ಎಡಕುಮೇರಿ ಘಾಟ್‌ನಲ್ಲಿ ವಂದೇ ಭಾರತ್‌; ಸೋಮೇಶ್ವರ ರೈಲ್ವೇ ಗೇಟ್‌ ಬಂದ್‌, ಬದಲಿ ಮಾರ್ಗ

Published : Aug 18, 2026, 07:25 AM IST
Vande Bharat

ಸಾರಾಂಶ

ಮಂಗಳೂರು-ಬೆಂಗಳೂರು ನಡುವಿನ ಎಡಕುಮೇರಿ ಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಇದರೊಂದಿಗೆ, ಸೋಮೇಶ್ವರ ರೈಲ್ವೆ ಗೇಟ್ ಬಂದ್, ದ.ಕ. ಜಿಲ್ಲೆಯ ಮಳೆ ಹಾಗೂ ಕುದ್ರೋಳಿ ಕ್ಷೇತ್ರದ ನಾಗರಪಂಚಮಿ ವಿಶೇಷ ಪೂಜೆಯ ಕುರಿತು ವರದಿ ವಿವರಿಸುತ್ತದೆ.

ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಎಡಕುಮೇರಿ ಮಾರ್ಗದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರದ ಪೂರ್ವಭಾವಿಯಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಪುರ-ಸುಬ್ರಹ್ಮಣ್ಯ ರೋಡ್‌ನ ಘಾಟ್‌ ಮಾರ್ಗದಲ್ಲಿ ವಂದೇ ಭಾರತ್‌ ರೈಲಿನ ಪ್ರಾಯೋಗಿಕ ಸಂಚಾರ ಆರಂಭಗೊಂಡಿದ್ದು, ಸೋಮವಾರವೂ ಪ್ರಾಯೋಗಿಕ ಸಂಚಾರ ನಡೆದಿದೆ.

ಆ.12ರಂದು ಸಕಲೇಶಪುರ-ಸುಬ್ರಹ್ಮಣ್ಯ ರೋಡ್‌ ನಡುವೆ ಮೊದಲ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಸಂಚರಿಸಿದೆ. ಆ ಬಳಿಕ ಆ.13ರಂದು ಪ್ರಾಯೋಗಿಕ ಸಂಚಾರ ನಡೆದಿದೆ. ಇದೀಗ ಆ.17ರ ಸೋಮವಾರವೂ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಆ.18, 19 ಹಾಗೂ 20ರ ವರೆಗೆ ಪ್ರಾಯೋಗಿಕ ಸಂಚಾರ ಮುಂದುವರಿಯಲಿದೆ. ಬೆಳಗ್ಗೆ ಗಂಟೆಯ ವೇಳೆಗೆ ಸಕಲೇಶಪುರದಿಂದ ಪ್ರಾಯೋಗಿಕ ಸಂಚಾರ ಹೊರಡುವ ರೈಲು 11.55ರ ವೇಳೆ ಸುಬ್ರಹ್ಮಣ್ಯ ರೋಡ್‌ ತಲುಪಿದ್ದು, 12.15ಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುದತ್ತ ಸಂಚಾರ ಆರಂಭಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮೇಶ್ವರ ರೈಲ್ವೇ ಗೇಟ್‌ ಬಂದ್‌: ಬದಲಿ ಮಾರ್ಗ ಬಳಕೆಗೆ ಸೂಚನೆ

ಮಂಗಳೂರು: ಉಳ್ಳಾಲ ಮತ್ತು ನೇತ್ರಾವತಿ ರೈಲು ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ /ಗೇಟ್ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಸಲುವಾಗಿ 877/200-300ನೇ ಕಿಲೋ ಮೀಟರ್‌ನಲ್ಲಿರುವ ಲೆವೆಲ್ ಕ್ರಾಸಿಂಗ್ ಸಂಖ್ಯೆ 293 (ಸೋಮೇಶ್ವರ ರೈಲ್ವೆ ಗೇಟ್) ಅನ್ನು ಆ.17ರಿಂದ ಬೆಳಗ್ಗೆ 10ರಿಂದ ಆ.25ರ ಸಂಜೆ 5 ಗಂಟೆವರೆಗೆ ರಸ್ತೆ ಸಂಚಾರ ಮುಚ್ಚಲಾಗುತ್ತದೆ. ವಾಹನ ಸವಾರರು ಬೀರಿ - ಸಂಗೋಲಿಗೇ - ಉಚ್ಚಿಲ ಲೆವೆಲ್ ಕ್ರಾಸಿಂಗ್- ಬೀಚ್ ರಸ್ತೆ - ಸೋಮೇಶ್ವರ ಅಥವಾ ಕೋಟೇಕಾರ್- ಕೋಲ್ಯ-ತೊಕ್ಕೊಟ್ಟು-ಓಲಾಪೇಟೆ ರಸ್ತೆ -ಸೋಮೇಶ್ವರ ಪರ್ಯಾಯ ಬದಲಿ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ದ.ಕ. ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದಿದ್ದು, ನಗರದಲ್ಲಿ ಕೆಲಕಾಲ ಮಳೆಯಾಗಿದೆ. ಬಳಿಕ ಸಂಜೆವರೆಗೆ ಬಿಸಿಲ ವಾತಾವರಣ ಇದ್ದರೂ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿತ್ತು. ಗ್ರಾಮೀಣ ಭಾಗದ ಹಲವೆಡೆ ಆಗಾಗ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ವರೆಗೆ 24 ಗಂಟೆಯಲ್ಲಿ 13 ಮಿ.ಮೀ. ಮಳೆಯಾಗಿದೆ.

ಕುದ್ರೋಳಿ: ಸುಬ್ರಹ್ಮಣ್ಯ ದೇವರಿಗೆ ಅಭಿಷೇಕ

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಾಗರಪಂಚಮಿ ಪ್ರಯುಕ್ತ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಪಿ.ಕೆ.ಗೌರವಿ ರಾಜಶೇಖರ್, ಶ್ರೀ ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಕ್ಷೇತ್ರದ ಭಕ್ತರು ಇದ್ದರು. ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಇದನ್ನೂ ಓದಿ: ಚಿಕಿತ್ಸೆ ಸಿಗದೆ ಗರ್ಭಿಣಿ ಪತ್ನಿ ಸಾವು: ಗ್ರಾಮಕ್ಕೆ ರಸ್ತೆ ನಿರ್ಮಿಸಿದ ಪತಿ

PREV
Read more Articles on
click me!

Recommended Stories

ಹಿಡಕಲ್‌ ಡ್ಯಾಂ ಭರ್ತಿ: 10 ಗೇಟ್‌ ಮೂಲಕ ನೀರು ಹೊರಕ್ಕೆ, ಕುಡಿಯುವ ನೀರಿನ ಆತಂಕ ದೂರ
ಶಿಕ್ಷಕರಿಬ್ಬರಿಗೆ H1N1, 500 ಮಕ್ಕಳಿಗೆ ಜ್ವರ? ಬೆಂಗಳೂರಿನ ಶಾಲೆಗೆ 2 ದಿನ ರಜೆ ಘೋಷಣೆ