ಬೀದರ್: 'ದಕ್ಷ ಅಧಿಕಾರಿಗಳಿಗೆ ಮಾನಸಿಕ ಒತ್ತಡ ಹಾಕಿದ್ರೆ ಈಶ್ವರ ಖಂಡ್ರೆ ವಿರುದ್ಧ ದೂರು'

Kannadaprabha News   | Asianet News
Published : May 25, 2020, 10:17 AM ISTUpdated : May 25, 2020, 10:18 AM IST
ಬೀದರ್: 'ದಕ್ಷ ಅಧಿಕಾರಿಗಳಿಗೆ ಮಾನಸಿಕ ಒತ್ತಡ ಹಾಕಿದ್ರೆ ಈಶ್ವರ ಖಂಡ್ರೆ ವಿರುದ್ಧ ದೂರು'

ಸಾರಾಂಶ

ವಸತಿ ಹಂಚಿಕೆ ಅಕ್ರಮ ಕುರಿತಂತೆ ಶಾಸಕ ಈಶ್ವರ ಖಂಡ್ರೆಗೆ ಸವಾಲ್‌| ಆರೋಪಿ ಸ್ಥಾನದಲ್ಲಿದ್ದು ಅಧಿಕಾರಿಗಳಿಗೆ ನಿಯಮಗಳ ಪಾಠ ಹೇಳುತ್ತಿರುವ ತಮಗೆ ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಅವರಿಗೆ ಕ್ಷಮೆ ಕೇಳುವಂತೆ ಸೂಚಿಸಲು ಯಾವ ನೈತಿಕತೆ ಇದೆ?|

ಬೀದರ್‌(ಮೇ.25): ವಸತಿ ಹಗರಣಕ್ಕೆ ಸಂಬಂಧಿಸಿ ಬೀದರ್‌ ಜಿಲ್ಲಾಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ್‌ ಖಂಡ್ರೆ ಅವರ ಹೇಳಿಗೆ ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ಸಂಚಾಲಕ ಡಿ.ಕೆ.ಸಿದ್ರಾಮ ತೀವ್ರ ಕಿಡಿಕಾರಿದ್ದಾರೆ. 

ದಕ್ಷ ಅಧಿಕಾರಿಗಳ ವಿರುದ್ಧ ಧಮಕಿ ಹಾಕಿ ಮಾನಸಿಕ ಒತ್ತಡ ಹೇರಿದಲ್ಲಿ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದೇ ಕಟ್ಟಡದಲ್ಲಿ ವಾಸವಿದ್ದ 11 ಮಂದಿಗೆ ಕೊರೋನಾ ಶಾಕ್..!

ಈ ಬಗ್ಗೆ ಪ್ರತಿ ಹೇಳಿಕೆ ನೀಡಿದ ಸಿದ್ರಾಮ ಅವರು, ಆರೋಪಿ ಸ್ಥಾನದಲ್ಲಿದ್ದು ಅಧಿಕಾರಿಗಳಿಗೆ ನಿಯಮಗಳ ಪಾಠ ಹೇಳುತ್ತಿರುವ ತಮಗೆ ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಅವರಿಗೆ ಕ್ಷಮೆ ಕೇಳುವಂತೆ ಸೂಚಿಸಲು ಯಾವ ನೈತಿಕತೆ ಇದೆ? ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರದಲ್ಲಿ ಸಹಿ ಮಾಡಿ, ಫೋಟೊ ಹಾಕಿಕೊಂಡು ತಮ್ಮ ಮನೆಯಲ್ಲಿ ಹಂಚಿರುವುದು ಜಗಜ್ಜಾಹೀರಾಗಿದ್ದರೂ ಇದನ್ನು ತಿಳಿವಳಿಕೆ ಪತ್ರ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ತಿಳಿಸಿದ್ದಾರೆ. 
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!