ಮೈಸೂರು ಅರಮನೆಯಲ್ಲಿ ಕಿತ್ತಾಡಿಕೊಂಡ ದಸರಾ ಆನೆಗಳು: ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು..!

By Girish Goudar  |  First Published Sep 21, 2024, 7:56 AM IST

ಧನಂಜಯ ಆನೆಯ ಕೋಪಕ್ಕೆ ಹೆದರಿ ಅರಮನೆಯಿಂದ ಕಂಜನ್ ಆನೆ ಹೊರಗೆ ಓಡಿ ಬಂದಿದೆ. ಧನಂಜಯ ಆನೆ ಬಿಟ್ಟು ಬಿಡದೆ ಅಟ್ಟಾಡಿಸಿಕೊಂಡು ಓಡಿದ್ದಾನೆ. ಆನೆಗಳ ಕಿತ್ತಾಟದಿಂದ ಬೆದರಿ ಕಂಜನ್ ಆನೆ ಬಿಟ್ಟು ಮಾವುತ ಇಳಿದಿದ್ದಾನೆ.  


ಮೈಸೂರು(ಸೆ.21):  ಮೈಸೂರು ಅರಮನೆಯಲ್ಲಿ ದಸರಾ ಆನೆಗಳು ಕೆಲ ಹೊತ್ತು ಆತಂಕವನ್ನುಂಟು ಮಾಡಿದ್ದವು. ಹೌದು,  ಗಜಪಡೆ ಆನೆಗಳ ಓಡಾಟದಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಊಟ ಮಾಡುವಾಗ ಎರಡು ಆನೆಗಳು ಕಿತ್ತಾಡಿಕೊಂಡಿವೆ. ಧನಂಜಯ ಹಾಗೂ ಕಂಜನ್ ಆನೆಗಳ ನಡುವೆ ಕಿತ್ತಾಟ ನಡೆದಿದೆ. ಕೋಪದಿಂದ ಕಂಜನ್ ಆನೆಗೆ  ಧನಂಜಯ ಆನೆ ತಿವಿದಿದ್ದಾನೆ. ಇದರಿಂದ ಹೆದರಿದ ಕಂಜನ್ ಆನೆ ಚೆಲ್ಲಾಪಿಲ್ಲಿಯಾಗಿ ಓಡಾಡಿದ್ದಾರೆ.  

ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಧನಂಜಯ ಆನೆಯ ಕೋಪಕ್ಕೆ ಹೆದರಿ ಅರಮನೆಯಿಂದ ಕಂಜನ್ ಆನೆ ಹೊರಗೆ ಓಡಿ ಬಂದಿದೆ. ಧನಂಜಯ ಆನೆ ಬಿಟ್ಟು ಬಿಡದೆ ಅಟ್ಟಾಡಿಸಿಕೊಂಡು ಓಡಿದ್ದಾನೆ. ಆನೆಗಳ ಕಿತ್ತಾಟದಿಂದ ಬೆದರಿ ಕಂಜನ್ ಆನೆ ಬಿಟ್ಟು ಮಾವುತ ಇಳಿದಿದ್ದಾನೆ.  

Tap to resize

Latest Videos

ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಡಾ. ಹಂಪ ನಾಗರಾಜಯ್ಯ ಆಯ್ಕೆ!

ಕೋಡಿ ಸೋಮೇಶ್ವರ ದೇವಸ್ಥಾದಿಂದ ಜಯಮಾರ್ತಾಂಡ ಧ್ವಾರದ ಮೂಲಕ ಅರಮನೆಯಿಂದ ಆನೆಗಳು ಹೊರಗೆ ಬಂದಿವೆ. ಜಯಮಾರ್ತಾಂಡ ಗೇಟ್ ಬಳಿ ಇದ್ದ ಬ್ಯಾರಿಕೇಡ್ ಬಿಸಾಡಿ ಆನೆಗಳು ನುಗ್ಗಿವೆ. ಫುಟ್‌ಪಾತ್ ಮೇಲಿದ್ದ ಅಂಗಡಿಗಳ ಮೇಲೂ ದಾಳಿ ಮಾಡಿವೆ. ಕೊನೆಗೆ ಅರಮನೆ ಮುಂಭಾಗದ ಮುಖ್ಯ ರಸ್ತೆವರೆಗೆ ಅಟ್ಟಾಡಿಸಿಕೊಂಡು ಆನೆ ಓಡಿದೆ. ಆನೆಗಳ ಕಿತ್ತಾಟದಿಂದ ಪ್ರವಾಸಿಗರು ಚೆಲ್ಲಾಪಿಲ್ಲಿಯಾಗಿ ಓಡಾಡಿದ್ದಾರೆ.  ಜಂಬೂ ಸವಾರಿ ಆನೆಗಳ ನಿರ್ವಹಣೆಯಲ್ಲಿ ಅರಣ್ಯ ಅಧಿಕಾರಿ,‌ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಅರಮನೆ ಅಂಗಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

ಒಂದಕೊಂದು ಕಿತ್ತಾಡಿಕೊಂಡು ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಾಡಿವೆ. ಅರಮನೆ ಅಂಗಳ ಬಿಟ್ಟು ಎರಡು ಆನೆಗಳು ರಸ್ತೆಗೆ ನುಗ್ಗಿವೆ. ಹೀಗಾಗಿ ಆನೆ ನಿಯಂತ್ರಿಸಲು ಸ್ವತಃ ಮಾವುತನೇ ವಿಫಲನಾಗಿ ಆನೆ ಬಿಟ್ಟು ಕೆಳಗೆ ಇಳಿದಿದ್ದಾನೆ. ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. 

click me!