ಲಾಕ್‌ಡೌನ್‌ನಿಂದಾಗಿ ಸದ್ಯದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳು ಪಾಠ-ಪ್ರವಚನದಿಂದ ಹಿಂದೆ ಬೀಳದಂತೆ ನೋಡಿಕೊಳ್ಳಲು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಪ್ರೌಢಶಾಲೆ ಮುಖ್ಯ ಶಿಕ್ಷಕರೊಬ್ಬರು ಹೊಸ ಐಡಿಯಾ ಮಾಡಿದ್ದಾರೆ. ವಾಟ್ಸಾಪ್ ಮೂಲಕ ಮಕ್ಕಳ ಓದಿನ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಿದ್ದಾರೆ.
ಸಿರಿಗೆರೆ(ಏ.09): ಲಾಕ್‌ಡೌನ್‌ನಿಂದಾಗಿ ಸದ್ಯದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳು ಪಾಠ-ಪ್ರವಚನದಿಂದ ಹಿಂದೆ ಬೀಳದಂತೆ ನೋಡಿಕೊಳ್ಳಲು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಪ್ರೌಢಶಾಲೆ ಮುಖ್ಯ ಶಿಕ್ಷಕರೊಬ್ಬರು ಹೊಸ ಐಡಿಯಾ ಮಾಡಿದ್ದಾರೆ. ವಾಟ್ಸಾಪ್ ಮೂಲಕ ಮಕ್ಕಳ ಓದಿನ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಿದ್ದಾರೆ.
ಹೌದು, ಕಡ್ಲೇಗುದ್ದು ಪ್ರೌಢಶಾಲೆ ಮುಖ್ಯ ಶಿಕ್ಷ ಮಹೇಶ್ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಗ್ರೂಪ್ ಮೂಲಕ ನಿತ್ಯ ಪಾಠ, ಪ್ರಶ್ನೆಗಳನ್ನು ಕೇಳುವ ಹಾಗೂ ಹೋಂ ವರ್ಕ್ ನೀಡುತ್ತಿದ್ದಾರೆ. ಕುಗ್ರಾಮವೊಂದರಲ್ಲಿರುವ ಈ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ 37 ವಿದ್ಯಾರ್ಥಿಗಳಿದ್ದಾರೆ.
ಕೊರೋನಾ ಕೂಡ ಅಸ್ತ್ರವಾಯಿತೆ? ತಬ್ಲಿಘೀ ಕುರಿತು ಸಂಸದ ಕಿಡಿ
ಅವರಿಗೆ ನಿತ್ಯವೂ ನಿಗದಿತ ಸಮುಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಪಠ್ಯಗಳ ಆಡಿಯೋ, ವಿಡಿಯೋ ಪಾಠಗಳನ್ನು ರವಾನಿಸಲಾಗುತ್ತದೆ. ಮಕ್ಕಳು ಈ ಪಠ್ಯಗಳನ್ನು ಬೆಳಗ್ಗೆ 11ರಿಂದ 12.30ರವರೆಗೆ ಕೇಳಿಸಿಕೊಳ್ಳಬೇಕು. ಸಂಜೆ 6ರಿಂದ 7.30ರವರೆಗೆ ಬೆಳಗ್ಗಿನ ಪಾಠದ ಬಗ್ಗೆ ವಿದ್ಯಾರ್ಥಿಗಳ ಅನುಮಾನ ಬಗೆಹರಿಸುತ್ತಾರೆ.
ಜೊತೆಗೆ ಕಡ್ಡಾಯವಾಗಿ ಸರತಿಯಂತೆ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರಿಸುವುದು ಕಡ್ಡಾಯ. ಒಟ್ಟು 30 ಪೋಷಕರ ಬಳಿ ವಾಟ್ಸಾಪ್ ಸೌಲಭ್ಯ ಇರೋ ಫೋನುಗಳಿವೆ. 7 ಮಕ್ಕಳಿಗೆ ಈ ಸೌಲಭ್ಯ ಇಲ್ಲ. ಅಂತಹವರನ್ನು ಗುರುತಿಸಿ ಆ ಮಕ್ಕಳು ಬೇರೆಯರ ಬಳಿ ಮೊಬೈಲ್‌ನಲ್ಲಿ ಪಾಠ ಕೇಳಬೇಕೆಂದು ನಿಗದಿಪಡಿಸಲಾಗಿದೆ.