ಗುತ್ತಿಗೆ ಅವಧಿ ಮುಗಿದರೂ 195 ಆಸ್ತಿಗಳ ವಶಕ್ಕೆ ಪಡೆಯದ ಪಾಲಿಕೆ

By Suvarna NewsFirst Published Feb 4, 2020, 10:31 AM IST
Highlights

ಗುತ್ತಿಗೆ ಅವಧಿ ಮುಗಿದರೂ 195 ಆಸ್ತಿಗಳ ವಶಕ್ಕೆ ಪಡೆಯದ ಪಾಲಿಕೆ |  ಸ್ವತ್ತುಗಳ ವಶ ಪಡಿಸಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳ ಜಾಣಕುರುಡು | 

ಬೆಂಗಳೂರು (ಫೆ. 04):  ಶಾಲಾ-ಕಾಲೇಜು, ಪೆಟ್ರೋಲ್‌ ಬಂಕ್‌ ಸೇರಿದಂತೆ ಸಾಮಾಜಿಕ ಸೇವಾ ಉದ್ದೇಶ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ನಗರದ ಕೇಂದ್ರಭಾಗದಲ್ಲಿ ಕೋಟ್ಯಂತರ ರು. ಬೆಲೆಬಾಳುವ 348 ಬಿಬಿಎಂಪಿ ಆಸ್ತಿಯನ್ನು ಭೋಗ್ಯ ಹಾಗೂ ಬಾಡಿಗೆ ಆಧಾರದ ಮೇಲೆ ನೀಡಲಾಗಿದೆ. ಈ ಪೈಕಿ 195 ಆಸ್ತಿಗಳ ಗುತ್ತಿಗೆ ಅವಧಿ ಮುಗಿದರೂ ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ಪಡೆಯದೇ ಜಾಣಕುರುಡು ತೋರುತ್ತಿದ್ದಾರೆ.

ಬಿಬಿಎಂಪಿಯ ವ್ಯಾಪ್ತಿಯಲ್ಲಿ ತನ್ನ ಒಟ್ಟು 348 ಆಸ್ತಿಗಳನ್ನು ಈವರೆಗೆ ಬಾಡಿಗೆ, ಗುತ್ತಿಗೆ, ಭೋಗ್ಯ ಹಾಗೂ ಇತ್ಯಾದಿ ಆಧಾರದ ಮೇಲೆ ಶಾಲಾ-ಕಾಲೇಜು, ಪೆಟ್ರೋಲ್‌ ಬಂಕ್‌, ನಿಗಮ ಮಂಡಳಿ, ಸರ್ಕಾರಿ ಇಲಾಖೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗೆ ನೀಡಲಾಗಿದೆ.

ಸ್ವಚ್ಛ ಸರ್ವೇಕ್ಷಣ್‌ ಜನಾಭಿಪ್ರಾಯ ಸಂಗ್ರಹ: ಬಿಬಿಎಂಪಿ ವಿಫಲ!

ಈ ಪೈಕಿ ಕೇಂದ್ರ ಸರ್ಕಾರದ ಕುಟುಂಬ ಕಲ್ಯಾಣ ಮಂಡಳಿ, ಮೈಸೂರು ಸ್ಟೇಟ್‌ ಕೋ ಆಪ್‌ ಅಪೆಕ್ಸ್‌ ಬ್ಯಾಂಕ್‌, ವಿಜಯ ಬ್ಯಾಂಕ್‌ ಯಲಹಂಕ ಶಾಖೆ, ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ಸಂಘ ಸೇರಿದಂತೆ ಒಟ್ಟು 195 ಆಸ್ತಿಗಳ ಗುತ್ತಿಗೆ ಅವಧಿ ಈಗಾಗಲೇ ಮುಕ್ತಾಯಗೊಂಡರೂ ತನ್ನ ಸ್ವತ್ತುಗಳನ್ನು ಪಾಲಿಕೆ ವಶಕ್ಕೆ ಪಡೆಯುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿಲ್ಲ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜ.9 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಬೆಂಗಳೂರು ನಗರದಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಿಂದ ಬಾಡಿಗೆ, ಗುತ್ತಿಗೆ, ಭೋಗ್ಯ ಹಾಗೂ ಇತ್ಯಾದಿ ಆಧಾರದ ಮೇಲೆ ವಿವಿಧ ಸಂಘ ಸಂಸ್ಥೆಗೆ ನೀಡಲಾಗಿರುವ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಬಿಬಿಎಂಪಿ ಆಯುಕ್ತರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿರುವ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

.9.28 ಕೋಟಿ ಬಾಕಿ:

ಬಿಬಿಎಂಪಿಯಿಂದ ನೀಡಲಾದ ಈ ಆಸ್ತಿಗಳಿಗೆ ಅತಿ ಕಡಿಮೆ ದರ ಬಾಡಿಗೆ ಮೊತ್ತ ನಿಗದಿ ಪಡಿಸಲಾಗಿರುತ್ತದೆ. ಪ್ರತಿ ಚದರ ಅಡಿಗೆ ಒಂದು, ಐದು, ಹತ್ತು ರುಪಾಯಿ ಬಾಡಿಗೆ ನಿಗದಿ ಪಡಿಸಲಾಗಿರುತ್ತದೆ. ಆದರೂ ಅನೇಕ ಸಂಘ-ಸಂಸ್ಥೆಗಳು ಪಾಲಿಕೆಗೆ ಪ್ರತಿ ವರ್ಷ ಪಾವತಿಸಬೇಕಾದ ಬಾಡಿಗೆ, ಲೀಸ್‌ ಮೊತ್ತವನ್ನು ಪಾವತಿ ಮಾಡಿಲ್ಲ. ಪಾಲಿಕೆ ಗುತ್ತಿಗೆ, ಭೋಗ್ಯಕ್ಕೆ ನೀಡಿರುವ ಆಸ್ತಿಗಳಿಂದ ಪ್ರತಿ ವರ್ಷ ಈ ಆಸ್ತಿಗಳಿಂದ ಬಿಬಿಎಂಪಿಗೆ 1.32 ಕೋಟಿ ರು. ಬರಬೇಕಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತಕ ಸಾಲಿನಲ್ಲಿ ಒಟ್ಟು 1.43 ಕೋಟಿ ರು. ಮಾತ್ರ ವಸೂಲಿ ಆಗಿದೆ. ಇನ್ನು ಹಳೇ ಬಾಕಿ ಸೇರಿ 8.91 ಕೋಟಿ ರು., ಬಡ್ಡಿ ಮೊತ್ತ 36 ಲಕ್ಷ ರು ಸೇರಿದಂತೆ ಒಟ್ಟು 9.28 ಕೋಟಿ ರು. ಬಾಕಿ ವಸೂಲಿ ಆಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'BBMP ಆಯುಕ್ತರು ಅನಕ್ಷರಸ್ಥರಾ?’ ಹೈಕೋರ್ಟ್ ಕೆಂಡಾಮಂಡಲ

ಗುತ್ತಿಗೆ ಪಡೆದ ಉದ್ದೇಶ ಉಲ್ಲಂಘನೆ:

ಪಾಲಿಕೆಯಿಂದ ಗುತ್ತಿಗೆ ಪಡೆದುಕೊಂಡಿರುವ ಉದ್ದೇಶವನ್ನು ಅನೇಕ ಸಂಘ-ಸಂಸ್ಥೆಗಳು ಉಲ್ಲಂಘನೆ ಮಾಡಿರುವ ಬಗ್ಗೆ ದೂರು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಗುತ್ತಿಗೆ, ಲೀಸ್‌ ನೀಡಲಾಗಿರುವ ಎಲ್ಲ ಆಸ್ತಿಗಳು ವಾಸ್ತವಾಂಶ ಪರಿಶೀಲನೆ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇನ್ನು ಗುತ್ತಿಗೆ ಅವಧಿ ಮುಗಿದ ಆಸ್ತಿಗಳಿಗೆ ಹಾಗೂ ಬಾಡಿಗೆ ಹಾಗೂ ಭೋಗ್ಯ ಮೊತ್ತ ಬಾಕಿ ಉಳಿಸಿಕೊಂಡ ಸಂಘ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಕಂದಾಯ ಅಧಿಕಾರಿಗಳು ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ಒಂದು ವೇಳೆ ಬಾಕಿ ಪಾವತಿ ಮಾಡದಿದ್ದರೆ ಗುತ್ತಿಗೆ, ಭೋಗ್ಯ ರದ್ದು ಪಡಿಸಿ ಆಸ್ತಿಯನ್ನು ಬಿಬಿಎಂಪಿ ವಶಕ್ಕೆ ಪಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುತ್ತಿಗೆ, ಭೋಗ್ಯ ಅವಧಿ ಮುಕ್ತಾಯಗೊಂಡಿರುವ ಆಸ್ತಿಗಳಿಗೆ ನೋಟಿಸ್‌ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಂತರ ಪರಿಶೀಲನೆ ಮಾಡಿ ಆ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗುವುದು.

-ಬಿ.ಎಚ್‌.ಅನಿಲ್‌ಕುಮಾರ್‌, ಆಯುಕ್ತರು, ಬಿಬಿಎಂಪಿ

 

ಗುತ್ತಿಗೆ ಹಾಗೂ ಲೀಸ್‌ ಅವಧಿ ಮುಕ್ತಾಯಗೊಂಡಿರುವ ಪ್ರಮುಖ ಆಸ್ತಿಗಳ ವಿವರ

ಪುಲಕೇಶಿನಗರದ ಎಸ್‌.ಕೆ.ಗಾರ್ಡ್‌ನ್‌ನಲ್ಲಿರುವ ಕುಂಬಾರ ಕರಕುಶಲ ಕಾರ್ಮಿಕರ ಸಂಘ 1995 2005

ನೇತಾಜಿ ರಸ್ತೆಯಲ್ಲಿರುವ ಬೆಂಗಳೂರು ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಕಚೇರಿ 1984 1989

ವಸಂತನಗರದ ಮಿಲ್ಲರ್‌ ಟ್ಯಾಂಕ್‌ ರಸ್ತೆಯಲ್ಲಿರುವ ದಿ ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ 1979 2009

ವಿಕ್ಟೋರಿಯಾ ರಸ್ತೆಯಲ್ಲಿರುವ ದಿ ಬೆಂಗಳೂರು ಅನಿಮಲ್‌ ಫುಡ್‌ ಕಾರ್ಪೋರೇಷನ್‌ 2005 2015

ಎಸ್‌.ಕೆ.ಗಾರ್ಡ್‌ನ್‌ನ ಬೆನ್‌ಹರ್‌ ಹೈಸ್ಕೂಲ್‌ 1978 2003

ನಾತ್‌ರ್‍ ಪಾರ್ಕ್ ರಸ್ತೆಯ ಕೆನ್‌ಸ್ಕೂಲ್‌ ಆಫ್‌ ಆಟ್ಸ್‌ರ್‍ 1978 1983

ಗಾಂಧಿನಗರದ ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ಸಂಘ 1999 2001

ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದ ರಾಘವೇಂದ್ರ ಸ್ವಾಮಿ ಮಠ 1993 1998

ರಾಜ್‌ಮಹಲ್‌ ಗುಟ್ಟಹಳ್ಳಿಯ ವೈಯಾಲಿಕಾವಲ್‌ನ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 2011 2016

ಮಲ್ಲೇಶ್ವರದ 6ನೇ ಅಡ್ಡ ರಸ್ತೆಯಲ್ಲಿರುವ ಸಂಸ್ಕೃತಿ ಕೇಂದ್ರ 1957 2014

ಕೇಂದ್ರ ಸರ್ಕಾರದ ಕುಟುಂಬ ಕಲ್ಯಾಣ ಮಂಡಳಿ 2004 2009

ಎಸ್‌ಸಿ-ಎಸ್‌ಟಿ ವೆಲ್‌ಫೇರ್‌ 1962 1987

ಜಯನಗರದ ಅಖಿಲ ಕರ್ನಾಟಕ ಪ್ರಾಣಿದಯಾ ಸಂಘ 1988 2008

ಕರ್ನಾಟಕ ಸಹಕಾರಿ ಮೀನುಗಾರಿಕೆ ಮಂಡಳಿ 2007 2017

ರಾಯಲ್‌ ಕಾನ್‌ಕಾರ್ಡ್‌ ಎಜುಕೇಷನಲ್‌ ಟ್ರಸ್ಟ್‌ 2005 2015

ವಲಯ ಗುತ್ತಿಗೆ ಚಾಲ್ತಿ ಇರುವ ಆಸ್ತಿ ಗುತ್ತಿಗೆ ಮುಗಿದಿರುವ ಆಸ್ತಿ ಒಟ್ಟು ಬಾಕಿ(ರುಪಾಯಿ)

ಪೂರ್ವ 77 44 5,96,64,245

ಪಶ್ಚಿಮ 31 92 56,10,751

ದಕ್ಷಿಣ 45 56 2,54,98,450

ಆರ್‌.ಆರ್‌.ನಗರ 0 1 0

ಬೊಮ್ಮನಹಳ್ಳಿ 0 0 0

ಮಹದೇವಪುರ 0 1 25,000

ಯಲಹಂಕ 0 1 20,53,515

ದಾಸರಹಳ್ಳಿ 0 0 0

ಒಟ್ಟು 153 195 9,28,51,961

click me!