ಮೈಸೂರು (ಅ.06): ನಾಡಹಬ್ಬ ದಸರಾ (Dasara) ಹಿನ್ನೆಲೆಯಲ್ಲಿ ಅರಮನೆ ಸುತ್ತಮುತ್ತ ಹೆಚ್ಚಾಗುವ ವಾಹನ (Vehicle) ಸಂಚಾರದ ಹಿನ್ನಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಅ.7 ರಿಂದ 15 ರವರೆಗೆ ವಾಹನ ಸಂಚಾರ ಹಾಗೂ ನಿಲುಗಡೆ ಮೇಲೆ ಈ ಕೆಳಕಂಡಂತೆ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ (Police commissioner Dr Chandragupta) ತಿಳಿಸಿದ್ದಾರೆ.
ದಸರಾ ಸಂದರ್ಭದಲ್ಲಿ ಮೈಸೂರು (Mysuru) ಅರಮನೆ, ಪ್ರಮುಖ ರಸ್ತೆ, ವೃತ್ತಗಳಲ್ಲಿ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತಿದೆ. ಈ ದೀಪಾಲಂಕಾರವನ್ನು ವೀಕ್ಷಣೆ ಮಾಡಲು ಸಾರ್ವಜನಿಕರು, ಪ್ರವಾಸಿಗರು ಹೆಚ್ಚಾಗಿ ವಾಹನಗಳಲ್ಲಿ (Vehicle) ಆಗಮಿಸಲಿದ್ದು, ಈ ಸಂದರ್ಭದಲ್ಲಿ ನಗರದಲ್ಲಿ ವಾಹನ ಸಂಚಾರವು ಅಧಿಕಗೊಳ್ಳುವುದರಿಂದ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ನಿರ್ಬಂಧ ವಿಧಿಸಲಾಗಿದೆ.
undefined
ಮೈಸೂರು : ದಸರಾಗೆ ರಾಜವಂಶಸ್ಥರಿಗೆ ಆಹ್ವಾನ
ಏಕಮುಖ ವಾಹನ ಸಂಚಾರ ವ್ಯವಸ್ಥೆ: ಅ.7 ರಿಂದ 15 ರವರೆಗೆ ಪ್ರತಿದಿನ ಸಂಜೆ 4 ರಿಂದ ರಾತ್ರಿ 10 ಗಂಟೆಯವರೆಗೆ ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಶಿವರಾತ್ರಿ ರಾಜೇಂದ್ರ ವೃತ್ತ - ಕುಸ್ತಿ ಅಖಾಡ ಜಂಕ್ಷನ್- ಬಿ.ಎನ್.ರಸ್ತೆ - ಜಯಚಾಮರಾಜ ಒಡೆಯರ್ ವೃತ್ತ- ಆಲ್ಬರ್ಟ್ ವಿಕ್ಟರ್ ರಸ್ತೆ - ಚಾಮರಾಜ ವೃತ್ತ- ಆಲ್ಬರ್ಟ್ ವಿಕ್ಟರ್ ರಸ್ತೆ- ಕೆ.ಆರ್. ವೃತ್ತ - ನ್ಯೂ ಎಸ್.ಆರ್. ರಸ್ತೆ- ಬಸವೇಶ್ವರ ವೃತ್ತ- ಚಾಮರಾಜ ಜೋಡಿ ರಸ್ತೆ- ಶಿವರಾತ್ರಿ ರಾಜೇಂದ್ರ ವೃತ್ತ ಈ ರಸ್ತೆಗಳಲ್ಲಿ ಅರಮನೆಯನ್ನು ಮಧÜ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ (ಆಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ ಮಾತ್ರ (ಕ್ಲಾಕ್ ವೈಸ್) ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಬಸವೇಶ್ವರ ವೃತ್ತದಿಂದ ಪೂರ್ವಕ್ಕೆ ಶಿವರಾತ್ರಿ ರಾಜೇಂದ್ರ ವೃತ್ತದವರೆಗಿನ ರಸ್ತೆ ಹೊರತುಪಡಿಸಿ).
ನ್ಯೂ ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತದಿಂದ ವಿಶ್ವೇಶ್ವರಯ್ಯ ವೃತ್ತ- ಕೆ.ಆರ್. ವೃತ್ತದಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಬರುವಂತಹ ವಾಹನಗಳು- ಬಾಟಾ ಜಂಕ್ಷನ್- ವಿಶ್ವೇಶ್ವರಯ್ಯ ವೃತ್ತ- ಇರ್ವಿನ್ ರಸ್ತೆ- ನೆಹರು ವೃತ್ತ- ಅಶೋಕ ರಸ್ತೆ- ಮಹಾವೀರ ವೃತ್ತ- ಚಾಮರಾಜ ವೃತ್ತ ಈ ರಸ್ತೆಗಳ ಮಧ್ಯ ಇರುವ ಪ್ರದೇಶವನ್ನು ಮಧ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ (ಕ್ಲಾಕ್ ವೈಸ್) ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ. ಇರ್ವಿನ್ ರಸ್ತೆಯಲ್ಲಿ ನೆಹರು ವೃತ್ತದಿಂದ ವಿಶ್ವೇಶ್ವರಯ್ಯ ವೃತ್ತದ ಕಡೆಗೆ ಬರುವ ಹಾಗೂ ವಿಶ್ವೇಶ್ವರಯ್ಯ ವೃತ್ತದಿಂದ ಕೆ.ಆರ್. ವೃತ್ತದ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ನಿರ್ಬಂಧಿಸಲಾಗಿದೆ.
ಮೈಸೂರು ದಸರಾ ಹೊಸ ಗೈಡ್‌ಲೈನ್ ಬಿಡುಗಡೆ : ಏನೇನಿದೆ ರೂಲ್ಸ್?
ನೆಹರು ವೃತ್ತದಿಂದ ಬಿ.ಎನ್ ರಸ್ತೆ ಜಂಕ್ಷನ್ ವರೆಗೆ- ಪಶ್ಚಿಮದಿಂದ ಪೂರ್ವಕ್ಕೆ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿಂದ ಬನುಮಯ್ಯ ಚೌಕದವರೆಗೆ- ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತದೆ. ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ತ್ಯಾಗರಾಜ ರಸ್ತೆಯಲ್ಲಿ ಎನ್. ಮಾಧವರಾವ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ವರೆಗೆ- ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತದೆ. ಈ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವಾಹನಗಳ ನಿಲುಗಡೆ ನಿಷೇಧ: ಅ.7 ರಿಂದ 15 ರವರೆಗೆ ಪ್ರತಿದಿನ ಸಂಜೆ 4 ರಿಂದ ರಾತ್ರಿ 10 ಗಂಟೆಯವರೆಗೆ ಅರಮನೆ ಸುತ್ತಮುತ್ತಲು ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿರುವುದಿಲ್ಲ (ವರಹಾ ದ್ವಾರ ಹಾಗೂ ಅರಮನೆ ಸುತ್ತಲಿನ ಸ್ಥಳಗಳಲ್ಲಿ.
ಸಯ್ಯಾಜಿರಾವ್ ರಸ್ತೆಯಲ್ಲಿ ಕೆ.ಆರ್. ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಪುರಂಧರ ರಸ್ತೆಯಲ್ಲಿ ನಗರ ಬಿ. ರಾಚಯ್ಯ ವೃತ್ತದಿಂದ ಬಿ.ಎನ್ ರಸ್ತೆ ಜಂಕ್ಷನ್‌ವರೆಗೆ. ಬಿ.ಎನ್ ರಸ್ತೆಯಲ್ಲಿ ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದವರೆಗೆ, ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಜಯಚಾಮರಾಜ ವೃತ್ತದಿಂದ ಕೆ.ಆರ್. ವೃತ್ತದವರೆಗೆ, ಅಶೋಕ ರಸ್ತೆಯಲ್ಲಿ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ, ಅಶೋಕ ರಸ್ತೆಯಲ್ಲಿ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ ಹಾಗೂ ಬಲರಾಮ ದ್ವಾರದ ಮುಂಭಾಗ ಇರುವ ಖಾಲಿಸ್ಥಳ ಸೇರಿದಂತೆ, ಡಾ. ರಾಜ್‌ಕುಮಾರ್ ವೃತ್ತದಿಂದ ಟಿ.ಎನ್. ನರಸಿಂಹಮೂರ್ತಿ ವೃತ್ತದವರೆಗೆ, ವಸ್ತುಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿಎನ್ ರಸ್ತೆ ಜಂಕ್ಷನಿಂದ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ವರೆಗೆ, ಇಟ್ಟಿಗೆಗೂಡಿನ ಹೊಸ ಬೀದಿ 5ನೇ ತಿರುವು ರಸ್ತೆಯಲ್ಲಿ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ನಿಂದ ವಸ್ತುಪ್ರರ್ದಶನದ ಪೂರ್ವ ದ್ವಾರದವರೆಗೆ, ಮಾನಸರ ರಸ್ತೆಯಲ್ಲಿ ವಾಣಿವಿಲಾಸ ರಸ್ತೆ ಜಂಕ್ಷನ್‌ನಿಂದ ಲೋಕರಂಜನ್‌ರಸ್ತೆ ಜಂಕ್ಷನ್‌ವರೆಗೆ, ಮಲೈಮಹದೇಶ್ವರ ರಸ್ತೆಯಲ್ಲಿ ಬಿಎನ್ ರಸ್ತೆ ಜಂಕ್ಷನ್‌ನಿಂದ (ಛತ್ರಿಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ, ಸರ್ಕಾರಿ ಭವನದ ರಸ್ತೆಯಲ್ಲಿ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಜಯಚಾಮರಾಜ ಒಡೆಯರ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.