ಬೇಸಿಗೆಯ ದಿನಗಳು ಆಗಮಿಸುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಬೆಂಕಿಯ ಅವಘಡಗಳು ಜಾಸ್ತಿ ಆಗುತ್ತಿವೆ. ಆದರೆ, ನಗರದ ಅಗ್ನಿಶಾಮಕ ದಳದಲ್ಲಿ ಒಂದೇ ನೀರಿನ ವಾಹನ ಇರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಶಿರಸಿ (ಮಾ.11) : ಬೇಸಿಗೆಯ ದಿನಗಳು ಆಗಮಿಸುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಬೆಂಕಿಯ ಅವಘಡಗಳು ಜಾಸ್ತಿ ಆಗುತ್ತಿವೆ. ಆದರೆ, ನಗರದ ಅಗ್ನಿಶಾಮಕ ದಳದಲ್ಲಿ ಒಂದೇ ನೀರಿನ ವಾಹನ ಇರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಒಂದು ಮಳೆ ಆಗುತ್ತಿತ್ತು. ಈ ವರ್ಷ ಮಳೆ ಆಗದಿರುವುದು ಭೂಮಿಯ ಕಾವನ್ನೂ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಶಿರಸಿ ತಾಲೂಕಿನಲ್ಲಿ ಅಗ್ನಿ ಅನಾಹುತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಅಗ್ನಿಶಾಮಕ ದಳ(Fire Brigade) ಆಗಮಿಸುವ ವೇಳೆಗೆ ಎಲ್ಲವೂ ಸುಟ್ಟು ಕರಕಲಾದ ಘಟನೆಗಳು ಸಾಕಷ್ಟುಉಂಟಾಗಿವೆ. ಶಿರಸಿ ಅಗ್ನಿಶಾಮಕ ದಳದ ವ್ಯಾಪ್ತಿಯಲ್ಲಿ ಜನವರಿ ತಿಂಗಳಿಂದ ದಿನಕ್ಕೆ 4-6 ಕಡೆಗಳಲ್ಲಿ ಬೆಂಕಿ ಅನಾಹುತ ಸಂಭವಿಸುತ್ತಿದ್ದು, ಬೇಸಿಗೆ ತಾಪಕ್ಕೆ ಅಗ್ನಿ ಅವಘಡಗಳು ಇನ್ನಷ್ಟುಹೆಚ್ಚಳವಾಗುವ ಆತಂಕ ವ್ಯಕ್ತವಾಗಿದೆ.
undefined
ಉತ್ತರ ಕನ್ನಡ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ಸಾವು
ಶಿರಸಿ ತಾಲೂಕು ವಿಸ್ತಾರವಾಗಿದ್ದು, ಹುಲ್ಲು ಬೆಳೆಯುವ ಬೇಣ, ಬೆಟ್ಟಕೃಷಿ ಪ್ರದೇಶಗಳು ಸಾಕಷ್ಟಿವೆ. ಬೇಣಗಳಲ್ಲಿ ಒಂದಲ್ಲ ಒಂದು ಕಡೆ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ತಾಲೂಕಿನಲ್ಲಿ ಅಗ್ನಿ ದುರಂತ ಆದಾಗ ತಕ್ಷಣಕ್ಕೆ ತೆರಳಬೇಕಿದ್ದ ಅಗ್ನಿಶಾಮಕ ದಳ ವಾಹನದ ಕೊರತೆಯಿಂದ ಸ್ಪಂದಿಸದಂತೆ ಆಗಿದೆ. ತಾಲೂಕು ವ್ಯಾಪ್ತಿಯಲ್ಲಿ ಹಾಲಿ ಒಂದೇ ಅಗ್ನಿಶಾಮಕ ವಾಹನವಿದೆ. ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ದುರಂತಗಳು ಸಂಭವಿಸಿದರೆ ಅಗ್ನಿ ನಿಯಂತ್ರಣ ಕಷ್ಟಸಾಧ್ಯದ ಪರಿಸ್ಥಿತಿಯಿದೆ.
ಬನವಾಸಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಕಿ ಬಿದ್ದ ಘಟನೆ ಜಾಸ್ತಿ ಆಗುತ್ತಿದೆ. ಅಲ್ಲಿಗೆ ವಾಹನ ತೆರಳಿದರೆ ವಾಪಸ್ ಬರಲು ಸಮಯ ಹಿಡಿಯಲಿದ್ದು, ಈ ವೇಳೆ ಇನ್ನೆಲ್ಲಾದರೂ ಬೆಂಕಿ ತಗುಲಿದಾಗ ಹೆಚ್ಚಿನ ಹಾನಿ ಆಗುತ್ತಿದೆ.
ಕಳೆದ ಜನವರಿ ತಿಂಗಳಿನಿಂದ ಮಾಚ್‌ರ್ ಮೊದಲ ವಾರದ ವರೆಗೆ ತಾಲೂಕಿನ ಹಲವು ಕಡೆಗಳಲ್ಲಿ ಕೊಟ್ಟಿಗೆ, ಮನೆ, ಬೇಣ, ಬೆಟ್ಟ, ತೋಟ, ಅರಣ್ಯ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ 50ಕ್ಕೂ ಹೆಚ್ಚು ಅಗ್ನಿ ಅನಾಹುತಗಳು ನಡೆದಿವೆ. ಒಂದೇ ದಿನ ಮೂರು ನಾಲ್ಕು ಪ್ರಕರಣಗಳಲ್ಲಿ ಕೇವಲ ಒಂದೆರಡು ಪ್ರಕರಣದಲ್ಲಿ ಬೆಂಕಿ ಆರಿಸಲು ಸಾಧ್ಯವಾಗಿದೆ.
ಅರಣ್ಯ ಇಲಾಖೆಗೆ ಬೆಂಗಳೂರಿನಿಂದಲೇ ಸೂಚನೆ
ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಇಲಾಖೆ(forest depertment)ಯ ಶಿರಸಿ ಕಚೇರಿಗೆ ಬೆಂಗಳೂರು ಮುಖ್ಯ ಕಚೇರಿಯಿಂದ ಅಲರ್ಚ್ ಬರುತ್ತದೆ. ಉಪಗ್ರಹ ಆಧಾರಿತವಾಗಿ ಕಾವಲು ವ್ಯವಸ್ಥೆ ಅರಣ್ಯ ಇಲಾಖೆಯಲ್ಲಿದೆ. ಅರಣ್ಯ ಇಲಾಖೆಯ ಸೂಚನೆ ಬಂದ ತಕ್ಷಣ ಅಗ್ನಿಶಾಮಕ ಬೆಂಕಿ ಬಿದ್ದ ಸ್ಥಳಕ್ಕೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಅಗ್ನಿಶ್ಯಾಮಕ ವಾಹನ ಬೇರೆಡೆ ತೆರಳಿದ್ದರೆ ಅರಣ್ಯ ಸಂಪತ್ತಿಗೆ ಆಗುವ ಹಾನಿಯೂ ಅಪಾರ.
ಶಿರಸಿಯಲ್ಲಿ ಅಬ್ಬರದ ಬೇಡರ ವೇಷದ ಸಂಭ್ರಮ: ರೌದ್ರರಮಣೀಯ ಬೇಡರ ವೇಷ ನೋಡಲು ಸಹಸ್ರಾರು ಜನ
ಈ ವರ್ಷ ಬೆಂಕಿ ತಗುಲುವ ಘಟನೆಗಳೂ ಜಾಸ್ತಿ ಆಗಿವೆ. ಇರುವ ವಾಹನದಲ್ಲಿಯೇ ನಾವು ಶಕ್ತಿ ಮೀರಿ ಯತ್ನಿಸುತ್ತಿದ್ದೇವೆ.
ಲಂಬೋದರ ನಾಯ್ಕ, ಅಗ್ನಿಶಾಮಕ ದಳದ ಠಾಣಾಧಿಕಾರಿ
ಬೆಂಕಿ ಬಿದ್ದ ಸಂದರ್ಭದಲ್ಲಿ ಅಗ್ನಿಶಾಮಕಕ್ಕೆ ಕರೆ ಮಾಡಿದರೆ ವಾಹನ ಈಗಾಗಲೇ ಬೇರೆಡೆ ಬೆಂಕಿ ಆರಿಸಲು ಸಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇಷ್ಟುದೊಡ್ಡ ತಾಲೂಕಿಗೆ ಕನಿಷ್ಠ ಎರಡು ವಾಹನದ ಅಗತ್ಯವಿದೆ.
ವಿನಾಯಕ ಸುಬ್ಬಾ ಮರಾಠೆ, ಸಾರ್ವಜನಿಕ