ಕೆಲಸ ಕೇಳಿದ ಮಹಿಳೆ ವಿರುದ್ಧ ಕೇಸ್‌ ಹಾಕಲು ದಾವಣಗೆರೆ ಡೀಸಿ ಆದೇಶ!

By Kannadaprabha News  |  First Published Feb 4, 2020, 11:01 AM IST

ಕೆಲಸ ಕೇಳಿದ ಮಹಿಳೆ ವಿರುದ್ಧ ಕೇಸ್‌ ಹಾಕಲು ದಾವಣಗೆರೆ ಡೀಸಿ ಆದೇಶ!| ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಮಹಿಳೆ 


ದಾವಣಗೆರೆ[ಫೆ.04]: ಕೆಲಸ ಕೊಡಿಸಿ ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಆದೇಶಿಸಿದ ಘಟನೆ ಸೋಮವಾರ ನಡೆದಿದೆ.

ಜಿಲ್ಲಾಧಿಕಾರಿಗಳಿಗೆ ಕಲೆಕ್ಟರ್‌ ಎಂದು ಮರುನಾಮಕರಣ?

Tap to resize

Latest Videos

ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜನಸ್ಪಂದನ ಸಭೆಯಲ್ಲಿ ಮಹಿಳೆಯೊಬ್ಬರು ಅಹವಾಲು ಸಲ್ಲಿಸುತ್ತಾ, ಮಕ್ಕಳು ಹಾಗೂ ಮಾನಸಿಕ ಅಸ್ವಸ್ಥ ಪತಿ ಜತೆ ಜೀವನ ನಡೆಸುತ್ತಿದ್ದೇನೆ. ತಾನು ಹಿಂದೆ ದಾವಣಗೆರೆ ವಿವಿಯಲ್ಲಿ ಕೆಲಸ ಮಾಡುತ್ತಿದ್ದು, ಈಗ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

ಪುನಾ ಕೆಲಸ ಕೊಡಿಸಿ, ಇಲ್ಲದಿದ್ದರೆ ಇಲ್ಲಿಯೇ ಏನಾದರೂ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ತಕ್ಷಣ ಆಕ್ರೋಶಗೊಂಡ ಜಿಲ್ಲಾಧಿಕಾರಿಗಳು ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದರು.

ಲಿಂಗ ಸಮಾನತೆ: ಕಾಲೇಜ್‌ ಡೇಗೆ ಸೀರೆಯುಟ್ಟು ಬಂದ ಯುವಕರು!

click me!