ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ಧತೆಯಲ್ಲಿ ಅವಘಡ: ದಾವಣಗೆರೆ ಯುವಕ ಸಾವು

By Sathish Kumar KH  |  First Published Oct 11, 2023, 8:37 PM IST

ದಾವಣೆಗೆರೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮೆರವಣಿಗೆಗೆ ಭರ್ಜರಿ ಸಿದ್ಧತೆ ವೇಳೆ ಧ್ವಜ ಕಟ್ಟುವ ವೇಳೆ ಕ್ರೇನ್‌ ಹರಿದು ಯುವಕ ಸಾವನ್ನಪ್ಪಿದ್ದಾನೆ.


ದಾವಣಗೆರೆ (ಅ.11): ದಾವಣೆಗೆರೆ ನಗರದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮೆರವಣಿಗೆಗೆ ಭರ್ಜರಿ ಸಿದ್ಧತೆಗಳನ್ನು ಮಾಡಲಾಗುತ್ತಿತ್ತು. ಈ ವೇಳೆ ರಸ್ತೆ ಬದಿಯ ಕಂಬಗಳಿಗೆ ಹಿಂದೂ ಕೇಸರಿ ಧ್ವಜ ಕಟ್ಟುವ ವೇಳೆ ಕ್ರೇನ್‌ ಹರಿದು ಹಿಂದೂ ಯುವಕ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

ದಾವಣಗೆರೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ದತೆ ವೇಳೆ ಅವಘಡ ಸಂಭವಿಸಿದೆ. ದಾವಣಗೆರೆ ನಗರದ ಪಿ.ಬಿ. ರಸ್ತೆಯಲ್ಲಿ ಕೇಸರಿ ಧ್ವಜಗಳನ್ನು ಕಟ್ಟುವಾಗ ದುರ್ಘಟನೆ ನಡೆದಿದೆ. ರಸ್ತೆ ಬದಿಯ ಕಂಬಗಳಿಗೆ ಕೇಸರಿ ಧ್ವಜ ಕಟ್ಟುವಾಗ ಯುವಕನ ಮೇಲೆ ಕ್ರೇನ್ ಹತ್ತಿಸಲಾಗಿದೆ. ಯುವಕನ ತಲೆಮೇಲೆ ಕ್ರೇನ್ ಹತ್ತಿದ ಹಿನ್ನಲೆಯಲ್ಲಿ ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ.  ಮೃತ ಯುವಕನನ್ನು ಬಸವರಾಜಪೇಟೆಯ ಪೃಥ್ವಿರಾಜ್ (26) ಎಂದು ಗುರುತಿಸಲಾಗಿದೆ.

Tap to resize

Latest Videos

ಕೋರ್ಟ್ ಕಲಾಪಕ್ಕೂ ತಟ್ಟಿದ ವಿದ್ಯುತ್ ಲೋಡ್ ಶೆಡ್ಡಿಂಗ್ ಎಫೆಕ್ಟ್: ಮೊಬೈಲ್‌ ಟಾರ್ಚ್‌ನಲ್ಲಿಯೇ ನಡೆದ ಕಲಾಪ

ನಗರದ ಪಿ.ಬಿ. ರಸ್ತೆಯ ರೇಣುಕಾಮಂದಿರದ ಬಳಿ ಶೋಭಾಯಾತ್ರೆಗೆ ಕೇಸರಿ ಧ್ವಜಗಳನ್ನು ಕಟ್ಟಲಾಗುತ್ತಿತ್ತು. ಈ ವೇಳೆ ಕ್ರೇನ್ ಹಿಂದೆ ನಿಂತಿದ್ದ ಪೃಥ್ವಿರಾಜ್‌ನನ್ನು ಗಮನಿಸದೆ ಕ್ರೇನ್‌ ಅನ್ನು ಹಿಂದಕ್ಕೆ ಚಲಿಸಲಾಗಿದೆ. ಆದರೆ, ಕೆಳಗಿದ್ದ ಯುವಕ ಎಷ್ಟೇ ಕೂಗಿಕೊಂಡರೂ ವಾಹನದ ಶಬ್ದದಲ್ಲಿ ಚಾಲಕನಿಗೆ ಕೇಳಿಸದೇ ಬೃಹತ್‌ ಗಾತ್ರದ ಕ್ರೇನ್‌ ಆತನ ತಲೆಯ ಮೇಲೆಯೇ ಹರಿದಿದೆ. ತಲೆ ಹಾಗೂ ದೇಹದ ಇತರೆ ಭಾಗಗಳಿಂದ ರಕ್ತಸ್ರಾವ ಉಂಟಾಗಿ ಯುವಕ ಪ್ರಾಣ ಬಿಟ್ಟಿದ್ದಾನೆ. ಕೂಡಲೇ ಯುವಕನ ಮೃತದೇಹವನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ರಾವಾನಿಸಿದ್ದಾರೆ. ಜಿಲ್ಲಾಸ್ಪತ್ರೆಯ ಮುಂಭಾಗ ಮೃತನ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.

ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರೇನ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ. ಮೃತ ಪೃಥ್ವಿರಾಜ ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ಸಂಘ-ಸಂಸ್ಥೆಗಳು, ಸಂಘಟನೆಗಳು, ವಿವಿಧ ಪಕ್ಷಗಳ ಕಾರ್ಯಕರ್ತರು, ಮೃತನ ಹೆತ್ತವರು, ಬಂಧು-ಬಳಗ ಜಿಲ್ಲಾಸ್ಪತ್ರೆ ಬಳಿ ಜಮಾಯಿಸಿದೆ. ಪೃಥ್ವಿರಾಜ ತನ್ನ ತಂದೆ, ತಾಯಿಗೆ ಒಬ್ಬನೇ ಮಗನಾಗಿದ್ದು, ಕುಟುಂಬದ ಜೀವನಕ್ಕೂ ಆಸರೆಯಾಗಿದ್ದ.

ಕನ್ನಡಿಗರಿಗೆ ಒಲಿಯದ ಕಾವೇರಿ: ಮುಂದಿನ 15 ದಿನ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಲು ಆದೇಶ

ಫ್ಲಂಬರ್ ಕೆಲಸ ಮಾಡಿಕೊಂಡು, ಕುಟುಂಬ ನಿರ್ವಹಣೆ ಮಾಡುತ್ತಿದ್ದ ಪೃಥ್ವಿರಾಜ ಕಳೆದ 3 ದಿನಗಳಿಂದಲೂ ಬಂಟಿಂಗ್ಸ್ ಕಟ್ಟಲು ಹೋಗುತ್ತಿದ್ದ. ಇಂದು ಆತನೇ ಇಲ್ಲದಂತಾಯಿತು ಎಂಬುದಾಗಿ ಮೃತನ ಸಂಬಂಧಿಗಳು ಕಣ್ಣೀರು ಹಾಕುತ್ತಿದ್ದಾರೆ. ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಮೃತನ ಕುಟುಂಬಸ್ಥರು, ಸಂಬಂಧಿಗಳು ಕಣ್ಣೀರು ಹಾಕುತ್ತಾ, ಕುಟುಂಬಕ್ಕೆ ಆಸರೆಯಾಗಿದ್ದ ಪೃಥ್ವಿರಾಜನ ಹೆತ್ತವರಿಗೆ ಯಾರು ದಿಕ್ಕು ಎಂಬುದಾಗಿ ಆಕ್ರೋಶ ಹೊರ ಹಾಕುತ್ತಿದ್ದರು.

ನಾಳಿನ  ಬೈಕ್ ರ್ಯಾಲಿ ರದ್ಧು: ಶ್ರೀ ಹಿಂದು ಮಹಾ ಗಣಪತಿ ಟ್ರಸ್ಟ್‌ನಿಂದ ಶ್ರೀ ಮಹಾ ಗಣಪತಿ ವಿಸರ್ಜನೆ ಹಿನ್ನಲೆಯಲ್ಲಿ  ನಾಳೆ ನಗರದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.ಪೃಥ್ವಿ ಸಾವು ಹಿನ್ನಲೆಯಲ್ಲಿ ಬೈಕ್ ರ್ಯಾಲಿ ರದ್ದು ಮಾಡಲಾಗಿದೆ.

click me!