ಕೈಕಾಲು ಮುಗಿತೀನ್ರಿ ಕೆಲಸದಿಂದ ತೆಗಿಬ್ಯಾಡ್ರಿ : ಪಿಡಿಓ ಮುಂದೆ ಅಂಗಲಾಚಿದ ದಲಿತ ಮಹಿಳೆ

By Kannadaprabha News  |  First Published Mar 11, 2023, 1:16 PM IST

ನಿಮ್ಮ ಕೈ ಕಾಲು ಮುಗಿಯುತ್ತೇನೆ, ನನ್ನ ಗಂಡನ ಪರವಾಗಿ ನಾನು ಕೆಲಸ ಮಾಡುತ್ತೇನೆ ಕೆಲಸದಿಂದ ಯಾವುದೆ ಕಾರಣಕ್ಕೂ ತೆಗೆಯಬೇಡಿ...ಕೇಸೂರು ಗ್ರಾಪಂ ಸ್ವಚ್ಛತಾ ಸಿಬ್ಬಂದಿಯ ಪತ್ನಿ ಕವಿತಾ ಯಲ್ಲಪ್ಪ ಮಾದರ ಗ್ರಾಪಂ ಪಿಡಿಒ ಹಾಗೂ ಆಡಳಿತ ಮಂಡಳಿಗೆ ಬೇಡಿಕೊಂಡ ಪರಿ ಇದು.


ದೋಟಿಹಾಳ (ಮಾ.11) :‘ನಿಮ್ಮ ಕೈ ಕಾಲು ಮುಗಿಯುತ್ತೇನೆ, ನನ್ನ ಗಂಡನ ಪರವಾಗಿ ನಾನು ಕೆಲಸ ಮಾಡುತ್ತೇನೆ ಕೆಲಸದಿಂದ ಯಾವುದೆ ಕಾರಣಕ್ಕೂ ತೆಗೆಯಬೇಡಿ...’

ಕೇಸೂರು ಗ್ರಾಪಂ ಸ್ವಚ್ಛತಾ ಸಿಬ್ಬಂದಿಯ ಪತ್ನಿ ಕವಿತಾ ಯಲ್ಲಪ್ಪ ಮಾದರ ಗ್ರಾಪಂ ಪಿಡಿಒ ಹಾಗೂ ಆಡಳಿತ ಮಂಡಳಿಗೆ ಬೇಡಿಕೊಂಡ ಪರಿ ಇದು.

Tap to resize

Latest Videos

undefined

ಕೇಸೂರು ಗ್ರಾಪಂ(Kesooru gramapanchayat)ನಲ್ಲಿ ಶುಕ್ರವಾರ ಗ್ರಾಪಂ ಅಧ್ಯಕ್ಷ ಶೇಖಪ್ಪ ಪೂಜಾರ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಲಾಯಿತು. ಈ ವೇಳೆ ಸಭೆಯ ಮಧ್ಯದಲ್ಲಿ ಬಂದ ಸ್ವಚ್ಛತಾ ಸಿಪಾಯಿ ಯಲ್ಲಪ್ಪ ಮಾದರ(Yallappa madar) ಪತ್ನಿ ಕವಿತಾ ಈಗಾಗಲೇ ಎರಡು ತಿಂಗಳುಗಳ ಕಾಲ ನಾನು ನನ್ನ ಗಂಡನ ಪರವಾಗಿ ಕೆಲಸ ಮಾಡುತ್ತಿದ್ದು, ನಿಮ್ಮೆಲ್ಲರ ಗಮನಕ್ಕೂ ಇದೆ. ಆದ ಕಾರಣ ನನ್ನ ಗಂಡ ಮಾಡಬೇಕಾದ ಗ್ರಾಮ ಸ್ವಚ್ಛತೆಯ ಕಾರ್ಯ ನಾನು ಮುಂದುವರಿಸಿಕೊಂಡು ಹೋಗುತ್ತೇನೆ. ನನ್ನ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಆದ ಕಾರಣ ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬೇಡಿ ಎಂದು ಬೇಡಿಕೊಂಡರು.

ದಲಿತೆ ನೀರು ಕುಡಿದಿದ್ದಕ್ಕೆ ಟ್ಯಾಂಕ್‌ ಸ್ವಚ್ಛ, ಗ್ರಾಮಕ್ಕೆ ತೆರಳಿ ಎಲ್ಲಾ ದಲಿತರಿಗೆ ನೀರು ಕುಡಿಸಿದ ಅಧಿಕಾರಿ

ಇದಕ್ಕೆ ಪ್ರತಿ ಉತ್ತರ ನೀಡಿದ ಪಿಡಿಒ ಅಮೀನಸಾಬ್‌ ಅಲಾಂದಾರ, ಗ್ರಾಪಂ ಸದಸ್ಯರು, ಕಳೆದ ಮೂರ್ನಾಲ್ಕು ವರ್ಷಗಳಿಂದ ನಿಮ್ಮ ಯಜಮಾನ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ನಮ್ಮ ವಿರುದ್ಧ ಮೇಲಾಧಿಕಾರಿಗಳಿಗೂ ದೂರು ನೀಡಿದ್ದಾರೆ. ನಮ್ಮ ಸಿಬ್ಬಂದಿ, ಸದಸ್ಯರಿಗೂ ಏಕವಚನದಲ್ಲಿ ಮಾತನಾಡುತ್ತಾನೆ. ಈತನಿಂದ ನಮ್ಮ ಗ್ರಾಪಂಗೆ ಹಾಗೂ ನಮಗೆ ಜನರು ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದಾರೆ. ಇಂತಹ ಕೆಲಸಗಾರರು ನಮಗೆ ಅವಶ್ಯಕವಿಲ್ಲ. ಅವರ ಪರವಾಗಿ ನೀವು ಕೆಲಸ ಮಾಡಲು ನಿಯಮಗಳು ಒಪ್ಪಲ್ಲ ಎಂದು ಸಭೆಯಿಂದ ಅವರನ್ನು ಹೊರಗಡೆ ಕಳುಹಿಸಿದರು.

ಪಿಡಿಒ ಸಭೆಯ ಕುರಿತು ಮಾತನಾಡಿ, ದೂರದೃಷ್ಟಿಕೋನ ಇಟ್ಟುಕೊಂಡು ಮೂರು ವರ್ಷಗಳ ಕ್ರೀಯಾಯೋಜನೆ ಮಾಡಬೇಕಾಗಿದ್ದು, ಅದಕ್ಕೆ ವರ್ಷಕ್ಕೆ .1.36ಕೋಟಿ ಇದ್ದು ಅದರಲ್ಲಿ ಸಿಸಿ ರಸ್ತೆ, ದಾರಿ, ಸಿಡಿ, ಡ್ರೈನೇಜ್‌, ಶಾಲಾ ಕಾಂಪೌಂಡ್‌, ಅಂಗನವಾಡಿ ಕಟ್ಟಡ, ಸೇರಿದಂತೆ ವಿವಿಧ ಕಾಮಗಾರಿ ಮಾಡಬೇಕು ಎಂದರು.

ಕಸವಿಲೇವಾರಿ ವಾಹನದ ಚಾಲಕರು ಹಾಗೂ ಕಸ ವಿಂಗಡಣಾಕಾರರ ನೇಮಕಾತಿ ಪ್ರಕ್ರಿಯೆ ಕುರಿತು ಚರ್ಚೆ ನಡೆಯಿತು. ವಸತಿ ಯೋಜನೆಗಳ ಕುರಿತು ಅನೇಕ ತಕರಾರು ಅರ್ಜಿಗಳು ಬಂದಿದ್ದು ಈ ಕುರಿತು ಸ್ಥಳ ಪರೀಶಿಲನೆ ಮಾಡಿ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿ ವರ್ಗವದರು ಹಾಜರಿದ್ದರು.

ಬೆಳಗಾವಿ: ದಲಿತ ಮಹಿಳೆ ಮನೇಲಿ ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿದ ಕೇಂದ್ರ ಸಚಿವ

click me!