ಕೋಣ ಬಲಿ ತಡೆಯಲು ದೇವಸ್ಥಾನದಲ್ಲಿ ಕಾವಲು ಕುಳಿತ ಡಿಸಿ, ಎಸ್ಪಿ

By Suvarna NewsFirst Published Mar 4, 2020, 11:08 AM IST
Highlights

ಪ್ರಾಣಿ ಬಲಿ ನಿಷೇಧಿಸಿದ್ದರೂ ಈಗಲೂ ಜನ ಇಂತಹ ಪದ್ಧತಿಗಳನ್ನು ಅನುಸರಿಸುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ರಾತ್ರಿ ಪೂರ ದೇವಸ್ಥಾನದಲ್ಲಿ ಕಳೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ(ಮಾ.04): ಪ್ರಾಣಿ ಬಲಿ ನಿಷೇಧಿಸಿದ್ದರೂ ಈಗಲೂ ಜನ ಇಂತಹ ಪದ್ಧತಿಗಳನ್ನು ಅನುಸರಿಸುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ರಾತ್ರಿ ಪೂರ ದೇವಸ್ಥಾನದಲ್ಲಿ ಕಳೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ನಗರದ ದುರ್ಗಾಂಭಿಕಾ ದೇವಸ್ಥಾನ ಮುಂದೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ ಜಾಗರಣೆ ಮಾಡಿದ್ದಾರೆ.  ಕೋಣ ಬಲಿ‌ತಡೆಯಲು ಡಿಸಿ, ಎಸ್ಪಿ ದೇವಸ್ಥಾನದ  ಎದುರು ಇಡಿ ರಾತ್ರಿ ಜಾಗರಣೆ ಮಾಡಿದ್ದಾರೆ.

ಶಾಲೆ ಮುಗಿಯುವ ಹೊತ್ತಿಗೆ ಯುನಿಫಾರ್ಮ್ ಅನುದಾನ ಬಂತು..!

ದೇವಿಗೆ ಬಿಟ್ಟ ಕೋಣದ ರಕ್ತ ಸಿರಿಂಜ್‌ನಿಂದ ತೆಗೆದು ದೇವಿಗೆ ಅರ್ಪಣೆ ಮಾಡಲಾಗಿದೆ. ದುರ್ಗಾಂಭಿಕಾ ದೇವಿ ಜಾತ್ರೆಯ ಪ್ರಯುಕ್ತ ದೇವಿಗೆ ಕೋಣ ಬಲಿ ಕೊಡುವ ಸಂಪ್ರದಾಯವಿದ್ದು, ದೇವಸ್ಥಾನ ಧರ್ಮದರ್ಶಿ ಸಮಿತಿಯ ಸಹಕಾರ ದೊಂದಿಗೆ ಕೋಣ ಬಲಿ ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ದೇವಸ್ಥಾನ ಸುತ್ತಲು ಒಂದು ನೂರು ಮೀಟರ್ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿ ನಡೆಯದಂತೆ ಜಿಲ್ಲಾಡಳಿತ ದಿಂದ ಕ್ರಮ ವಹಿಸಿದ್ದು, ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗಿತ್ತು.‌

click me!