ಸೈಕ್ಲೋನ್; ಕಾರ್ಯದರ್ಶಿ ಮತ್ತು ಡಿಸಿಗಳಿಗೆ ಸಿಎಂ ಕಟ್ಟಪ್ಪಣೆ

By Suvarna NewsFirst Published May 16, 2021, 10:08 PM IST
Highlights

* ತೌಕ್ಟೆ ಚಂಡಮಾರುತ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ
* ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ
* ಬೆಂಗಳೂರಿನಲ್ಲಿಯೂ ಇನ್ನೆರಡು ದಿನ ಮಳೆಯಾಗಲಿದೆ
* ಮುಖ್ಯ ಕಾರ್ಯದರ್ಶಿ ಮತ್ತು ಡಿಸಿಗಳ ಜತೆ ಸಿಎಂ ಚರ್ಚೆ

ಬೆಂಗಳೂರು(ಮೇ 16)   ಮೇ 16 ರಿಂದ 20 ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ  ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ಮಾಹಿತಿ  ನೀಡಿದ್ದು ಭಾನುವಾರ ರಾಜ್ಯದ ಬಹುತೇಕ  ಜಿಲ್ಲೆಗಳಲ್ಲಿ ಮಳೆಯಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ಅತಿ ಹೆಚ್ಚು ಮಳೆ(24 ಸೆ.ಮೀ) ದಾಖಲಾಗಿದೆ. ಕೋಟ, ಪುತ್ತೂರು, ಕುಂದಾಪುರ, ಉಡುಪಿ, ಭಟ್ಕಳದಲ್ಲಿ ಅತಿಹೆಚ್ಚು ಮಳೆಯಾಗಿದೆ. ತೌಕ್ಟೆ ಚಂಡಮಾರುತ ಪೂರ್ವ ಅರಬ್ಬಿ ಸಮುದ್ರದಲ್ಲಿದ್ದು ಮೇ 18 ರಂದು ಗುಜರಾತ್   ತೀರಕ್ಕೆ ಅಪ್ಪಳಿಸಲಿದೆ.

ತೌಕ್ಟೆ ಚಂಡಮಾರುತ ಎಲ್ಲಿಂದ ಬಂತು? ಎಲ್ಲಿಗೆ ತೆರಳುತ್ತಿದೆ?

ಈ ನಡುವೆ ಭಾನುವಾರ ಸಂಜೆ  ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಉಡುಪಿ‌, ಕಾರವಾರ ಮತ್ತು ಮಂಗಳೂರು ಡಿಸಿಗಳಿಗೆ ಕರೆ ಮಾಡಿ ಚಂಡಮಾರುತದಿಂದ ಆದ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಮಂಗಳೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಮೀನಿಗಾರರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು . ಮುಖ್ಯ ಕಾರ್ಯದರ್ಶಿ ಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿಕ್ಕಿಹಾಕಿಕೊಂಡಿರುವ ಮೀನುಗಾರರ ರಕ್ಷಣೆಗೆ ಕೇಂದ್ರದ ಜೊತೆ ನಿಕಟ ಸಂಪರ್ಕದಲ್ಲಿ ಇರುವಂತೆ ಸೂಚನೆ ನೀಡಿದರು . ಹೆಲಿಕಾಪ್ಟರ್ ಸೇರಿದಂತೆ ಇನ್ನಿತರ ಯಾವುದೇ ಅಗತ್ಯವಿದ್ದರು ಕೂಡಲೇ ವ್ಯವಸ್ಥೆ ಮಾಡಬೇಕು  ಎಂದು ಸೂಚನೆ ನೀಡಿದರು. 

 

 

We are closely monitoring the cyclone situation in coastal areas. I am in contact with District in-charge ministers and DCs of the affected districts to ensure rescue and relief operations. Officials have been instructed to take all possible precautions & safety measures.

— B.S. Yediyurappa (@BSYBJP)
click me!