Udupi Mango Mela: ದೇವಾಲಯಗಳ ನಗರಿಯಲ್ಲಿ ಮಾವಿನ ದರ್ಬಾರು

By Suvarna News  |  First Published May 23, 2022, 9:15 PM IST

ಉಡುಪಿಯ ದೊಡ್ಡಣ್ಣಗುಡ್ಡೆ ಯಲ್ಲಿರುವ ರೈತ ಸೇವಾ ಕೇಂದ್ರ ದಲ್ಲಿ ನಡೆಯುತ್ತಿರುವ ಮೂರು ದಿನಗಳ ಮಾವಿನ ಮೇಳದಲ್ಲಿ ಬಗೆ ಬಗೆಯ ಮಾವುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಾಟಾಗಿದೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಮೇ.23): ದೇವಾಲಯಗಳ ನಗರಿ ಉಡುಪಿಯಲ್ಲಿ (Udupi) ಫಲ ಚಕ್ರವರ್ತಿಯ ರಾಜ ದರ್ಬಾರು ನಡೆಯುತ್ತಿದೆ. ಕರಾವಳಿಯ ಕಡು ಬೆಸುಗೆಯನ್ನು ಹಸನಾಗಿಸುವ ಹಣ್ಣು ಮಾವು. ಮಾವಿನ ಹಣ್ಣನ್ನು (Mango) ಹಣ್ಣುಗಳ ರಾಜ ಎಂದೇ ಕರೆಯುತ್ತಾರೆ. ಉಡುಪಿಯಲ್ಲಿ ನಡೆಯುತ್ತಿರುವ ಮಾವಿನ ಮೇಳ (Mango Fest) ಸಾವಿರಾರು ಮಂದಿಯನ್ನು ಆಕರ್ಷಿಸಿದೆ.

Tap to resize

Latest Videos

ಉಡುಪಿಯ ದೊಡ್ಡಣ್ಣಗುಡ್ಡೆ ಯಲ್ಲಿರುವ ರೈತ ಸೇವಾ ಕೇಂದ್ರ ದಲ್ಲಿ ನಡೆಯುತ್ತಿರುವ ಮೂರು ದಿನಗಳ ಮಾವಿನ ಮೇಳದಲ್ಲಿ (Mango Mela) ಬಗೆ ಬಗೆಯ ಮಾವುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಾಟಾಗಿದೆ. ಮಂಗಳೂರು (Mangaluru) ಸಹಿತ ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಮಾವಿನ ಮೇಳಗಳು ಜರುಗಿದರೂ ಕೂಡ ಉಡುಪಿಯಲ್ಲಿ ಈವರೆಗೆ ಮಾವು ಮೇಳ ಆಯೋಜನೆ ಯಾಗಿರಲಿಲ್ಲ.

ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಇನ್ನು ಸಿಇಟಿ ಪರೀಕ್ಷೆ

ಹಿಂದೊಮ್ಮೆ ಹಲಸಿನ ಮೇಳ (Jackfruit fest ) ಆಯೋಜಿಸಿದ್ದು ಉತ್ತಮ ಸ್ಪಂದನ ವ್ಯಕ್ತವಾಗಿತ್ತು ಹಾಗಾಗಿ ಇದೇ ಮೊದಲ ಬಾರಿಗೆ ಮಾವು ಮೇಳ ಆಯೋಜಿಸಲಾಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ವಾಣಿಜ್ಯ ದೃಷ್ಟಿಯಿಂದ ಮಾವು ಬೆಳೆಯುವವರ ಸಂಖ್ಯೆ ಕಡಿಮೆ ಇದ್ದರೂ ಇಲ್ಲಿನ ಜನರಿಗೆ ಮಾವು ಅತ್ಯಂತ ಪ್ರಿಯವಾದ ಹಣ್ಣು ಮಾವು ಮೇಳದಲ್ಲಿ ಭಾಗವಹಿಸಿದ್ದ ಜನಸಂಖ್ಯೆಯೇ ಇದಕ್ಕೆ ಸಾಕ್ಷಿಯಾಗಿತ್ತು.

ಇಪ್ಪತ್ತಕ್ಕೂ ಹೆಚ್ಚು ಸ್ಟಾಲ್ 30 ಟನ್ ಮಾವು: ಅಪರೂಪದ ಮಾವಿನ ಮೇಳದಲ್ಲಿ 20 ಮಳಿಗೆಗಳನ್ನು ತೆರೆಯಲಾಗಿತ್ತು ರಾಮನಗರ ಜಿಲ್ಲೆಯ ಬಾದಾಮಿ ,ರಸಪೂರಿ ,ಮಲಗೋವ ತೋತಾಪುರಿ, ಸಿಂಧೂರ, ಸಕ್ಕರೆ ಗುತ್ತಿ ಬೈಗಂಪಲ್ಲಿ ,ರತ್ನಗಿರಿ ,ಅಲ್ಫೋನ್ಸೋ ಸಹಿತ ಅನೇಕ ತಳಿಯ ಸುಮಾರು 30 ಟನ್ ಗಳಷ್ಟು ಮಾವು ಮೇಳದಲ್ಲಿ ಬಿಕರಿಯಾಯ್ತು.

TEXTBOOK CONTROVERSY ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷ

ಕನಿಷ್ಠ 40 ರೂಪಾಯಿಂದ ತೊಡಗಿ ಕೆಜಿಗೆ 200 ರೂಪಾಯಿ ವರೆಗಿನ ಮಾವು ಕೂಡ ಮಾರಾಟಕ್ಕೆ ಇರಿಸಲಾಗಿತ್ತು. ಸಕ್ಕರೆ ಗುತ್ತಿ ಮಾವು ಈ ಮೇಳದ ವಿಶೇಷ ಆಕರ್ಷಣೆಯಾಗಿದ್ದು ಕರಾವಳಿಯಲ್ಲಿ ಸಿಗುವ ಸಣ್ಣ ಹಣ್ಣಿನಂತೆ ಕಾಣುವ ಈ ಮಾವು ಅತ್ಯಂತ ದುಬಾರಿ ದರವನ್ನು ಹೊಂದಿದೆ .ತಿನ್ನಲು ತುಂಬಾ ರುಚಿಕರವಾಗಿದ್ದು ,ಇದರಿಂದ ಸಾಂಬಾರು ಕೂಡ ಮಾಡುತ್ತಾರೆ.

ಉಡುಪಿ ಜಿಲ್ಲೆಯ ಮಾವು ಬೆಳೆಗಾರರಿಗೂ ಕೂಡ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಕರಾವಳಿಯಲ್ಲಿ ಮಾವು ಬೆಳೆಗಾರರ ಸಂಖ್ಯೆ ಕಡಿಮೆಯಾದ ಕಾರಣ ಮತ್ತು ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿ, ಯಾವುದೇ ಸ್ಥಳೀಯ ವ್ಯಾಪಾರಿಗಳು ಭಾಗವಹಿಸಿರಲಿಲ್ಲ.

INTERNATIONAL YOGA DAYಗೆ ಮೋದಿ ಆಗಮನ, ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

ಈ ವರ್ಷ ಬಂದ ವಿಪರೀತ ಮಳೆಯಿಂದ ಅತಿ ಹೆಚ್ಚು ಪ್ರಮಾಣದ ಮಾವು ಬೆಳೆ ನಷ್ಟವಾಗಿದೆ. ಹಾಗಾಗಿ ಹೊರ ಜಿಲ್ಲೆಗಳಿಂದ ಬಂದ ಮಾವಿನ ವ್ಯಾಪಾರಿಗಳಿಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಾರುಕಟ್ಟೆ ದೊರಕಿತು. ಜಿಲ್ಲೆಯ ನಾಗರಿಕರು ಕೂಡ ಅಪರೂಪದ ತಳಿಯ ಮಾವನನ್ನು ಪರಿಚಯಿಸಿಕೊಂಡು ಖರೀದಿಸಿ ತಿಂದು ಖುಷಿಪಟ್ಟರು.

click me!