಶಾ ಜೇಮ್ಸ್ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಇಲಾಖೆಯಲ್ಲಿ ಮೊಟ್ಟ ಮೊದಲ ಬಾರಿಗೆ ಏಕಕಾಲದಲ್ಲಿ 3247 ಜನ ಅಧಿಕಾರಿ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿ ಬಾರಿ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ಅಪ್ಪನ ಪಿಸ್ತೂಲ್‌ನಲ್ಲಿ ಮಕ್ಕಳ ಆಟ, ಅಚಾನಕ್ಕಾಗಿ ಸಿಡಿದ ಗುಂಡಿನಿಂದ 2 ವರ್ಷದ ಪುತ್ರ ಸಾವು!
ಯಾವ ಆಧಾರದ ಮೇಲೆ ಅಧಿಕಾರಿ ಸಿಬ್ಬಂದಿಗಳ ವರ್ಗಾವಣೆ: ಸಿಬ್ಬಂದಿಗಳ ಮೇಲೆ ಸಾಕಷ್ಟು ಆರೋಪಗಳ ಕೇಳಿ ಬಂದಿರುವ ಹಿನ್ನೆಲೆ ನಿಶಾ ಜೇಮ್ಸ್ ಒಂದೇ ಠಾಣೆಯಲ್ಲಿ ಐದು ವರ್ಷ ಕರ್ತವ್ಯ ಮುಗಿಸಿರುವವರನ್ನ ಅದೇ ಡಿಸಿಪಿ ವಿಭಾಗದಲ್ಲಿ ವರ್ಗಾವಣೆ ಹಾಗೂ ಡಿಸಿಪಿ ವಿಭಾಗದಲ್ಲಿ 15 ವರ್ಷ ಕರ್ತವ್ಯ ಮುಗಿಸಿರುವವರನ್ನ ಬೇರೊಂದು ಡಿಸಿಪಿ ವಿಭಾಗಕ್ಕೆ ಎತ್ತಂಗಡಿ ಮಾಡಿದ್ದಾರೆ. ಇನ್ನೂ ಇಲಾಖೆಯಲ್ಲಿ 173 ಸಬ್ ಇನ್ಸ್‌ಪೆಕ್ಟರ್‌ಗಳನ್ನ ಕೂಡಾ ವರ್ಗಾವಣೆ ಮಾಡಿದ್ದ ಇಲಾಖೆಯಲ್ಲಿ ಮತ್ತೊಂದು ಸಂಚಲನ ಮೂಡಿಸಿದ್ದಾರೆ. ಇದರಲ್ಲಿ ಸಿಬ್ಬಂದಿ ವರ್ಗದಲ್ಲಿ ಹಲವರು ಒತ್ತಡ ತಂದಿದ್ದರೂ ಕೂಡಾ ಕ್ಯಾರೇ ಎನ್ನದ ಅಡ್ಮಿನ್ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಮತ್ತೊಮ್ಮೆ ಲೇಡಿ ಸಿಂಗಂ ಅಂತಲೇ ಖ್ಯಾತಿ ಹೊಂದಿದ್ದಾರೆ.
ಬೀಗ ಹಾಕಿದ ಮನೆಗಳೇ ಖದೀಮನ ಟಾರ್ಗೆಟ್: ತಂದೆ-ಮಗ ಸೇರಿ ಮೂವರ ಬಂಧನ
ಶಿಫಾರಸಿಗೆ ಕ್ಯಾರೆ ಎನ್ನದ ಡಿಸಿಪಿ: ನಗರದ ಆರ್ಥಿಕವಾಗಿ ಫಲವತ್ತಾಗಿರುವ ಠಾಣೆಗಳಿಗೆ ಕೆಲ ಪೊಲೀಸರು ನಡೆಸಿದ್ದ ಲಾಬಿಗೆ ಮಣಿಯದ ನಿಶಾ ಜೇಮ್ಸ್, ತಮ್ಮ ವರ್ಗಾವಣೆಗೆ ಶಿಫಾರಸು ಪತ್ರ ತಂದ ಸಿಬ್ಬಂದಿಗೆ ಬೆವರಿಳಿಸಿದ್ದಾರೆ. ಆಯಕಟ್ಟಿನ ಠಾಣೆಗಳಿಗೆ ವರ್ಗಾವಣೆಗಾಗಿ ಸರ್ಕಾರದ ಪ್ರಭಾವಿ ಸಚಿವರು, ಲೋಕಸಭಾ ಸದಸ್ಯರು ಹಾಗೂ ಶಾಸಕರಿಂದಲೂ ಕೆಲ ಪೊಲೀಸರು ಶಿಫಾರಸು ಪಡೆದಿದ್ದರು ಎನ್ನಲಾಗಿದೆ. ಆದರೆ ಯಾವುದೇ ಬಾಹ್ಯ ಒತ್ತಡ ಮಾತ್ರವಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದರೂ ಸಹ ಬಗ್ಗದೆ ನಿಶಾ ಜೇಮ್ಸ್ ಅವರು, ವರ್ಗಾವಣೆ ನೀತಿಗೆ ಅರ್ಹತೆ ಹೊಂದಿರುವವರಿಗೆ ಅವರ ಯೋಗ್ಯತೆಗೆ ತಕ್ಕಂತೆ ಕೌನ್ಸಲಿಂಗ್ ಮೂಲಕ ಹುದ್ದೆ ಕಲ್ಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.