* ಕೊರೋನಾಗೆ ಬಲಿಯಾಗಿದ್ದ ಪ್ರಭಾ
* ಮೃತದೇಹ ಕುಟುಂಬಸ್ಥರಿಗೆ ನೀಡುವ ಸಂದರ್ಭದಲ್ಲಿ ಪ್ರಭಾರ ಮೊಬೈಲ್ ನಾಪತ್ತೆ
* ಜಿಲ್ಲಾಡಳಿತಕ್ಕೆ ಪತ್ರ ಬರೆದು, ಅಮ್ಮನ ಮೊಬೈಲ್ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದ ಪುತ್ರಿ
ಮಡಿಕೇರಿ(ಆ.20): ಅಮ್ಮನ ನೆನಪುಗಳ ಬುತ್ತಿಯಂತಿದ್ದ ಮೊಬೈಲ್ ಫೋನ್ ಕೊನೆಗೂ ಹೃತಿಕ್ಷಾಳಿಗೆ ಸಿಕ್ಕಿದೆ. ಕೋವಿಡ್ ಸೋಂಕಿಗೆ ಬಲಿಯಾದ ಅಮ್ಮನ ಜೊತೆಯಲ್ಲಿ ಮೊಬೈಲ್ ಅನ್ನು ಕೂಡ ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಈ ಪುಟ್ಟ ಬಾಲೆಗೆ ಸರಿ ಸುಮಾರು ಮೂರು ತಿಂಗಳ ನಂತರ ಹೆತ್ತಾಕೆ ಬಿಟ್ಟು ಹೋದ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ದೊರೆತಿದೆ.
ಕುಶಾಲನಗರದ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಪತ್ನಿ ಪ್ರಭಾ ಕೊರೋನಾಗೆ ಒಳಗಾಗಿ, ಮೇ 16 ರಂದು ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಅವರ ಮೃತದೇಹವನ್ನು ಕುಟುಂಬಸ್ಥರಿಗೆ ನೀಡುವ ಸಂದರ್ಭ ಪ್ರಭಾರ ಮೊಬೈಲ್ ನಾಪತ್ತೆಯಾಗಿತ್ತು.
ರಾಜಕಾರಣದಲ್ಲಿ ಪೂರ್ಣತೃಪ್ತಿ ಸಿಗುವುದಿಲ್ಲ : ಕೋಟ ಪೂಜಾರಿ
ಹೃತಿಕ್ಷಾ ಜಿಲ್ಲಾಡಳಿತಕ್ಕೆ ಪತ್ರ ಬರೆದು, ಅಮ್ಮನ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಳು. ಆಸ್ಪತ್ರೆಯ ಗೋದಾಮು ಬಳಿ ಕಂಡು ಬಂದ ಮೊಬೈಲನ್ನು ಆಸ್ಪತ್ರೆಯ ಸಿಬ್ಬಂದಿ ಮಡಿಕೇರಿ ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ.