ಬೆಣ್ಣೆನಗರಿ ದಾವಣಗೆರೆಯಲ್ಲಿ ಹೊಸದಾಗಿ 4 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು 18 ಮಂಧಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಮೇ.25): ಮತ್ತೆ ಹೊಸದಾಗಿ 4 ಪಾಸಿಟಿವ್ ಪ್ರಕರಣ ವರದಿಯಾದ ಬೆನ್ನಲ್ಲೇ ಸೋಂಕಿನಿಂದ ಗುಣಮುಖರಾದ 18 ಜನರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ ಆಕ್ಟಿವ್ ಕೇಸ್‌ಗಳ ಸಂಖ್ಯೆ 75ಕ್ಕೆ ಇಳಿದಿದೆ.
ಇಲ್ಲಿನ ಕಂಟೈನ್‌ಮೆಂಟ್ ಝೋನ್ ಸಂಪರ್ಕದಿಂದ 60 ವರ್ಷದ ವೃದ್ಧೆ ಪಿ-1962, ಆನೆಕೊಂಡ ಕಂಟೈನ್‌ಮೆಂಟ್‌ನ 48 ವರ್ಷದ ಪುರುಷ ಪಿ-1251ರ ಸಂಪರ್ಕದಿಂದ 33 ವರ್ಷದ ಇಬ್ಬರು ಮಹಿಳೆಯರಾದ ಪಿ-1963 ಮತ್ತು 1964ಕ್ಕೆ ಸೋಂಕು ತಗುಲಿದ್ದರೆ, 70 ವರ್ಷದ ವೃದ್ಧೆ ಪಿ-1992ಕ್ಕೆ ಕಂಟೈನ್‌ಮೆಂಟ್ ಸಂಪರ್ಕದಿಂದ ಸೋಂಕು ತಗುಲಿದೆ. ಆನೆಕೊಂಡ ಕಂಟೈನ್‌ಮೆಂಟ್‌ನ ಸೋಂಕಿತನ ಸಂಪರ್ಕದಿಂದ ನಿನ್ನೆ ಮೂವರು, ಇಂದು ಇಬ್ಬರಿಗೆ ಸೋಂಕು ತಗುಲಿದೆ.
4 ಹೊಸ ಕೇಸ್ ವರದಿಯಾದರೂ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವುದು ಒಂದಿಷ್ಟುನೆಮ್ಮದಿ ತಂದಿದೆ. ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ ಪಿ-621, 624, 627, 632, 663, 667, 669, 670, 671, 695, 724, 725, 726, 728, 730, 731, 847 ಹಾಗೂ 850 ಆಸ್ಪತ್ರೆಯಿಂದ ಬಿಡುಗಡೆಯಾದವರು.
ಕೋವಿಡ್-19 ಆಸ್ಪತ್ರೆಯಿಂದ ಗುಣಮುಖರಾಗಿ ಭಾನುವಾರ ಬಿಡುಗಡೆಯಾದ ಪಿ-621, 624, 627, 632 ಈ ನಾಲ್ವರೂ ಬಾಷಾ ನಗರದವರಾಗಿದ್ದಾರೆ. ಶುಶ್ರೂಷಕಿ ಪಿ-533 ಸಂಪರ್ಕದಿಂದ ಸೋಂಕಿತರಾಗಿದ್ದರು. ಪಿ-663, 667, 670, 671, 724, 725, 726, 728, 730 ಹಾಗೂ 731 ಈ ಎಲ್ಲರೂ ಜಾಲಿ ನಗರ ವಾಸಿಗಳಾಗಿದ್ದಾರೆ. ಅದೇ ಏರಿಯಾದ ಮೃತ ಪಿ-556 ಸಂಪರ್ಕದಿಂದ ಸೋಂಕಿಗೀಡಾಗಿದ್ದರು.
ಜೂನ್ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ; ಚಿಕ್ಕಮಗಳೂರಿನಲ್ಲಿ 58 ಕೇಂದ್ರಗಳು
ಪಿ-695 ಐಎಲ್‌ಐ ಕೇಸಿಗೆ ಸಂಬಂಧಿಸಿದವರು. ಪಿ-847 ಅಜ್ಮೀರ್ ಪ್ರವಾಸದಿಂದ ಸೋಂಕು ಹೊಂದಿದ್ದು, ಈಗ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಪಿ-850 ಎಂಬ ಸೋಂಕಿತರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇವರಿಗೆ ಮೃತ ಮಹಿಳೆ ಪಿ-662 ಸಂಪರ್ಕದಿಂದ ಸೋಂಕು ತಗುಲಿತ್ತು. ಈವರೆಗೆ ಜಿಲ್ಲೆಯಲ್ಲಿ 125 ಪಾಸಿಟಿವ್ ಕೇಸ್ ವರದಿಯಾಗಿವೆ. ಇದರಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಒಟ್ಟು 46 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಆಕ್ಟಿವ್ ಕೇಸ್‌ಗಳ ಸಂಖ್ಯೆ 75ಕ್ಕೆ ಇಳಿಕೆಯಾಗಿದೆ. ಕಂಟೈನ್‌ಮೆಂಟ್ ಪ್ರದೇಶದಿಂದ ಹೊಸ ಕೇಸ್ ವರದಿಯಾದರೂ, ಗುಣಮುಖರ ಸಂಖ್ಯೆಯೂ ಹೆಚ್ಚುತ್ತಿರುವುದು ಗಮನಾರ್ಹ.
ಕಂಟೈನ್‌ಮೆಂಟ್ ಪ್ರದೇಶಗಳಲ್ಲೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಜಿಲ್ಲೆಯ ಪ್ರಥಮ, ದ್ವಿತೀಯ ಪಾಸಿಟಿವ್ ಪ್ರಕರಣ ವರದಿಯಾಗಿದ್ದ ಬಾಷಾನಗರ, ಜಾಲಿನಗರ, ಇಮಾಂ ನಗರದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚು. ಅದಕ್ಕೆ ಈಗ ಆನೆಕೊಂಡವೂ ಹೊಸದಾಗಿ ಸೇರ್ಪಡೆಯಾಗಿದೆ. ಸೋಂಕಿತರ ಪಟ್ಟಿಯಲ್ಲಿ ಜಾಲಿ ನಗರ, ಇಮಾಂ ನಗರ, ಬಾಷಾ ನಗರ ನಿವಾಸಿಗಳ ಸಂಖ್ಯೆಯೇ ತುಸು ಹೆಚ್ಚು. ಈ 3 ಕಂಟೈನ್‌ಮೆಂಟ್‌ನÜಲ್ಲೇ ನೂರಾರು ಕೇಸ್ ಪತ್ತೆಯಾಗಿವೆ.