ಕಾಫಿನಾಡಿನಲ್ಲಿ ಸರಳ ಸಾಮೂಹಿಕ ವಿವಾಹ, ದಲಿತರ ಸಾಂಸ್ಕೃತಿಕ ವೈಭವದ ಅನಾವರಣ

By Suvarna News  |  First Published May 23, 2022, 9:58 PM IST
  • ಡಾ.ಬಿ.ಆರ್ ಅಂಬೇಡ್ಕರ್ ರವರ131 ನೇ ಜನ್ಮದಿನಾಚರಣೆ ಹಿನ್ನೆಲೆ
  • ಕಾಫಿನಾಡಿನಲ್ಲಿ ನಡೆದ ಸರಳ ಸಾಮೂಹಿಕ ವಿವಾಹ
  • ಮಲೆನಾಡು ಜಾನಪದ ಸಾಂಸ್ಕೃತಿಕ ಉತ್ಸವ
  • ಮಲೆನಾಡು ದಲಿತರ ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಅನಾವರಣ

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮೇ.23) : ಹಲವರು ಮದುವೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇನ್ನು ಕೆಲವರು ಸರಳವಾಗಿ ವಿವಾಹವಾಗಿ (Simple marrige) ಸಮಾಜಕ್ಕೆ ಪ್ರೇರಣೆಯಾಗುತ್ತಾರೆ. ಇಂತಹ ಸರಳ ಸಾಮೂಹಿಕ ವಿವಾಹವೊಂದು ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆಯಿತು. ಈ ಸರಳ ಸಾಮೂಹಿಕ ವಿವಾಹ ಮಲೆನಾಡು ದಲಿತರ (Malenadu dalits) ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು. 

Latest Videos

undefined

ಮೂಡಿಗೆರೆಯಲ್ಲಿ ಹಳ್ಳಿ ಸೊಗಡಿನಲ್ಲಿ ಸಾಮೂಹಿಕ ವಿವಾಹ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಮಲೆನಾಡು ದಲಿತರ ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು.ಹೌದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಸರಳ ಸಾಮೂಹಿಕ ವಿವಾಹವನ್ನು ಆಶ್ರಯ ಟ್ರಸ್ಟ್ ಆಯೋಜನೆ ಮಾಡಿತ್ತು.

VIJAYAPURA ವಿಪತ್ತು ನಿರ್ವಹಣಾ ವಿಶೇಷ ಸಭೆ ನಡೆಸಿದ ಜಿಲ್ಲಾಧಿಕಾರಿ

ಮಾಜಿ ಸಚಿವೆ ಮೋಟಮ್ಮ ಹಾಗು ಇತರೆ ಸಮನ ಮನಸ್ಕ ವ್ಯಕ್ತಿಗಳು ಸೇರಿ ಕಟ್ಟಿದ ಸಂಸ್ಥೆ ಇದು. ಕಳೆದ 20 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ನಡೆಸುತ್ತಿದೆ.ವಿಶೇಷ ಎಂದರೆ ವಿಧಿ ವಿಧಾನ ನಡೆಸಲು, ಮಂತ್ರ ಹೇಳಲು ವೈದಿಕರನ್ನು ಕರೆಸದಿರುವುದು. ಬದಲಾಗಿ ದಲಿತ ಕುಟುಂಬದ ಮುಖ್ಯಸ್ಥರನ್ನು ಕರೆಸಿ ಹಳ್ಳಿಯ ಸೊಗಡಿನಲ್ಲಿ ಮದುವೆಗಳನ್ನು ಮಾಡಿಸುವುದು.ಈ ವರ್ಷವೂ 11 ಜೋಡಿಗಳ ವಿವಾಹ ಜರುಗಿತು. 

ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಸಾಮೂಹಿಕ ವಿವಾಹ: ಕಳೆದ 20 ವರ್ಷಗಳಿಂದ ಮಲೆನಾಡು ಜಾನಪದ ಸಾಂಸ್ಕ್ರತಿಕ ಉತ್ಸವ ಕಾರ್ಯಕ್ರಮದ ಅಡಿಯಲ್ಲಿ ಈ ಸರಳ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಸರಳ ಸಾಮೂಹಿಕ ವಿವಾಹವೂ ಮಲೆನಾಡಿನ ಸಾಂಸ್ಕೃತಿಕ ಚಿತ್ರಣವನ್ನುಅನಾವರಣಗೊಳಿಸಿತು. ಕಳೆದ ಎರಡು ವರ್ಷಗಳಿಂದ ಸರಳ ಸಾಮೂಹಿಕ ವಿವಾಹಕ್ಕೆ ಬ್ರೇಕ್ ಬಿದ್ದಿತು, ಈ ವರ್ಷ ಎಂದಿನಂತೆ ಅದ್ದೂರಿಯಾಗಿ ನಡೆಯಿತು.  

International Yoga Dayಗೆ ಮೋದಿ ಆಗಮನ, ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

ಮದುವೆಗೆ ಮುನ್ನ ದಲಿತ ಸಂಪ್ರದಾಯದಂತೆ ನೂತನ ವಧು ವರರನ್ನು ಹಳ್ಳಿ ವ್ಯಾದಗಳು ಮತ್ತು ಕಲ್ಯಾತಂಡಗಳ ನಡುವೆ ಮೆರವಣಿಗಯಲಿ ವಿವಾಹ ಮಂಟಪಕ್ಕೆ ಕರೆತಲಾಯಿತು. ನಂತರ ಮಂಟಪದ ಮುಂಭಾಗದಲ್ಲಿ ನೂತನ ವರರು ಮತ್ತು ದಿಬ್ಬಣವನ್ನು ವಧುವಿನ ಕಡೆಯುವರು ಕಾಲು ತೊಳೆದು ಆರತಿ ಎತ್ತಿ ಸ್ವಾಗತಿಸಿ ಬರಮಾಡಿಕೊಂಡರು.

ದಲಿತ ಪುರೋಹಿತರು ಮತ್ತು ಮುತ್ತೈದೆಯರ ಸೋಬಾನೆ ಪದಗಳ ಗಾಯನದ ನಡುವೆ ಮಲೆನಾಡ ಸಂಪ್ರದಾಯದಂತೆ 11 ಜೋಡಿ ವಧುವರರು ಪರಸ್ಪರ ಹಾರ ಬದಲಾವಣೆ ಹಾಗೂ ಮಾಂಗಲ್ಯಧಾರಣೆ ಮೂಲಕ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. 

Udupi Mango Mela: ದೇವಾಲಯಗಳ ನಗರಿಯಲ್ಲಿ ಮಾವಿನ ದರ್ಬಾರು

ಕಾರ್ಯಕ್ರಮದಲ್ಲಿ ಸಂಗೀತ ನಿದೇಶಕ ವಿ.ನಾಗೇಂದ್ರಪ್ರಸಾದ್ ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಸೋಬಾನೆ ಪದ, ಜಾನಪದ ಹಾಡುಗಳು ಕಾರ್ಯಕ್ರಮಕ್ಕೆ ಕಳೆ ತಂದು ಕೊಟ್ಟವು. ಹೊಸ ಬದುಕಿಗೆ ಕಾಲಿಟ್ಟ ದಂಪತಿಗಳೂ ಸಂತಸ ವ್ಯಕ್ತಪಡಿಸಿದರು.ಸರಳ ಸಾಮೂಹಿಕ ವಿವಾಹದ ಬಳಿಕ ಮಲೆನಾಡ ಜಾನಪದ ಸಾಂಸ್ಕೃತಿಕ ಉತ್ಸವವೂ ನಡೆಯಿತು. 10ಕ್ಕೂ ಹೆಚ್ಚು ಕಲಾತಂಡಗಳು ಜಾನಪದ ನೃತ್ಯಗಳನ್ನು ಪ್ರದರ್ಶನ ಮಾಡಿದರು.

ಒಟ್ಟಾರೆ ಮಲೆನಾಡಿನಲ್ಲಿ ನಡೆದ ಮಲೆನಾಡ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ಸ್ಥಳೀಯ ಪ್ರತಿಭೆಗಳು ತಮ್ಮ ಕಲಾಯನ್ನು ಪ್ರದರ್ಶನ ಮಾಡಲು ವೇದಿಕೆಯನ್ನು ಕಲ್ಪಿಸಿಕೊಟ್ಟಿತು, ಜೊತೆಗೆ ಅನೇಕ ಸರಳ ಸಾಮೂಹಿಕ ವಿವಾದದ ಮೂಲಕ 11 ಜೋಡಿಗಳು ನವ ದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದರು.

click me!