ತಾವು ಹಾಕಿರುವ ಹಳದಿ ಕನ್ನಡಕ ತೆಗೆದರೆ ಇತಿಹಾಸದ ಆಳವಾದ ಅರಿವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎದಿರೇಟು ನೀಡಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಆ.15): ತಾವು ಹಾಕಿರುವ ಹಳದಿ ಕನ್ನಡಕ ತೆಗೆದರೆ ಇತಿಹಾಸದ ಆಳವಾದ ಅರಿವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎದಿರೇಟು ನೀಡಿದ್ದಾರೆ. ಬಿಜೆಪಿಗೆ ನೆಹರೂ ಹಾಗೂ ದೇಶದ ಇತಿಹಾಸ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ ರವಿ, ಯಾರೋ ಒಬ್ಬರಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂದು ಭಾವಿಸುವವರು ಅತ್ಯಂತ ಮೂರ್ಖರಾಗುತ್ತಾರೆ. ಆ ರೀತಿ ಗಿಳಿ ಪಾಠವನ್ನು ಈ ವರೆಗೆ ಒಪ್ಪಿಸುತ್ತಾ ಬಂದಿದ್ದೇವೆ. ಸ್ವಾತಂತ್ರ್ಯ ಅಹಿಂಸೆಯಿಂದ ಬಂತು ಎನ್ನುವುದು ಅರ್ಧ ಸತ್ಯ. ಅಹಿಂಸಾ ಹೋರಾಟ ದೊಡ್ಡ ಪ್ರಮಾಣದ ಪಾತ್ರ ವಹಿಸಿದೆ ಆದರೆ ಅದರಿಂದಲೇ ಬಂತು ಎಂದರೆ ಕ್ರಾಂತಿಕಾರಿಗಳ ಬಲಿದಾನಕ್ಕೆ ನಾವು ಕೊಡುವ ಬೆಲೆ ಏನು ಎಂದು ಪ್ರಶ್ನಿಸಿದರು. ಬ್ರಿಟೀಷರ ಎದೆ ನಡುಗಿದ್ದು ಅಹಿಂಸಾ ಹೋರಾಟಕ್ಕಲ್ಲ. ಅವರು ಹೆದರುತ್ತಿದ್ದುದು ಕ್ರಾಂತಿಕಾರಿಗಳಿಗೆ, ಅವರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಸುಭಾಶ್ಚಂದ್ರಬೋಸರ ಆಜಾದ್ ಹಿಂದ್ ಪೌಜ್ ಸೇನೆ ಎಂದರು. ಆ ನಿಟ್ಟಿನಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಮನೋಭಾವನೆಯನ್ನು ಅವರು ಬಿಡಬೇಕು ಎಂದರು.
ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದು ತಂತ್ರಗಾರಿಕೆಯ ಒಂದು ಭಾಗವಾಗಿತ್ತು. ಅವರು ಹೊರಗೆ ಬಂದು ಸೈನ್ಯಕ್ಕೆ ಸೇರಬೇಕೆಂದು ಭಾರತೀಯರಿಗೆ ಪ್ರೇರಣೆ ಕೊಟ್ಟಿದ್ದರು. ಅದರ ಪರಿಣಾಮ ಸ್ವಾತಂತ್ರ್ಯಾ ನಂತರ ಪಾಕಿಸ್ಥಾನದ ಆಕ್ರಮಣ ಎದುರಿಸಲು ಸಾಧ್ಯವಾಯಿತು ಈ ಸತ್ಯವನ್ನೂ ನೆನಪಿಟ್ಟುಕೊಳ್ಳಬೇಕು ಎಂದರು.ಇಂಗ್ಲೆಂಡ್ನಲ್ಲಿರುವ ಇಂಡಿಯನ್ ಲೈಬ್ರರಿಯಲ್ಲಿ ಸಾವರ್ಕರ್ ಬಗ್ಗೆ ಬ್ರಿಟಿಷರು ದಾಖಲಿಸಿರುವ ಅಂಶಗಳಿವೆ ಅದನ್ನೂ ಸಿದ್ದರಾಮಯ್ಯ ಅಧ್ಯಯನ ಮಾಡಲಿ, ಎರಡು ಕರಿನೀರಿನ ಶಿಕ್ಷೆಗೆ ಒಳಗಾದ ಏಕೈಕ ವ್ಯಕ್ತಿ ವೀರ ಸಾವರ್ಕರ್, ಅದನ್ನು ಅನುಭವಿಸಿದವರಿಗೆ ಅದರ ಕಷ್ಟ ಗೊತ್ತು ಎಂದರು.
ಎಓಹ್ಯೂಂ ಆತ ಇವರ ತಾತನೇ? ಮುತ್ತಾತನೇ?
ಕ್ರಾಂತಿಕಾರಿಗಳು, ಅಹಿಂಸಾವಾದಿಗಳು ಅವರವರ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಯಾರೋ ಒಬ್ಬರು ಸ್ವಾತಂತ್ರ್ಯ ಗಳಿಸಿಕೊಟ್ಟರು ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿಯಾಗುತ್ತದೆ. ಹೋರಾಟಗಾರಿಗೆ ಅಪಮಾನ ಮಾಡಿದಂತಾಗುತ್ತದೆ. ಬಿಜೆಪಿಯ ಒಂದು ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎನ್ನುತ್ತಾರೆ. 1951 ರಲ್ಲಿ ಇಂದಿನ ಕಾಂಗ್ರೆಸ್‌ನ ಯಾರೊಬ್ಬರ ಮನೆಯವರೂ ಬಲಿದಾನ ಮಾಡಿಲ್ಲ. ಅಂದು ಕಾಂಗ್ರೆಸ್ ಒಂದು ವೇದಿಕೆಯಾಗಿತ್ತು. ಅದನ್ನು ಹುಟ್ಟುಹಾಕಿದ್ದು ಎಓಹ್ಯೂಂ ಆತ ಇವರ ತಾತನೇ? ಮುತ್ತಾತನೇ? ಅಂದಿನ ಕಾಂಗ್ರೆಸ್‌ನ ವಾರಸುದಾರಿಕೆಯನ್ನು ಇಂದಿನವರು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದರು.
52 ವರ್ಷ ಆರೆಸ್ಸೆಸ್ ರಾಷ್ಟ್ರಧ್ವಜ ಹಾರಿಸದಿರಲು ಏನು ಕಾರಣ?: ಸಿದ್ದರಾಮಯ್ಯ
ಸಚಿವರಿಗೆ ಕಿವಿಮಾತು: ರಾಜ್ಯದಲ್ಲಿ ಇಬ್ಬರ ಸಚಿವರ ನಡೆಯುತ್ತಿರುವ ಮಾತಿನ ಸಮರಕ್ಕೆ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದು ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಸಚಿವರಾದ ಎಸ್ ಟಿ ಸೋಮಶೇಖರ್ , ಮಾಧುಸ್ವಾಮಿಗೆ ಹೇಳಿಕೆಗೆ ಎಲ್ಲರೂ ಸಚಿವರೇ, ಸರ್ಕಾರ, ಪಕ್ಷದ ಇಮೇಜ್ ಹೆಚ್ಚಿಸುವ ಜವಾಬ್ದಾರಿ ಸಚಿವರ ಮೇಲೆ ಇದ್ದು ರಾಜ್ಯದ ಜನತೆಗೆ ಸಚಿವರ ಬದ್ಧತೆ ಇರಬೇಕೆಂದು ಎಂದರು. ಹಿರಿಯ ಸಚಿವರಿದ್ದಾರೆ, ಸಚಿವರು ಬಾಲಿಶವಾಗಿ ಮಾತನಾಡಿ ಅವರ ಬಗ್ಗೆಯೇ ಸಮಾಜದಲ್ಲಿ ತಪ್ಪು ಭಾವನ ಬರಬಾರದು ಎಂದು ಹೇಳಿ ಸಚಿವರ ಮೇಲೆ ಹೆಚ್ಚಿನ ಜವಾಬ್ದಾರಿವಿದ್ದು ಇದನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಮಾತು , ಕಾರ್ಯದಲ್ಲಿ ಇರಬೇಕೆಂದು ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ರಾಷ್ಟ್ರ ವಿರೋಧಿ: ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಅಲ್ಲದೆ ಸಚಿವರಿಗೆ ನಾವು ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇವೆ, ಬದ್ದತೆ ಇದ್ದು ನಾವೇ ಉತ್ತರದಾಯಿಗಳು ಎನ್ನುವುದು ಮನಸ್ಸಿನಲ್ಲಿರಬೇಕು ಜೊತೆಗೆ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಕಳಿಸಿದ್ದಾರೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾತು ಮತ್ತು ಕೃತಿಯಲ್ಲಿ ಅದು ವ್ಯಕ್ತವಾಗಬೇಕೆಂದರು.