ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅಶಕ್ತರಿಗೆ ನೆರವಾದ ವೇಷಧಾರಿಗಳು/ ಮಾನವೀಯತೆ ಮೆರೆದ ಮೂಡುಬಿದಿರೆ ನೇತಾಜಿ ಯುವ ಬ್ರಿಗೇಡ್ ಯುವ ಸಂಘಟನೆ ಸದಸ್ಯರು/ ಕಾನ್ಸರ್ ಪೀಡಿತ ಬಾಲಕಿಗೆ ನೆರವು
ಕಟೀಲು(ಫೆ. 03) ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ 5 ವರ್ಷದ ನಿಹಾರಿಕಾಳ ಚಿಕಿತ್ಸೆಗೆ ಕಟೀಲು ದೇವಳ ಬ್ರಹ್ಮಕಲಶೋತ್ಸವದಲ್ಲಿ ಶುಕ್ರವಾರ ಮೂಡುಬಿದಿರೆ ನೇತಾಜಿ ಬ್ರಿಗೇಡ್ ಯುವ ಸಂಘಟನೆ ವತಿಯಿಂದ ಸದಸ್ಯ ವಿಕ್ಕಿ ಶೆಟ್ಟಿ ಬೆದ್ರ ವಿಶೇಷ ವೇಷ ಧರಿಸಿ ಒಟ್ಟು 3, 00 136 ರು. ಸಂಗ್ರಹಿಸಿದ್ದು, ಆ ಮೊತ್ತವನ್ನು ಭಾನುವಾರ ಮಗುವಿನ ತಾಯಿಗೆ ಹಸ್ತಾಂತರಿಸಲಾಯಿತು.
ಶಾಸಕ ಉಮಾನಾಥ ಎ. ಕೋಟ್ಯಾನ್ ಮತ್ತು ಕಟೀಲು ದೇವಾಲಯದ ಪ್ರಧಾನ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು ನಿಹಾರಿಕಳ ತಾಯಿ ಸೌಮ್ಯಾರಿಗೆ ಚೆಕ್ ಹಸ್ತಾಂತರಿಸಿದರು. ಮಗು ಶೀಘ್ರದಲ್ಲೇ ಗುಣಮುಖ ಆಗಲಿ ಎಂದು ಪ್ರಾರ್ಥಿಸಲಾಯಿತು.
ಸಾವು ಗೆದ್ದರೆ ರೋಗಿಗಳಿಗೆ ಹನುಮಾನ್ ಮದ್ದು: ರೈ
ಕೋಲಾರ ಸಂಸದ ಮುನಿಸ್ವಾಮಿ, ನೇತಾಜಿ ಬ್ರಿಗೇಡ್‌ನ ಈ ಕಾರ್ಯವನ್ನು ಶ್ಲಾಘಿಸಿದರು. ನೇತಾಜಿ ಬ್ರಿಗೆಟ್ ಸಂಘಟನೆ ವತಿಯಿಂದ ವೇಷ ಧರಿಸಿದ ವಿಕ್ಕಿ ಶೆಟ್ಟಿ ಮತ್ತು ವಿಜೇಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಈಶ್ವರ್ ಕಟೀಲು, ಅಭಿಲಾಶ್ ಶೆಟ್ಟಿ ಕಟೀಲು, ಸಂದೇಶ್ ಶೆಟ್ಟಿ, ನಾಗಾರಾಜ್ ಪೂಜಾರಿ, ಪ್ರಸಾದ್ ಕುಮಾರ್, ಅಜಿತ್ ಕುಮಾರ್ ಕಲ್ಲ ಬೆಟ್ಟು, ನೇತಾಜಿ ಬ್ರಿಗೇಡ್ ಸಂಚಾಲಕ ರಾಹುಲ್ ಕುಲಾಲ್, ಸದಸ್ಯರಾದ ಕುಮಾರ್ ಮಾಸ್ತಿಕಟ್ಟೆ, ಯಶವಂತ್, ಅಭಿಷೇಕ್, ವಿಜೇಶ್, ಶಶಿಕುಮಾರ್, ಪ್ರಸಾದ್, ನಿತ್ಯಾನಂದ ಕುಲಾಲ್, ಶ್ಯಾಮ್, ಪ್ರಶಾಂತ್, ನವೀನ್, ಗಣೇಶ, ಸುಮಂತ್ ಬಲ್ಲಾಳ್, ದಯಾನಂದ ಲಾಡಿ, ತೃಪ್ತಿ ಶೆಟ್ಟಿ ಉಪಸ್ಥಿತರಿದ್ದರು.
ವಿಕ್ಕಿ ಶೆಟ್ಟಿ ಹಾಗೂ ವಿಜೇಶ್ ಶೆಟ್ಟಿ ಇಬ್ಬರೂ ಮೂಡುಬಿದಿರೆಯವರು. ನೇತಾಜಿ ಯುವ ಬ್ರಿಗೇಡ್ ಸಂಘಟನೆಯವರು. ಈ ಇಬ್ಬರೂ ಕಳೆದ ವರ್ಷ ಮೂಡುಬಿದಿರೆ ಕೋಟಿ ಚೆನ್ನಯ ಕಂಬಳದಲ್ಲೂ ಅಶಕ್ತರಿಗೆ ಸಹಾಯ ನೀಡುವ ನಿಟ್ಟಿನಲ್ಲಿ ವೇಷ ಧರಿಸಿದ್ದು, ೮೪ ಸಾವಿರ ರು. ಸಂಗ್ರಹ ಮಾಡಿದ್ದರು.