ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತುಮಕೂರು ಜಿಲ್ಲೆಯಾದ್ಯಂತ ಡಿ.17ರ ವರಗೆ ಮಳೆಯಾಗುವ ಸಂಭವವಿಲ್ಲ ಎಂದು ತಾಲೂಕು ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ಮುಖ್ಯಸ್ಥ ಡಾ.ವಿ. ಗೋವಿಂದಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಪಟೂರು: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತುಮಕೂರು ಜಿಲ್ಲೆಯಾದ್ಯಂತ ಡಿ.17ರ ವರಗೆ ಮಳೆಯಾಗುವ ಸಂಭವವಿಲ್ಲ ಎಂದು ತಾಲೂಕು ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ಮುಖ್ಯಸ್ಥ ಡಾ.ವಿ. ಗೋವಿಂದಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಕಟಾವು ಮತ್ತು ಒಕ್ಕಣೆ ಮಾಡಬಹುದಾಗಿದೆ. ಮುಂದಿನ ಐದು ದಿನಗಳಲ್ಲಿ ಮೋಡಕವಿದ ವಾತಾವರಣ, ಕಡಿಮೆ ಉಷ್ಣ್ಣಾಂಶ, ಗಾಳಿಯ ವೇಗ ಹೆಚ್ಚಾಗಿರುವುದರಿಂದ ಬೆಳೆ ಮತ್ತು ಜಾನುವಾರುಗಳಲ್ಲಿ ರೋಗ ಮತ್ತು ಕೀಟಗಳ ಬೆಳವಣಿಗೆಗೆ ಪೂರಕವಾಗಿದೆ. ಹಾಗಾಗಿ ಸುರಕ್ಷಿತ ಕ್ರಮಗಳನ್ನು ಮುಂಚಿತವಾಗಿ ಅನುಸರಿಸಬೇಕಾಗಿದೆ. ಬೀನ್ಸ್ ಹಾಗೂ ಬಟಾಣಿಗಳಂತೆ ತೊಗರಿಯಲ್ಲು ಸಹ ಪ್ರೊಟೀನ್, ಶರ್ಕರ ಪಿಷ್ಠ ಹಾಗೂ ನಾರಿನಾಂಶ ಒದಗಿಸುವಂತಹ ಸಸ್ಯಹಾರಿ ಆಹಾರವಾಗಿದೆ.
undefined
100ಗ್ರಾಂ ತೊಗರಿಯನ್ನು ಬೇಳೆ ರೂಪದಲ್ಲಿ ಸೇವಿಸಿದರೆ 22 ಗ್ರಾಂ ಪ್ರೋಟಿನ್, ೩೪೩ ಕಿ.ಲೋ ಕ್ಯಾಲರಿ ಶಕ್ತಿ ಹಾಗೂ 63 ಗ್ರಾಂ ಶರ್ಕರ ಪಿಷ್ಠ ದೊರೆಯುತ್ತದೆ. ತೊಗರಿ ಬೇಳೆಯಲ್ಲಿ ಬಿ ಸಮೂಹದ ಜೀವಸತ್ವಗಳು ಮತ್ತು ಖನಿಜಗಳು ಕೂಡ ಹೇರಳವಾಗಿದೆ. 100 ಗ್ರಾಂ ತೊಗರಿ ಸೇವೆನೆಗೆ 15 ಗ್ರಾಂ ನಾರಿನಾಂಶ ದೊರೆಯುತ್ತದೆ. ಇದು ನಿಧಾನವಾಗಿ ಜೀರ್ಣವಾಗಿ ಮಧುಮೇಹ ಹತೋಟಿಯಲ್ಲಿಡುವುದಲ್ಲದೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಹಸಿರು ತೊಗರಿಕಾಳಿನಲ್ಲಿ 39 ಮಿ.ಗ್ರಾಂ ಜೀವಸತ್ವ-ಸಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.
ಸಪ್ತ ನದಿಗಳ ನಾಡಲ್ಲಿ ನೀರಿಲ್ಲ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.09): ಈ ಹಳ್ಳಿಗರದ್ದು ಒಂಥರಾ ಹೋರಾಟದ ಬದುಕು. ಜೀವನಕ್ಕಾಗಿ ಅಲ್ಲ. ದುಡಿಮೆಗಾಗೂ ಅಲ್ಲ. ಜಾಗ-ಬದುಕಿಗಾಗಂತು ಮೊದ್ಲೇ ಅಲ್ಲ. ಕೇವಲ ಕುಡಿಯೋ ನೀರಿಗಾಗಿ. ಸಮುದ್ರದ ಜೊತೆ ನೆಂಟಸ್ಥಿಕೆ. ಉಪ್ಪಿಗೆ ಬರ ಅನ್ನೋ ಮಾತು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳ್ಗಲ್-ಉಳ್ಳೂರು ಕೋರೆ ಗ್ರಾಮದ ಜನರಿಗೆ ಅನ್ವಯಿಸುತ್ತೇದೆ. ಕಳಸ ತಾಲೂಕಿನಲ್ಲಿ ಸೋಮಾವತಿ-ಭದ್ರಾ ನದಿಗಳು ಜನ್ಮ ತಾಳಿ ನಾಡಿನ ಉದ್ದಗಲಕ್ಕೂ ಹರಿದರೂ ಕೂಡ ಈ ಗ್ರಾಮದ ಜನ ನೀರಿಗಾಗಿ 8 ಕಿ.ಮೀ. ಪೈಪ್ ಗಳ ಮೂಲಕ ಹೋರಾಡಬೇಕು.
ಹೀಗೆ ಹೋರಾಡದಿದ್ರೆ ಕುಡಿಯೋಕೆ ನೀರಿರಲ್ಲ. ಸೋಮಾವತಿ ನದಿ ಮಧ್ಯದ ಚೆಕ್ ಡ್ಯಾಮ್ ನಿಂದ ಪೈಪ್ ಮೂಲಕವೇ ನೀರು ಬರಬೇಕು. ಮಳೆ ಜೋರಾಗಿ ಬಂದರೆ ನೀರಿನ ಅಬ್ಬರಕ್ಕೆ ಪೈಪ್ ಗಳು ಕೊಚ್ಚಿ ಹೋಗುತ್ತೆ. ನದಿಯಲ್ಲಿ ತೇಲಿಕೊಂಡು ಬಂದಾಗ ಗ್ರಾಮಸ್ಥರು ಪೈಪ್ ಗಳನ್ನ ಎಳೆದು ಪಕ್ಕಕ್ಕೆ ಹಾಕಿ ಮಳೆ ಕಮ್ಮಿಯಾದ ಮೇಲೆ ಬಾಳ್ಗಲ್ ಹಾಗೂ ಉಳ್ಳೂರು ಕೋರೆ ಗ್ರಾಮದ ಜನರೆಲ್ಲಾ ಸೇರಿ ಪೈಪ್ ಗಳನ್ನ ಮತ್ತೆ ಜೋಡಿಸಬೇಕು. ವಾರದಿಂದ ನೀರಿನ ಸಮಸ್ಯೆಯಾದಾಗ ಗ್ರಾಮಸ್ಥರು ಕೆಲಸ ಬಿಟ್ಟು ನೀರಿನ ಪೈಪ್ ದುರಸ್ಥಿ ಮಾಡಬೇಕು....
ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು: ಮೊದಲ ಬಾರಿಗೆ ಲೀಲಾವತಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ!
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ: ಬಾಳ್ಗಲ್ ಗ್ರಾಮದಿಂದ ಸೋಮಾವತಿ ನದಿಗೆ 8 ಕಿ.ಮೀ. ದೂರಿದೆ. ನದಿ ಹಾಗೂ ಕಾಡಿನ ಮಧ್ಯೆ ಒಬ್ಬಿಬ್ಬರು ಹೋಗೋದಕ್ಕೆ ಆಗಲ್ಲ.15-20 ಜನ ಹೋಗಬೇಕು. ನಮ್ಮ ದಾಹದ ನೋವನ್ನ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಅಂತ ಹಳ್ಳಿಗರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಗ್ರಾಮಗಳಿಗೆ ಸೋಮಾವತಿ ನದಿಯಿಂದಲೇ ನೀರು ಬರಬೇಕು. ಇಲ್ಲಿ 80-100 ಮನೆಗಳಿವೆ. ಗಿರಿಜನ ಹಾಸ್ಟೆಲ್, ಕೇಂದ್ರ ವಾಲ್ಮೀಕಿ ಆಶ್ರಮ ಶಾಲೆಗಳಿದ್ದು, 150ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಂಗನವಾಡಿಯೂ ಇದ್ದು ನೀರಿಲ್ಲದೆ ಮಕ್ಕಳಿಗೆ ರಜೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಸಿದ್ದತೆ ಬಗ್ಗೆ ಸಂಪುಟದಲ್ಲಿ ಸೂಚನೆ: ಸಿದ್ದರಾಮಯ್ಯ
ನೀರಿಲ್ಲದ ಪರದಾಡುವ ಜನ ನಿಮಗೆ ಎಲ್ಲಾ ಸಹಕಾರ ಕೊಡ್ತೀವಿ, ಬೇಕಾಗಿದ್ದೆಲ್ಲಾ ತಂದು ಕೊಡ್ತೀವಿ ಅಂದ್ರು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸ್ಥಳಿಯರು ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಸಮುದ್ರದ ತಳದಲ್ಲಿ ಉಪ್ಪಿಗೆ ಬರ. ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತುಗಳು ಕಾಫಿನಾಡಿಗೆ ಹೇಳಿ ಮಾಡಿಸಿದಂತಿದೆ. ಯಾಕಂದ್ರೆ, ಸಪ್ತ ನದಿಗಳ ನಾಡು ಅಂತ ಕರೆಸಿಕೊಳ್ಳೋ ಕಾಫಿನಾಡಲ್ಲಿ ನೀರಿಗೆ ಬರ ಅಂದ್ರೆ ಯಾರೂ ನಂಬಲ್ಲ. ಅದರಲ್ಲೂ ನದಿಗಳ ಇಕ್ಕೆಲಗಳ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಅಂದ್ರೆ ನಂಬೋದು ಅಸಾಧ್ಯದ ಮಾತು. ಆದ್ರೆ, ಇದು ವಾಸ್ತವ ಸ್ಥಿತಿ. ಸರ್ಕಾರ 2 ಲಕ್ಷ ಹಣ ಖರ್ಚು ಮಾಡಿದ್ರೆ ಆ ಹಳ್ಳಿಗರಿಗೆ ಶಾಶ್ವತ ಕುಡಿಯೋ ನೀರಿನ ಸೌಲಭ್ಯ ಸಿಗಲಿದೆ. ಆದ್ರೆ, ಇಚ್ಛಾಶಕ್ತಿಯ ಕೊರತೆ ಹಾಗೂ ಅಧಿಕಾರಿಗಳಿಂದ ಅದು ಇಂದಿಗೂ ಆಗಿಲ್ಲ. ಮುಂದೇನ್ ಮಾಡ್ತಾರೋ ಕಾದುನೋಡ್ಬೇಕು.