ದೇವರ ಗರ್ಭಗುಡಿಯಲ್ಲಿ ಕೊಲೆ ಆರೋಪಿ ದರ್ಶನ್ ಫೋಟೋಗೆ ಪೂಜೆ ಸಲ್ಲಿಕೆ; ಪೂಜಾರಿಯನ್ನೇ ಅಮಾನತು ಮಾಡಿದ ಸರ್ಕಾರ!

By Sathish Kumar KH  |  First Published Aug 6, 2024, 3:49 PM IST

ಕೊಲೆ ಆರೋಪಿ ನಟ ದರ್ಶನ್ ಫೋಟೋಗಳನ್ನು ದೇವಸ್ಥಾನದ ಗರ್ಭಗುಡಿಯಲ್ಲಿಟ್ಟು ಪೂಜೆ ಮಾಡಿದ ಅರ್ಚಕನನ್ನು ಮುಲಾಜಿಲ್ಲದೇ ಅಮಾನತು ಮಾಡಿದ ಸರ್ಕಾರ.


ಬಳ್ಳಾರಿ (ಆ.06): ನಟ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಮುದ್ದೆ ಮುರಿಯುತ್ತಿದ್ದಾನೆ. ಆದರೆ, ಬಳ್ಳಾರಿಯ ಪ್ರಸಿದ್ಧ ದೇವಾಲಯ ಕುರುಗೋಡು ದೊಡ್ಡ ಬಸವೇಶ್ವರ ದೇವಸ್ಥಾನದ ಗರ್ಭಗುಡಿ ದೊಡ್ಡಬಸವಣ್ಣ ದೇವರ ಮೂರ್ತಿಯ ಪಕ್ಕದಲ್ಲಿ ಕೊಲೆ ಆರೋಪಿ ದರ್ಶನ್ ಫೋಟೋಗಳನ್ನು ಇಟ್ಟು ಪೂಜೆ ಮಾಡಿ ಅರ್ಚಕ ವಿಕೃತಿ ಮೆರೆದಿದ್ದಾನೆ. ಈ ಕುರಿತ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಕೂಡಲೇ ದೇವಾಲಯದ ಅರ್ಚಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಹೌದು, ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಿದ್ರು ಅವರ ಅಭಿಮಾನಿಗಳಿಗೆ ಮಾತ್ರ ಆತನ ಮೇಲಿನ ಅಭಿಮಾನ ತೋರಿಸುವುದನ್ನು ಕಡಿಮೆ ಮಾಡಿಲ್ಲ. ಮಕ್ಕಳನ್ನು ಜೈಲಿನ ಕೈದಿಯಂತೆ ಫೊಟೋ ಶೂಟ್ ಮಾಡಿಸುವುದು, ಬೈಕ್‌ಗಳ ಮೇಲೆ ನಟ ದರ್ಶನ್ ಕೈದಿ ಸಂಖೆ ಸ್ಟಿಕ್ಕರ್ ಅಂಟಿಸುವುದು, ಟ್ಯಾಟೋ ಹಾಕಿಸಿಕೊಳ್ಳುವುದು ಸೇರಿ ಅನೇಕ ರೀತಿಯಲ್ಲಿ ಅಭಿಮಾನವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆದರೆ, ಒಬ್ಬ ಕೊಲೆ ಆರೋಪಿಯನ್ನು ಇಷ್ಟೊಂದು ಬೆಂಬಲಿಸಿ ಅಭಿಮಾನ ತೋರಿಸುವುದು ಅಭಿಮಾನವೋ ಅಥವಾ ಅಂಧಾಭಿಮಾನವೋ ಗೊತ್ತಿಲ್ಲ.

Tap to resize

Latest Videos

undefined

ಮಗಳನ್ನು ಮದುವೆ ಮಾಡಿ ಗಂಡನ ಜೊತೆಗೆ ಕಳಿಸಿದರೆ, ಮಾವ ನಿನ್ನ ಮಗಳ ಶವ ತಗೊಂಡೋಗು ಎಂದ ಅಳಿಮಯ್ಯ!

ಆದರೆ, ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಮುಜರಾಯಿ ದೇವಸ್ಥಾನಗಳಲ್ಲಿ ಒಂದಾಗಿರುವ ಕುರುಗೋಡಿನ ದೊಡ್ಡ ಬಸವೇಶ್ವರ ದೇವಾಲಯದಲ್ಲಿ ಬಸವಣ್ಣ ದೇವರ ಅಕ್ಕ ಪಕ್ಕದಲ್ಲೆಲ್ಲಾ ಕೊಲೆ ಆರೋಪಿ ನಟ ದರ್ಶನ್ ಫೊಟೋಗಳನ್ನು ಇಟ್ಟು ಪೂಜೆ ಸಲ್ಲಿಕೆ ಮಾಡಲಾಗಿದೆ. ಈ ಸಂಬಂಧಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇವರ ಗರ್ಭಗುಡಿಯಲ್ಲಿ ಕೊಲೆ ಆಓಪಿಯ ಫೋಟೋ ಇಟ್ಟು ಪೂಜೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಕುರುಗೋಡು ಪಟ್ಟಣದ ಐತಿಹಾಸಿಕ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿನ ಬೃಹತ್ ನಂದಿ ವಿಗ್ರಹದ ಮುಂದೆ ಅಮವಾಸ್ಯೆ ದಿನ ನಟ ದರ್ಶನ್ ಪೋಟೋಗಳನ್ನು  ಪೂಜೆ ಮಾಡಿರುವುದರ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್‌ನ ಡೆವಿಲ್ ಸಿನಿಮಾದ ಫೋಟೋ ಸೇರಿ ವಿವಿಧ ಸಿನಿಮಾಗಳ ಪೋಸ್ಟರ್ ಹೊಂದಿದ ಪೋಟೋಗಳನ್ನು ದೇವರ ಮುಂದೆ ಇರಿಸಿ ಪೂಜಾರಿಗಳು ಪೂಜೆ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರ ವಲದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರದ ಮುಜರಾಯಿ ದೇವಸ್ಥಾನದಲ್ಲಿ ಇಂತಹ ಕೃತ್ಯವನ್ನು ಎಸಗಿದ ದೇವಾಲಯದ ಅರ್ಚಕನನ್ನು ಗುರುತಿಸಿ ಆತನನ್ನು ದೇವರ ಪೂಜಾ ಕೈಂಕರ್ಯಗಳಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 

ಇನ್ನು ನಟ ದರ್ಶನ್‌ಗೆ ಒಳ್ಳೆಯದಾಗಲಿ, ಸಂಕಷ್ಟಗಳು ದೂರ ಆಗಲಿ ಎಂದು ಪೂಜೆ ಮಾಡಿಸಿದ್ದರೆ ಸಾರ್ವಜನಿಕರ ಆಕ್ಷೇಪವೇನೂ ಇರುತ್ತಿರಲಿಲ್ಲ. ಕಾರಣ ಈಗಾಗಲೇ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷಮಿ ದರ್ಶನ್ ಹಾಗೂ ಆತನ ಸಹೋದರ ದಿನಕರ್ ತೂಗುದೀಪ ಅವರು ಹಲವು ದೇಸ್ಥಾನಗಳಲ್ಲಿ ದರ್ಶನ್‌ ಹೆಸರಿನಲ್ಲಿ ಪೂಜೆ ಸಲ್ಲಿಸಿ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಅದನ್ನು ಬಿಟ್ಟು ದೇವಸ್ಥಾನದ ಗರ್ಭಗುಡಿಯಲ್ಲಿರುವ ದೇವರ ಮುಂದೆ ಕೊಲೆ ಆರೋಪಿ ಪೋಟೋ ಇಟ್ಟು ಪೂಜೆ ಮಾಡಿರುವುದು ತೋವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಯೋಧನ ಪತ್ನಿಗೆ ಸೈಟ್‌ ನಿರಾಕರಿಸಿದ್ದ ಮುಡಾ!

ಕುರುಗೋಡು ದೊಡ್ಡ ಬಸವೇಶ್ವರ ದೇವಾಲಯದಲ್ಲಿ ಕೊಲೆ ಆರೋಪಿ ದರ್ಶನ್ ಪೊಟೋ ಇಟ್ಟು ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿದ ದೇವಾಲಯದ ಆರ್ಚಕ ಮಲ್ಲಿ ಎಂಬುವವರನ್ನು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಈ ಸಂಬಂಧ ವಿಚಾರಣೆ ಮುಗಿಯೋವರೆಗೂ ದೇವಸ್ಥಾನಕ್ಕೆ ಅನುಮತಿ ಬಾರದಂತೆ ನಿಷೇಧವನ್ನೂ ಹೇರಲಾಗಿದೆ. ಒಟ್ಟಾರೆ, ನಟ ದರ್ಶನ್ ಅಭಿಮಾನಿಗಳು ಅಂಧಾಭಿಮಾನ ಪ್ರದರ್ಶನ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.

click me!