Davanagere: ಭಾನುವಾರ ನಡೆಯಬೇಕಿದ್ದ ಎಸ್‌ಡಿಪಿಐ ಸಮಾವೇಶ ರದ್ದು: 144 ಸೆಕ್ಷನ್ ಜಾರಿ

By Govindaraj S  |  First Published Jun 11, 2022, 10:42 PM IST

ದಾವಣಗೆರೆ ಆಜಾದ್ ನಗರ ಮಾಗನಹಳ್ಳಿ ರಸ್ತೆ ಬಳಿ ಇರುವ ಮಿಲಾದ್‌ ಮೈದಾನದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ (ಎಸ್‌ಡಿಪಿಐ) ವತಿಯಿಂದ ಹಮ್ಮಿಕೊಂಡಿದ್ದ ವಿಭಾಗೀಯ ಸಮಾವೇಶವನ್ನು ದಾವಣಗೆರೆ ಜಿಲ್ಲಾಡಳಿತ ರದ್ದುಗೊಳಿಸಿದೆ. 


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ

ದಾವಣಗೆರೆ (ಜೂ.11): ದಾವಣಗೆರೆ ಆಜಾದ್ ನಗರ ಮಾಗನಹಳ್ಳಿ ರಸ್ತೆ ಬಳಿ ಇರುವ ಮಿಲಾದ್‌ ಮೈದಾನದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ (ಎಸ್‌ಡಿಪಿಐ) ವತಿಯಿಂದ ಹಮ್ಮಿಕೊಂಡಿದ್ದ ವಿಭಾಗೀಯ ಸಮಾವೇಶವನ್ನು ದಾವಣಗೆರೆ ಜಿಲ್ಲಾಡಳಿತ ರದ್ದುಗೊಳಿಸಿದೆ. ಅಪ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಜಮೀವುಲ್ಲಾ ಇವರ ನೇತೃತ್ವದಲ್ಲಿ ಬೃಹತ್ ಜನಾಧಿಕಾರ ಸಮಾವೇಶ ಹಮ್ಮಿಕೊಂಡಿತ್ತು. ಸದರಿ ಸಮಾವೇಶಕ್ಕೆ ಆಬ್ದುಲ್‌ ಮಜೀದ್‌ ಮೈಸೂರು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಕರ್ನಾಟಕ, ಮಹ್ಮದ್ ಶಾಫಿ ರಾಷ್ಟ್ರೀಯ ಉಪಾಧ್ಯಕ್ಷರು, ಎಸ್‌ಡಿಪಿಐ, ಜ್ಞಾನ ಪ್ರಕಾಶ ಸ್ವಾಮೀಜಿಗಳು ಉರಿಲಿಂಗ ಪೆದ್ದಿ ಮಠ, ಮೈಸೂರು ಹಾಗೂ ಇವರುಗಳಲ್ಲದೆ ಸದರಿ ಸಮಾವೇಶಕ್ಕೆ ಕೇರಳ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಎಸ್‌ಡಿಪಿಐ, ಪಿಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸುವವರಿದ್ದರು. 

Tap to resize

Latest Videos

ಇತ್ತೀಚೆಗೆ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ರವರು ಮಹಮದ್‌ ಪೈಗಂಬರ್‌ರವರ ಬಗ್ಗೆ ಅವಹೇಳನಕಾರಿ ನೀಡಿರುತ್ತಾರೆಂದು ಆರೋಪಿಸಿ, ದೇಶದಾದ್ಯಂತ ಮುಸ್ಲಿಂ ಸಮುದಾಯದವರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಈ  ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೂ ಸಹ  ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆಗಳಿರುತ್ತವೆ. ಈ ಕಾರಣದಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವನ್ನು ನೀಡದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಆತೀ ಅವಶ್ಯಕವಾಗಿರುತ್ತದೆ.

Davanagere: ಚಿಕನ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದ ಕಿರಾತಕ ಪತಿ

ಆದ್ದರಿಂದ 12.06.2022 ರಂದು ದಾವಣಗೆರೆ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಸಮಾವೇಶ ನಡೆದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಮತೀಯ ಭಾವನೆಗಳಿಗೆ ಧಕ್ಕೆಯುಂಟು ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಭಂಗ ಉಂಟು ಮಾಡುವ ಸಾಧ್ಯತೆಗಳಿರುವುದರಿಂದ ದಿನಾಂಕ 12.06.2022 ರಂದು ದಾವಣಗರೆ ನಗರದಲ್ಲಿ ಹಮ್ಮಿಕೊಂಡಿರುವ ಜನಾಧಿಕಾರ ಸಮಾವೇಶವನ್ನು ರದ್ದುಗೊಳಿಸಿದೆ. ಜೊತೆಗೆ  ಇಂದು ಸಂಜೆ 6 ಗಂಟೆಯಿಂದ  11.06.2022 ನಾಳೆ ರಾತ್ರಿ 10  ಗಂಟೆಯವರೆಗೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರ್ಯಾಲಿ, ಪ್ರತಿಭಟನೆ, ಮೆರವಣಿಗೆ, ಸಮಾವೇಶ, ಕಾರ್ಯಕ್ರಮ ನಡೆಯದಂತೆ ಮತ್ತು ಗುಂಪು ಸೇರದಂತೆ ಕಲಂ 144 ಸಿಆರ್‌ಪಿಸಿ ಯಡಿ ನಿಷೇದಾಜ್ಞೆ ಜಾರಿಗೊಳಿಸಿ ಆದೇಶಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಜಿಲ್ಲಾಧಿಕಾರಿಗೆ ಕೋರಿರುತ್ತಾರೆ.    

ಈ ಹಿನ್ನಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮಹಾಂತೇಶ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 35(3)ರ ರೀತ್ಯ ದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ 12.06,2022 ರಂದು ದಾವಣಗೆರೆ ನಗರದ ಮಾಗನಹಳ್ಳಿ ರಸ್ತೆ ಬಳಿ ಇರುವ ಮಿಲಾದ್ ಮೈದಾನದಲ್ಲಿ, ಎಸ್‌ಡಿಪಿಐ ಕರ್ನಾಟಕ ವತಿಯಿಂದ ಹಮ್ಮಿಕೊಂಡಿರುವ ಜನಾಧಿಕಾರ ಸಮಾವೇಶವನ್ನು ರದ್ದುಪಡಿಸಲು ಆಯೋಜಕರಿಗೆ ಆದೇಶಿಸಿರುತ್ತಾರೆ.  ಈ ನಿಷೇದಾಜ್ಞೆಯು ಸದುದ್ದೇಶದ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಹಾಗೂ ಇತರೆ ಪ್ರಾರ್ಧನ ಮಂದಿರಗಳಿಗೆ ತೆರಳುವವರಿಗೆ ಹಾಗೂ ಅಧಿಕೃತ ಗುರುತಿನ ಚೀಟಿ ಹೊಂದಿರುವ ಪರಿಕ್ಷಾರ್ಥಿಗಳಿಗೆ ಮತ್ತು ಪರೀಕ್ಷಾ ಸಿಬ್ಬಂದಿ ಅಧಿಕಾರಿ/ಸಿಬ್ಬಂದಿಗಳಿಗೆ ಅನ್ವಯಿಸ ತಕ್ಕದಿಲ್ಲವೆಂದು ಎಸ್ಪಿ ಸಿ ಬಿ ರಿಷ್ಯಂತ್ ತಿಳಿಸಿರುತ್ತಾರೆ. 

ಕಳುವಾದ ಕಾರು ಇಟ್ಟುಕೊಂಡ ಮಾಲೀಕನಿಗೆ ಥಳಿಸಿದ ಪೊಲೀಸ್!

ಎಸ್‌ಡಿಪಿಐ  ವಿಭಾಗೀಯ ಸಮಾವೇಶ ಜೂನ್ 26 ಕ್ಕೆ ಮುಂದೂಡಿಕೆ: ಪೊಲೀಸ್  ಹಾಗು ಜಿಲ್ಲಾಡಳಿತ ತೆಗೆದುಕೊಂಡ ತೀರ್ಮಾನ‌ವನ್ನು ಸ್ವಾಗತಿಸುತ್ತೇವೆ. ಮುಂದಿನ ಸಮಾವೇಶವನ್ನು ಜೂನ್ 26ಕ್ಕೆ ನಡೆಸುವುದಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಸ್ಕರ್ ಪ್ರಸಾದ್ ತಿಳಿಸಿದ್ದಾರೆ. ದಾವಣಗೆರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಎಸ್‌ಡಿಪಿಐ ಮುಖಂಡರು ನಮ್ಮ  ಪಕ್ಷದ ಬಗ್ಗೆ ಕಾಂಗ್ರೆಸ್ ಬಿಜೆಪಿಗೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಸರ್ಕಾರವೇ  ಸಮಾವೇಶವನ್ನು ತಡೆಗಟ್ಟಿದೆ. ಗೃಹ ಸಚಿವ ಅರಗ ಜ್ಞಾನೆಂದ್ರ ಮೊನ್ನೆ ಬಂದಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಿನ ಜೂನ್ 26ಕ್ಕೆ ಮುಂದೂಡಿದ್ದು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ಬಿಜೆಪಿ ಸರ್ಕಾರದ ಗೋಸುಂಬೆ ಬಣ್ಣ ಬಯಲಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಸರ್ಕಾರ ನಮ್ಮ ಸಮಾವೇಶವನ್ನು ಹತ್ತಿಕ್ಕುತ್ತಿದೆ ಎಂದರು‌. ಇಡೀ ರಾಜ್ಯದಲ್ಲಿ 144 ಸೆಕ್ಷನ್ ಇಲ್ಲ ಆದ್ರೆ ಇಲ್ಲಿ ಮಾತ್ರ ಹಾಕಿರುತ್ತಾರೆ‌. ಕೇರಳ ರಾಜಸ್ತಾನ ತಮಿಳುನಾಡು ಸೇರಿದಂತೆ ಬೇರೆ  ರಾಜ್ಯಗಳಿಂದ ಯಾರು ಬರುತ್ತಿಲ್ಲ‌. ಆದ್ರೆ ದಾವಣಗೆರೆ ಎಸ್ಪಿಯವರು ಕೇರಳದಿಂದ ಬರುವ ಹಿನ್ನಲೆಯಲ್ಲಿ ಸಮಾವೇಶ ರದ್ದುಪಡಿಸಿದ್ದೇವೆ ಎಂದು  ಹೇಳಿದ್ದಾರೆ. ನಾವು ಹೊರ ರಾಜ್ಯಗಳಿಂದ ಯಾರನ್ನು ಕರೆಸುತ್ತಿಲ್ಲ ಎಂದರು.

click me!