Fishery ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಬಿದ್ದ ಮೊಸಳೆ ಮರಿ, ಬೆಚ್ಚಿಬಿದ್ದ ಮೀನುಗಾರರು

By Suvarna NewsFirst Published Jan 9, 2022, 10:38 PM IST
Highlights

ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಸಿಕ್ಕಿ ಬಿದ್ದ ಮೊಸಳೆ ಮರಿ  
ಇದನ್ನು ಕಂಡು  ಬೆಚ್ಚಿ ಬಿದ್ದ ಸ್ಥಳೀಯರು
 ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದಲ್ಲಿ ನಡೆದ ಘಟನೆ

ಶಿವಮೊಗ್ಗ, (ಜ.09) : ತುಂಗಾ ನದಿಯಲ್ಲಿ(Tunga River) ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯ ಗಾಳಕ್ಕೆ ಮೀನಿನ ಬದಲು ಮೊಸಳೆ ಮರಿ ಬಿದ್ದಿರುವ ಘಟನೆ ಶಿವಮೊಗ್ಗ (Shivamogga) ಸಮೀಪದ ಪಿಳ್ಳಂಗೆರೆ ಸಮೀಪ ನಡೆದಿದೆ. ಇದನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಪಿಳ್ಳಂಗೆರೆಯ ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನದ ಹಿಂಭಾಗದ ತುಂಗಾ ನದಿಯಲ್ಲಿ ರಶೀದ್ ಅವರು ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಮೀನು ಹಿಡಿಯಲು ಗಾಳ ಹಾಕಿದ್ದ. ಆದ್ರೆ, ಮೀನಿನ (Fish) ಬದಲು ಮೊಸಳೆ(crocodile) ಮರಿ ಸಿಕ್ಕಿದೆ.

Rare Fish: ಮನುಷ್ಯನ ಮುಖ ಹೋಲುವ ಮೀನು: ಹಲ್ಲಿರುವ ಫಿಶ್‌ ಎಂದಾದ್ರೂ ನೋಡಿದ್ದೀರಾ?

ದೇವಸ್ಥಾನದ ಹಿಂಭಾಗದಲ್ಲಿ ಇರುವ ನದಿಗೆ ನೀರು ಕುಡಿಯಲು ಜಾನುವಾರುಗಳು ಬರುತ್ತವೆ. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಗ್ರಾಮಸ್ಥರು ಕೈ, ಕಾಲು ತೊಳೆಯಲು ನದಿಗೆ ಇಳಿಯುತ್ತಾರೆ. ಹೀಗಾಗಿ ಈ ಭಾಗದಲ್ಲಿ ಮೊಸಳೆ ಮರಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಮೊಸಳೆ ಮರಿ ಪತ್ತೆಯಾಗಿರುವುದರಿಂದ ಈ ಭಾಗದಲ್ಲಿ ದೊಡ್ಡ ಮೊಸಳೆಯು ಇರಬಹುದು ಎಂಬ ಅನುಮಾನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಧರ್ಮಸ್ಥಳಕ್ಕೆ ಹೊರಟವರು ಮಸಣ ಸೇರಿದ್ರು
ಮೈಸೂರಿನಿಂದ ಧರ್ಮಸ್ಥಳಕ್ಕೆ ಒಂದೇ ಬೈಕ್ ನಲ್ಲಿ ಮಗ ಹಾಗೂ ಸ್ನೇಹಿತನೊಂದಿಗೆ ಹೊರಟಿದ್ದವರಿಗೆ ಹಿಂಬದಿಯಿಂದ ಜವರಾಯನಂತೆ ಬಂದು ಡಿಕ್ಕಿ ಹೊಡೆದ ಲಾರಿಯ ರಭಸಕ್ಕೆ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಮೀಪದ ಅರ್ಜುನಹಳ್ಳಿ ಗೇಟ್ ನಲ್ಲಿ ನಡೆದಿದೆ.

ಅಪಘಾತದಲ್ಲಿ ಮೈಸೂರಿನ  ಸುರೇಶ್ (34) , ಇಲವಾಲ ಹೋಬಳಿಯ ರವಿಶಂಕರ್ (35)  ಸ್ಥಳದಲ್ಲಿ ಮೃತಪಟ್ಟರೇ ಪವಾಡ ರೀತಿಯಲ್ಲಿ ಪಾರಾಗಿರುವ ಮೃತ ಸುರೇಶ್ ಪುತ್ರ ಮನ್ವಿತ್ (8) ಎಂಬ ಬಾಲಕ.

ಮೈಸೂರಿನಿಂದ ಮೂವರು ಒಂದೇ ಬೈಕ್ ನಲ್ಲಿ ರವಿಶಂಕರ್ ಜೊತೆ ಸುರೇಶ್ ತನ್ನ ಮಗ ಮನ್ವಿತ್ ನೊಂದಿಗೆ ಧರ್ಮಸ್ಥಳಕ್ಕೆ ಪ್ರಯಾಣ ಬೆಳಸಿದ್ದಾರೆ. ಅರ್ಜುನಹಳ್ಳಿ ಗೇಟ್ ಬಳಿ ಹಾಸನ- ಮೈಸೂರು ಹೆದ್ದಾರಿಯಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದ ಬೈಕ್ ಗೆ ಒವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದ್ದಾನೆ, 

ಕೂಡಲೇ ಬೈಕ್ ಸವಾರು ಇಬ್ಬರು ಲಾರಿಗೆ ಕೆಳಗೆ ಬಿದ್ದದ್ದಾರೆ, ಇಬ್ಬರಿಗೂ ಸಹ ತಲೆಗೆ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಬೈಕ್ ಹಾರಿ ದೂರ ಹೋಗಿದ್ದು, ಎಂಟು ವರ್ಷದ ಮನ್ವಿತ್ ಗೆ ಸಣ್ಣಪುಟ್ಟ ಗಾಯಗಳಾಗಿವೆ, 
ಸ್ಥಳಕ್ಕೆ ಕೆ.ಆರ್.ನಗರ ಪಟ್ಟಣ ಪೊಲೀಸರು ಬೇಟಿ ನೀಡಿ ಪರಿಶೀಲಿಸ ದೂರು ದಾಖಲಿಸಿ ಕೊಂಡು ಲಾರಿ ಚಾಲಕನ್ನು ಬಂದಿಸಿದ್ದಾರೆ.

click me!