‘ಪಾಕ್‌ ಪ್ರೇಮಿ’ ದಾವ​ಣ​ಗೆರೆ ಪೊಲೀಸ್‌ ಪೇದೆ ಅಮಾನತು

By Kannadaprabha News  |  First Published Aug 24, 2020, 10:24 AM IST

ಪಾಕಿಸ್ತಾನದ ಪರ ಪ್ರೇಮ ಹೊರಹಾಕಿದ ಪೊಲೀಸ್‌ ಪೇದೆ ಅಮಾನತು| ಆರೋಪಿ ಕಾನ್‌ಸ್ಟೇಬಲ್‌ ಸಸ್ಪೆಂಡ್‌| ‘ಪವರ್‌ ಆಫ್‌ ಪಾಕಿಸ್ತಾನ್‌’ ಎಂಬ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ ಪೊಲೀಸ್‌ ಇಲಾಖೆಗೆ ತಲೆನೋವಾದ ಪೇದೆ| 


ದಾವಣಗೆರೆ(ಆ.24): ಸ್ಥಳೀಯ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬ ‘ಪವರ್‌ ಆಫ್‌ ಪಾಕಿಸ್ತಾನ್‌’ ಎಂಬ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ, ವಾಟ್ಸಾಪ್‌ ಗ್ರೂಪ್‌ಗೆ ಶೇರ್‌ ಮಾಡುವ ಮೂಲಕ ಶತ್ರುರಾಷ್ಟ್ರ ಪಾಕಿಸ್ತಾನದ ಪರ ತನ್ನ ಪ್ರೇಮವನ್ನು ಹೊರಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಾನ್‌ಸ್ಟೇಬಲ್‌ ಅನ್ನು ಅಮಾನತು ಮಾಡಲಾಗಿದೆ.

"

Tap to resize

Latest Videos

ತಲೆತಪ್ಪಿಸಿಕೊಂಡ ಆರೋಪಿ ಸನಾವುಲ್ಲಾ ದಾವಣಗೆರೆ ನಗರದ ಬಸವ ನಗರ ಠಾಣೆಯಲ್ಲಿ ಪೊಲೀಸ್‌ ವಾಹನ ಚಾಲಕನಾಗಿದ್ದು, ಜಿಲ್ಲಾ ಎಸ್‌ಪಿ ಅವರು ಅಮಾನತಿನಲ್ಲಿಟ್ಟಿದ್ದಾರೆ. ಮೂಲತಃ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದ ಸನಾವುಲ್ಲಾ, ‘ಪವರ್‌ ಆಫ್‌ ಪಾಕಿಸ್ತಾನ್‌’ ಎಂಬ ಫೇಸ್‌ಬುಕ್‌ ಪೇಜ್‌ನ್ನು ಲೈಕ್‌ ಮಾಡಿ ಪೊಲೀಸ್‌ ಇಲಾಖೆಗೆ ತಲೆನೋವಾಗಿದ್ದಾನೆ. 2008ನೇ ಸಾಲಿನ ಪೊಲೀಸ್‌ ಬ್ಯಾಚ್‌ ಎಂಬ ವಾಟ್ಸಾಪ್‌ ಗ್ರೂಪ್‌ಗೆ ಎಫ್‌ಬಿ ಪೇಜ್‌ನ ಲಿಂಕ್‌ ಮಾಡಿದ್ದಾನೆ. ದೇಶ ವಿರೋಧಿಗಳು, ಸಮಾಜಘಾತುಕ ಶಕ್ತಿ, ಕೃತ್ಯಗಳನ್ನು ಮಟ್ಟ ಹಾಕಬೇಕಾದ ಪೊಲೀಸ್‌ ಪೇದೆ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸ್ವತಃ ಜಿಲ್ಲಾ ಪೊಲೀಸ್‌ ಇಲಾಖೆಯೇ ಆತನ ಕೃತ್ಯಕ್ಕೆ ಬೆಚ್ಚಿ ಬಿದ್ದಿದೆ.

ತಿನ್ನೋದು ಭಾರತದ ಅನ್ನ ಆದ್ರೂ ಮನಸ್ಸು ಮಾತ್ರ ವೈರಿ ರಾಷ್ಟ್ರದಲ್ಲಿ: ಪೊಲೀಸ್ ಇಲಾಖೆಯಲ್ಲೊಬ್ಬ ಪಾಕ್ ಪ್ರೇಮಿ...!

ಈ ವಿವಾದಿತ ಫೇಸ್‌ಬುಕ್‌ ಲಿಂಕ್‌ ಹರದಾಡುತ್ತಿದ್ದಂತೆಯೇ ಎಚ್ಚೆತ್ತ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ತಕ್ಷಣವೇ ಕಾರ್ಯೋನ್ಮುಖರಾದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತನಿಖೆ ಕೈಗೊಂಡಿದ್ದಾರೆ. ತನಿಖೆ, ವಿಚಾರಣೆ ವೇಳೆ ಸನಾವುಲ್ಲಾ ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಆಘಾತಕಾರಿ ವಿಷಯ, ವಿಚಾರಗಳೂ ಬಯಲಾಗಿವೆ ಎನ್ನಲಾಗಿದೆ.
 

click me!