ಗಲಭೆಕೋರರ ನಾಲ್ಕು ತಲೆ ಉರುಳಿದ್ದರೆ 50 ವರ್ಷ ಹುಬ್ಬಳ್ಳಿ ಶಾಂತವಾಗಿರುತ್ತಿತ್ತು: ಸಿ.ಟಿ. ರವಿ

By Girish GoudarFirst Published May 1, 2022, 4:09 AM IST
Highlights

*   ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ
*  ಹೆಚ್ಚು ಅಂಕ ಪಡೆದವರು ಅಕ್ರಮ ನಡೆಸಿದ್ದರೆ ಗೊತ್ತಾಗುವುದು ಹೇಗೆ? 
*  ಮರು ಪರೀಕ್ಷೆ ಅನಿವಾರ್ಯ 

ಹುಬ್ಬಳ್ಳಿ(ಮೇ.01):  ಹಳೇ ಹುಬ್ಬಳ್ಳಿ ಗಲಭೆ(Hubballi Riots ) ಕುರಿತು ಬಹಳ ಜನರಲ್ಲಿ ಆಕ್ರೋಶವಿದೆ. ಗಲಭೆ, ಬೆಂಕಿ ಹಚ್ಚಿದವರ ನಾಲ್ಕು ತಲೆ ಉರುಳಿದ್ದರೆ ಮುಂದಿನ 50 ವರ್ಷಗಳ ಕಾಲ ಹುಬ್ಬಳ್ಳಿ ಶಾಂತವಾಗಿ ಇರುತ್ತಿತ್ತು ಎಂದು ಬಹಳ ಜನ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಹಾಗೆಲ್ಲ ಪ್ರತಿಕ್ರಿಯಿಸುವುದಿಲ್ಲ. ಗಲಭೆಕೋರರ ಕ್ರಿಯೆಗಳಿಗೆಲ್ಲ ಹಿಂದು(Hindu) ಸಮಾಜವು ಪ್ರತಿಕ್ರಿಯಿಸಿದ್ದರೆ ಏನೆಲ್ಲಾ ಆಗಿ ಬಿಡುತ್ತಿತ್ತು ಎಂದರಲ್ಲದೇ, ಸರ್ಕಾರ ಹಳೆ ಹುಬ್ಬಳ್ಳಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದ್ದರಿಂದ ಗಲಭೆ ವಿಕೋಪಕ್ಕೆ ಹೋಗಿಲ್ಲ, ಇಲ್ಲದ್ದರೆ ಇಡಿ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು ಎಂದು ಕಿಡಿಕಾರಿದರು.

'ಜಿನ್ನಾ ಮಾನಸಿಕತೆಯನ್ನು ನಾವು ಸಾರ್ವಕರ್ ಮಾನಸಿಕತೆಯಿಂದ ಎದುರಿಸಬೇಕು'

ಮತಕ್ಕಾಗಿ ಮತಾಂಧತೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಾಂಗ್ರೆಸ್‌(Congress) ಮಾಡುತ್ತಿದೆ. ಮಾಜಿ ಸಚಿವ ಜಮೀರ್‌ ಅಹ್ಮದ್‌ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆಯಾದಾಗ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆಯಾದಾಗ ಬೆಂಬಲ ನೀಡಿದ್ದರು. ಅಮಾಯಕರು ಎಂದು ಸರ್ಟಿಫಿಕೇಟ್‌ ಕೊಟ್ಟರು. ತಮ್ಮದೆ ಶಾಸಕರ ಮನೆ ಮೇಲೆ ಬೆಂಕಿ ಹಾಕಿದಾಗಲೂ ಅದು ಅಪಮಾನ ಎಂದು ಭಾವಿಸಲಿಲ್ಲ. ಗಲಭೆ ಮಾಡಿದವರು ಎಲ್ಲರೂ ತಮ್ಮ ಸಹೋದರರು ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು. ಗಲಭೆ ಸೃಷ್ಟಿಸುವವರು ಎಲ್ಲರೂ ಕಾಂಗ್ರೆಸ್‌ ಸಹೋದರರು. ಕಾಂಗ್ರೆಸ್ಸಿನವರಿಗೆ ವೋಟ್‌ ಬ್ಯಾಂಕ್‌(Vote Bank) ಮಾತ್ರ ಬೇಕಾಗಿದೆ. ಹೀಗಾಗಿ ತುಕಡೆ ಗ್ಯಾಂಗ್‌ಗೂ ಸಪೋರ್ಟ್‌ ಮಾಡುತ್ತಾರೆ. ಹಿಜಾಬ್‌(HIjab) ಗಲಾಟೆಗೆ ಕಾನೂನು ನೆರವು ನೀಡಿದವರು ಕೂಡ ಕಾಂಗ್ರೆಸ್ಸಿನವರು ಎಂದರು.

ಅಮಾಯಕರು ಯಾರು?:

ಪಿಎಸ್‌ಐ ಹುದ್ದೆಗೆ ನಡೆದ ಪರೀಕ್ಷೆ ಅಕ್ರಮವಾಗಿದೆ ಎಂದು ತನಿಖಾ ವರದಿ ಬಂದು ಸಾಕಷ್ಟು ಬಂಧನವಾಗಿದೆ. ಇಷ್ಟಾದರೂ ಹಿಂದಿನಂತೆ ನೇಮಕಾತಿ ಮಾಡಿಕೊಂಡರೆ ತಪ್ಪಿತಸ್ಥರು ಯಾರಾಗುತ್ತಾರೆ? ಈಗ ಅಮಾಯಕರು ಯಾರು? ಎಂದು ಹೇಗೆ ಗೊತ್ತಾಗುತ್ತದೆ. ಹೆಚ್ಚು ಅಂಕ ಪಡೆದವರು ಅಕ್ರಮ ನಡೆಸಿದ್ದರೆ ಗೊತ್ತಾಗುವುದು ಹೇಗೆ? ಇದರಿಂದ ಕಷ್ಟಪಟ್ಟು ಓದಿದವರಿಗೆ ಅನ್ಯಾಯ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು. ಸರ್ಕಾರ ಮರುಪರೀಕ್ಷೆ ಮಾಡಿದರೂ ಟೀಕೆ ಮಾಡುತ್ತಿದ್ದಾರೆ, ಮಾಡದಿದ್ದರೂ ಟೀಕೆ ಮಾಡುತ್ತಿದ್ದರು. ಮರು ಪರೀಕ್ಷೆ ಅನಿವಾರ್ಯ ಎಂದು ಸಿ.ಟಿ.ರವಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
 

click me!