ದಾವಣಗೆರೆಯ ಬಾಪೂಜಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಗೈದ ಉಸ್ತುವಾರಿ ಸಚಿವ ಬೈರತಿ ಬಸವರಾಜ್

By Gowthami K  |  First Published Aug 15, 2022, 5:51 PM IST

 ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ 75 ನೇ ಅಮೃತಮಹೋತ್ಸವದ ಧ್ವಜಾರೋಹಣ ಮಾಡಿ ಧ್ವಜ ವಂದನೆ ಸ್ವೀಕರಿಸಿದರು. ಬಾಪೂಜಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೈರತಿ ಬಸವರಾಜ್ ಸುದೀರ್ಘ ಭಾಷಣ ಮಾಡಿದರು.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಆ.15) ; ದಾವಣಗೆರೆ ಜಿಲ್ಲೆಯ ಬಾಪೂಜಿ ಕ್ರೀಡಾಂಗಣದಲ್ಲಿ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.  ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ 75 ನೇ ಅಮೃತಮಹೋತ್ಸವದ ಧ್ವಜಾರೋಹಣ ಮಾಡಿ ಧ್ವಜ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹ ರಕ್ಷಕದಳ, ಎನ್ ಸಿಸಿ , ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಪಥಸಂಚಲನ ಆಕರ್ಷಕವಾಗಿತ್ತು. ಮಿಲಿಟರಿ ಯೋಧರಂತೆ ಆಕರ್ಷಕ ಕವಾಯತು ಮಾಡಿದ ಪೊಲೀಸ್ , ಶಾಲಾ ಮಕ್ಕಳು  ಪ್ರೇಕ್ಷಕರು ನೆರೆದಿದ್ದ ಗಣ್ಯರನ್ನು ರಂಜಿಸಿದರು. ಪಿತೃ ವಿಯೋಗದ ನಡುವೆಯು  ಬೆಂಗಳೂರಿನಿಂದ ದಾವಣಗೆರೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಬೈರತಿ ಬಸವರಾಜ್ ನನಗೆ ನನ್ನ ಕುಟುಂಬಕ್ಕಿಂತ ದೇಶ  ದೇಶಪ್ರೇಮ ಮುಖ್ಯ ಎಂದರು.  ಬಹುಜನರ ಒಳಿತಿಗಾಗಿ, ಬಹುಜನರ ಕಲ್ಯಾಣಕ್ಕಾಗಿ, ಮಹಾಮನೆ ಮಂತ್ರವನ್ನು ಸಾರುತ್ತಾ ಭವ್ಯ ಭಾರತ ಸಂಕಲ್ಪ ಮಾಡುವ ಜತೆ ಭಾರತಕ್ಕೊಂದು ಹೊಸ ಭಾಷ್ಯ ಬರೆಯಲು ಮುಂದಾಗೋಣ ಎಂದು ನಗರಾಭಿವೃದ್ಧಿ ಸಚಿವರು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಕರೆ ನೀಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಟ ಮಾಡಿದ ಮಹನೀಯರ ತ್ಯಾಗ, ಹೋರಾಟ, ಬಲಿದಾನಗಳನ್ನು ನೆನೆಯುತ್ತಾ, ಅವರು ದಾರಿಯಲ್ಲಿ ಸಾಗಬೇಕಿದೆ. ದಾವಣಗೆರೆಯಲ್ಲೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಹನೀಯರು ಇದ್ದು ಅವರನ್ನು ನೆನಪು ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

Tap to resize

Latest Videos

ರೈತರ ಅದಾಯ ಹೆಚ್ಚಳಕ್ಕೆ ರೈತ ಶಕ್ತಿ ಯೋಜನೆ, ಸ್ವ ಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರಾಟ ಮೇಳ ಅಯೋಜಿಸಲು ಆಸ್ಮಿತೆ ಕಾರ್ಯಕ್ರಮ, ಯೋಜನಾ ಬದ್ದ ಪರಿಸರ ಸ್ನೇಹಿ ನವನಗರ ಅಭಿವೃದ್ಧಿಗಾಗಿ ನಗರ ಸ್ನೇಹಿ ನವ ನಗರ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಎಲ್ಲರಿಗೂ ಆರೋಗ್ಯ, ಎಲ್ಲೆಡೆ ಆರೋಗ್ಯಕ್ಕಾಗಿ ನಮ್ಮ ಕ್ಲೀನಿಕ್ ಯೋಜನೆ, ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸುವುದಕ್ಕೆ ಮುಖ್ಯ ಮಂತ್ರಿ ಆರೋಗ್ಯ ವಾಹಿನಿ ಯೋಜನೆ, ಹೆಣ್ಣು ಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಲು, ಮಕ್ಕಳಲ್ಲಿ ಅಪೌಷ್ಟಿಕತೆ ತಪ್ಪಿಸಲು ಸ್ಫೂರ್ತಿ ಯೋಜನೆ, ನಗರಗಳ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆ, ಗೋವುಗಳನ್ನು ಸಾರ್ವಜನಿಕರ ಮತ್ತು ಖಾಸಗಿ ಸಂಸ್ಥೆಗಳು ದತ್ತು ಪಡೆಯುವ ಪುಣ್ಯಕೋಟಿ ದತ್ತು ಯೋಜನೆ ಜಾರಿ ಮಾಡಲಾಗಿದೆ. ಅಲ್ಲದೇ ರೈತರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹ ನೀಡಲು ರೈತ ವಿದ್ಯಾನಿಧಿ ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 125 ಕೋಟಿಗಳ ಕಾಮಗಾರಿ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ 807 ಕೋಟಿ ಬಿಡುಗಡೆ ಅಗಿದೆ‌. ದಾವಣಗೆರೆ ನಗರಕ್ಕೆ ಎಡಿಬಿ ಅನುದಾನದಲ್ಲಿ  ನೀರಿನ ಮೂಲವನ್ನು ಶಾಶ್ವತವಾಗಿ ಬಲ ಪಡಿಸಲು ತುಂಗಭದ್ರಾ ನದಿಗೆ ಅಡ್ಡಲಾಗಿ 91.80ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ‌ ಇದಲ್ಲದೇ ಹಲವಾರು ಕಾಮಗಾರಿಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯು ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

 ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಧ್ವಜಾರೋಹಣ ಮಾಡಿರುವುದು ನನಗೆ ಹೆಮ್ಮೆ ಎನಿಸಿದೆ; ಬೈರತಿ
 ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಧ್ವಜಾರೋಹಣ ಮಾಡಿರುವುದು ನನಗೆ ಹಮ್ಮೆ ಎನ್ನಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು. ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ನಮ್ಮ ತಂದೆ ನಿಧನರಾದರು. ಅ ಸಂದರ್ಭದಲ್ಲಿ ನಾನು ದಾವಣಗೆರೆಗೆ ಹೋಗುವುದಕ್ಕೆ ಆಗುತ್ತದೋ ಇಲ್ಲವೋ ಎನ್ನುವ ಅನುಮಾನ ಕಾಡುತ್ತಿತ್ತು. ಆದರೂ ನಮ್ಮ ಮನಸ್ಸನ್ನು ಬದಲಿಸಿ ತಂದೆಯ ಅಂತ್ಯಕಾರ್ಯ ಮುಗಿಸಿ, ರಾತ್ರಿ 8ಕ್ಕೆ ಬೆಂಗಳೂರನ್ನು ಬಿಟ್ಟು ದಾವಣಗೆರೆಗೆ ಆಗಮಿಸಿದ್ದೇನೆ ಎಂದರು.

ದಾವಣಗೆರೆಗೂ ನನಗೂ ಅವಿನಾಭಾವ ಸಂಬಂಧ, ಅದನ್ನು ಎಂದಿಗೂ ಮರೆಯಲಾಗದು. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಅನುವು ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು. ದಾವಣಗೆರೆ ಜಿಲ್ಲೆ ಸಮಗ್ರ ಅಭಿವೃದ್ದಿ ಆಗಬೇಕೆನ್ನುವುದು ನನ್ನ ಸಂಕಲ್ಪ, ಅದರಂತೆ ಇನ್ನು ಐದಾರು ತಿಂಗಳಲ್ಲಿ ಏನೇನು ಸಾಧ್ಯವು ಅದನ್ನೆಲ್ಲಾ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯ ಜನಪ್ರತಿನಿಧಿ, ಉಸ್ತುವಾರಿ ಸಚಿವನಾಗಿ, ಜಿಲ್ಲೆಯ ಸೇವಕನಾಗಿ ಖಂಡಿತ ಮಾಡುತ್ತೇನೆ ಎಂದರು. ದಾವಣಗೆರೆ ಜಿಲ್ಲೆಯ ಜನತೆ ಈವರೆಗೆ ನನಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ನನಗೆ ಸಹಕಾರ ನೀಡಿದ್ಧಾರೆ.India@75: ಕೋಲಾರದಲ್ಲಿ ಲಿಮ್ಕಾ ದಾಖಲೆ ಸೇರಿದ ರಾಷ್ಟ್ರಧ್ವಜ

ರಾಜ್ಯ ಅಭಿವೃದ್ದಿಯತ್ತ ಸಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ. ಜೊತೆಗೆ ಜನರ ವಿಶ್ವಾಸ ಹೊಂದುವ ಕೆಲಸ ಮಾಡುತ್ತೇವೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಮಳೆ ಹಾನಿಯಿಂದ ಒಳಗಾದ ಸಂತ್ರಸ್ಥರಿಗೆ ದಾಖಲಾತಿಗಳ ಆಧಾರದ ಮೇಲೆ ಪರಿಹಾರ ನೀಡಲಾಗುತ್ತಿದೆ. ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಹೇಳಿದರು. ಕೈಗಾರಿಕಾ ಕಾರಿಡಾರ್ ಮಾಡುವ ವಿಷಯ ಕುರಿತಂತೆ ಮೆಳ್ಳೇಕಟ್ಟೆ ಗ್ರಾಮದ ಬಳಿ ನಿರ್ಧರಿಸಲಾಗಿತ್ತು. ಯುವಕರಿಗೆ ಉದ್ಯೋಗ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ, ಅಲ್ಲದೇ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಅದರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದೇಶಭಕ್ತಿಯನ್ನು ಹೆಚ್ಚಿಸಲು 'ಸ್ವಾತಂತ್ರ್ಯ ದಿನ'ದಂದು ಭೇಟಿ ನೀಡಲೇಬೇಕಾದ ಸ್ಥಳಗಳಿವು

ದೇಶಪ್ರೇಮದ ಕಿಚ್ಚು ಹತ್ತಿಸಿದ ಸಾಂಸ್ಕೃತಿಕ ನೃತ್ಯಗಳು 
ದಾವಣಗೆರೆ ಸಿದ್ಧಗಂಗಾ ಶಾಲೆಯ ಮಕ್ಕಳು, ನಿಂಚನ ಪಬ್ಲಿಕ್ ಸ್ಕೂಲ್,  ಪುಷ್ಪಮಹಾಲಿಂಗಪ್ಪ ಸ್ಕೂಲ್ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯಗಳು ಸ್ವಾತಂತ್ರ್ಯ ಹೋರಾಟ, ಬಲಿದಾನ, ತ್ಯಾಗ ದೇಶಪ್ರೇಮ, ಸೈನಿಕರ ಸಾಹಸಗಾಥೆ  ಹೀಗೆ ಹಲವು  ಕಥಾನಕಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದರು. ಇದೇ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ಡಾಗ್ ಸ್ಕ್ವಾಡ್ ನಿಂದ ಆಕರ್ಷಕ ಶ್ವಾನ ಪ್ರದರ್ಶನ ನಡೆಯಿತು.

click me!