ದಕ್ಷಿಣ ಕನ್ನಡ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ: ಸಚಿವ ಕೋಟ

By Suvarna NewsFirst Published Jul 12, 2020, 2:51 PM IST
Highlights

ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಮಂಗಳೂರು(ಜು.12): ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಮಂಗಳೂರು, ಉಳ್ಳಾಲ ಸೇರಿದಂತೆ ಸಂಪರ್ಕಿತ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ಇದೆ.

"

ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ. ಇಡೀ ಜಿಲ್ಲೆಯನ್ನು ಮತ್ತೆ ಲಾಕ್ ಡೌನ್ ಮಾಡುವತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ಚಿಂತಿಸಿದೆ ಎಂದು ಸುವರ್ಣ ನ್ಯೂಸ್ ಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಅಂಧನ 'ಮನೆ' ಬೆಳಗಿದ ಯುವ ಬ್ರಿಗೇಡ್: ಮನೆ ಹಸ್ತಾಂತರಿಸಿದ ಸೂಲಿಬೆಲೆ

ಇಡೀ ಜಿಲ್ಲೆಯನ್ನ ಮತ್ತೆ ಲಾಕ್ ಡೌನ್ ಮಾಡುವ ಮಾನಸಿಕ ಸ್ಥಿತಿ ಇದೆ. ಎಲ್ಲರ ಒಟ್ಟು ಅಭಿಪ್ರಾಯದಂತೆ ದ.ಕ ಜಿಲ್ಲೆ ಮತ್ತೆ ಲಾಕ್ ಡೌನ್ ಆಗಬೇಕು. ಈ ಬಗ್ಗೆ ಇಂದು ಸಂಸದರು, ಶಾಸಕರು, ಡಿಸಿ ಮತ್ತು ಆರೋಗ್ಯಾಧಿಕಾರಿಗಳ ಜೊತೆ ಚರ್ಚೆಯಾಗಿದೆ ಎಂದಿದ್ದಾರೆ.

ಮಂಗಳೂರಲ್ಲಿ ಕೊರೋನಾ ಸರಣಿ ಸಾವಿನ ಸ್ಫೋಟ: ಒಂದೇ ದಿನ 8 ಬಲಿ

ಜಿಲ್ಲಾಡಳಿತ ಮತ್ತು ತಜ್ಞರ ಅಭಿಪ್ರಾಯದಂತೆ ಮತ್ತೆ ಜಿಲ್ಲೆ ಲಾಕ್ ಡೌನ್ ಆಗಬೇಕಿದೆ. ಈ ಕುರಿತ ರೂಪುರೇಷೆಗಳ ಬಗ್ಗೆಯೂ ಒಟ್ಟಾಗಿ ಚರ್ಚೆ ಮಾಡಿದ್ದೇವೆ. ನಾಳೆ 11 ಗಂಟೆಗೆ ‌ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ.

click me!