ದೂರುದಾರರಿಗೆ ಸೈಟ್ ಕೊಡಲು ತಪ್ಪಿದ್ದಲ್ಲಿ ಹಣ ಮರಳಿಸುವಂತೆ ಮ್ಯಾಕ್ಸ್ ವರ್ತ ರಿಯಾಲಿಟಿ ಇಂಡಿಯಾ ಲಿಗೆ.; ಗ್ರಾಹಕರ ಆಯೋಗ ಆದೇಶಿಸಿತು
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ : ಧಾರವಾಡದ ಉದಯಗಿರಿಯ ನಿವಾಸಿಯಾದ ಪ್ರಕಾಶ ತಿಮ್ಮಾಪುರ ಎಂಬುವವರು ಬೆಂಗಳೂರಿನ ಮ್ಯಾಕ್ಸ್ ವರ್ತ ರಿಯಾಲಿಟಿ ಇಂಡಿಯಾ ಲಿ.ನವರು ಹುಬ್ಬಳ್ಳಿಯಲ್ಲಿ ಮ್ಯಾಕ್ಸ್ ಸೌಪರನಿಕಾ ಲೇಔಟನ್ನು ಕುಸುಗಲ್ ಗ್ರಾಮದಲ್ಲಿ ಅಭಿವೃದ್ಧಿಪಡಿಸುತ್ತಿದ್ದು ದೂರುದಾರರು ಸೈಟ್ ನಂ.15 ನ್ನು ರೂ.7,96,500 ಪೈಕಿ ರೂ.3,68,950 ಮುಂಗಡ ಕೊಟ್ಟು ಖರೀದಿ ಕರಾರು ಮಾಡಿಕೊಂಡಿದ್ದರು ನಂತರ 10 ವರ್ಷ ಕಳೆದರೂ ಎದುರುದಾರರು, ಡೆವಲಪರ್ ಸದರಿ ಲೇಔಟ ಅಭಿವೃದ್ಧಿ ಪಡಿಸದೇ ಮತ್ತು ದೂರು ದಾರರೊಂದಿಗೆ ಮಾಡಿಕೊಂಡ ಖರೀದಿ ಕರಾರಿನಂತೆ ನಡೆದುಕೊಳ್ಳದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಅಂತಾ ಹೇಳಿ ದೂರುದಾರ ಎದುರುದಾರ ಮ್ಯಾಕ್ಸ್ ವರ್ತ ರಿಯಾಲಿಟಿ ಇಂಡಿಯಾ ಲಿ. ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದಿ:03/06/2024 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
undefined
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರನಿಂದ ರೂ.03,68,950 ಮುಂಗಡ ಹಣ ಪಡೆದುಕೊಂಡು ಎದುರುದಾರ ಅವರಿಗೆ ಪ್ಲಾಟ ನಂ.15 ರ ಕುರಿತು ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರು ಸಂದಾಯ ಮಾಡಿದ ರೂ.3,68,950 ಮತ್ತು ಅದರ ಮೇಲೆ ಶೆ 12% ರಂತೆ ಬಡ್ಡಿ ಸಹಿತ ದಿನಾಂಕ:01/10/2014 ರಿಂದ 31/07/2024ರ ವರೆಗೆ ಬಡ್ಡಿ ಲೆಕ್ಕ ಹಾಕಿ ರೂ.4,34,160 ಬಡ್ಡಿ ಸೇರಿಸಿ ಒಟ್ಟು ರೂ.8,03,110 ಗಳನ್ನು ದೂರುದಾರರಿಗೆ ಸಂದಾಯ ಮಾಡುವಂತೆ ಆದೇಶಿಸಿದೆ. ಮುಂದುವರೆದು ಸದರಿ ಮೊತ್ತ ರೂ.8,03,110 ಕ್ಕೆ ಶೇ 10% ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ದಿ:01/08/2024 ರಿಂದ ಪೂರ್ತಿ ಹಣ ಸಂದಾಯ ಮಾಡುವಂತೆ ತನ್ನ ತೀರ್ಪಿನಲ್ಲಿ ಆಯೋಗ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಎದುರುದಾರ/ಮ್ಯಾಕ್ಸ್ ವರ್ತ ರಿಯಾಲಿಟಿ ಇಂಡಿಯಾ ಲಿ.ಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.